ದೇವರ ಕೃಪೆಯನ್ನು ಅರಸುತ್ತಿರುವ ಅಧ್ಯಾತ್ಮ ಸಾಧಕನ ಹಾದಿಗೆ ಮುಖ್ಯ ಆಧಾರಸ್ಥಂಭವಾಗಿರುವುದು ಅಲ್ಲಾಹನ ನಾಮಸ್ಮರಣೆ(ದ್ಹಿಕ್ರ್) ಎಂದು ಹೇಳಲಾಗುತ್ತದೆ. ಅಲ್ಲಾಹನನ್ನು ಸತತವಾಗಿ ಧ್ಯಾನಿಸದೆ ಅವನ ಸಾನಿಧ್ಯವನ್ನು ಪಡೆಯುವುದು ಅಸಾಧ್ಯ. ಅವನನ್ನು ಧ್ಯಾನಿಸದಿದ್ದ ಬದುಕು ಶೂನ್ಯವೆಂದು ನಂಬಲಾಗುತ್ತದೆ. ಏಕಾಗ್ರತೆಯಿಂದ ಅವನ ಸ್ಮರಣೆ ಮಾಡುವಾಗ ದೇಹದಿಂದ ಹೊರಡುವ ಅಧ್ಯಾತ್ಮಶಕ್ತಿಯ ಅಲೆಗಳು ಸಾಧಕನ ಗುರಿಯನ್ನು ಸಾಧಿಸುವುದಕ್ಕೆ ಸಹಕಾರಿಯಾಗುತ್ತದೆ. ಹೀಗೆ ನಾಮಸ್ಮರಣೆಯ ಜಪವನ್ನು ಎಲ್ಲಿ ಬೇಕಾದರೂ, ಯಾವ ಸಮಯದಲ್ಲೂ ಮಾಡಬಹುದೆಂಬ ನಿಯಮವು ಸಾಧಕರಿಗೆ ಆಕರ್ಷಕವಾಗಿ ಪರಿಣಮಿಸಿದೆ.

ದೈನಂದಿನ ನಮಾಜು ಪ್ರಾರ್ಥನೆಯ ಜೊತೆಯಲ್ಲಿ ಅಥವಾ ಬಳಿಕವೂ ನಾಮಸ್ಮರಣೆಯನ್ನು ಮಾಡಬಹುದು. ದೇವರ ನಾಮಸ್ಮರಣೆಯನ್ನು ಅವನ ಸೃಷ್ಟಿಯಾದ ವಿಶ್ವದಲ್ಲಿ ಎಲ್ಲಿ ಬೇಕಾದರೂ ಮಾಡಬಹುದು. ಅವನ ನಾಮಸ್ಮರಣೆ ಮಾಡುತ್ತಿರುವ ಸಮಯದಲ್ಲಿ ವೈರಿಯ ಯಾವ ರೀತಿಯ ಹೊಂಚು, ಅಪಾಯವೂ ಬಾಧಿಸದು.

ದೇವರು ತನ್ನ ನಾಮಸ್ಮರಣೆಯಲ್ಲಿ ತಲ್ಲೀನನಾಗಿರುವವನಿಗೆ ಸಂಪೂರ್ಣ ರಕ್ಷಣೆಯನ್ನು ನೀಡುತ್ತಾನೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ದೇವರಿಗೆ ಭಯಭಕ್ತಿ ತೋರುವಾಗ ಹೊರತುಪಡಿಸಿ ದೇವರ ನಾಮದ ಜಪವನ್ನು ಸೂಫಿಗಳು ಅದರ ಪ್ರಾಮುಖ್ಯತೆ ಕಮ್ಮಿಯಾಗಬಹುದೆಂಬ ಕಾರಣಕ್ಕೆ ನಿಧಾನವಾಗಿ ಮಾಡುವುದಿದೆ. ಉಳಿದ ವೇಳೆಗಳಲ್ಲಿ ಸೂಫಿಗಳು ಕ್ಷಣಕ್ಷಣಕ್ಕೂ ದೇವರ ನಾಮಸ್ಮರಣೆಯನ್ನು ಮಾಡಿ ತಮ್ಮ ಮನದಲ್ಲಿ ಸುವಾಸನೆಯು ಸದಾ ತುಂಬಿರುವಂತೆ ನೋಡಿಕೊಳ್ಳುತ್ತಾರೆ.

ದೇವರ ನಾಮಸ್ಮರಣೆಯನ್ನು ಸೂಫಿಯ ಆಧ್ಯಾತ್ಮಿಕ ಆಹಾರವೆಂದು ಪರಿಗಣಿಸಲಾಗುತ್ತದೆ. ಹಲವು ದಿನಗಳ ಕಾಲ ಆಹಾರವಿಲ್ಲದೆ ಕಾಲಕಳೆದ ಹಜ್ರತ್ ಸಹ್ಲ್ ಅತ್ತುಸ್ತರಿಯವರ ಶಿಷ್ಯನೊಬ್ಬ ಒಂದು ದಿನ ಹಸಿವನ್ನು ತಾಳಲಾರದೆ, ‘ಗುರುಗಳೇ ಆಹಾರವೆಂದರೇನು?’ ಎಂದು ಕೇಳಿದ. ಹಜ್ರತ್ ಅತ್ತುಸ್ತರಿಯವರು ‘ಅಮರನಾದ ದೇವನ ನಾಮಸ್ಮರಣೆ’ ಎಂದು ಉತ್ತರಿಸಿದ್ದರು.

ತಾಯಿ ಮರಿಯಮ್ಮರ ಎದೆಹಾಲು ಕುಡಿದ ಪ್ರವಾದಿ ಮಗು ಸಮಾಧಾನವಾದಂತೆ, ಹೃದಯವು ದೇವರ ನಾಮಸ್ಮರಣೆಯಲ್ಲಿ ತೃಪ್ತಿಯನ್ನು ಪಡೆಯುತ್ತದೆ. ಇದು ಸಂಪೂರ್ಣ ಅಧ್ಯಾತ್ಮಕ ಸಾಧನೆಗೆ ಕಾರಣವಾಗುತ್ತದೆ. ‘ಶಾಶ್ವತವಾಗಿ ದೇವರ ನಾಮಸ್ಮರಣೆಯನ್ನು ಮಾಡುತ್ತಿರುವವನು ದೇವನ ಓರ್ವ ನಿಜವಾದ ಸಂಗಾತಿಯೆನಿಸಲ್ಪಡುತ್ತಾನೆ’ ಎಂದು ಹಜ್ರತ್ ರುಝ್ಬಿಹಾನ್ ಬಖ್ಲಿ ತಮ್ಮ ‘ಶಹರ್ ಎ ಶತೀಯ’ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಹದೀಸ್ ಎ ಖುದ್ಸಿಯಲ್ಲಿ ಅಲ್ಲಾಹನು ತನ್ನ ಸಂದೇಶದ ಮೂಲಕ ‘ಅನ ಜಾಲೀಸು ಮನ್ ದಕರಾನಿ, ನನ್ನ ನಾಮಸ್ಮರಣೆಯನ್ನು ಸತತವಾಗಿ ಮಾಡುತ್ತಿರುವವನ ಸಂಗಾತಿ ನಾನಾಗಿರುತ್ತೇನೆ’ ಎಂದು ಹೇಳಿರುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.