1. ಎಚ್. ವಿ. ಶಿವರಾಜು, ಹಿಟ್ಟನಹಳ್ಳಿ ಕೊಪ್ಪಲು, ಮಳವಳ್ಳಿ ತಾಲೂಕು, ಮಂಡ್ಯ ಜಿಲ್ಲೆ
ಅಮೆರಿಕ ದೇಶದ ಭೌಗೋಳಿಕ ವಿವರ, ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವವರ ಶೇಕಡಾವಾರು ಪ್ರಮಾಣ, ರೈತರಿಗೆ ಸಿಗುತ್ತಿರುವ ಸರ್ಕಾರದ ಸಬ್ಸಿಡಿಗಳ ವಿವರ ಹಾಗೂ ಒಬ್ಬ ರೈತನಿಗಿರುವ ಕನಿಷ್ಠ ಜಮೀನುಗಳ ಕುರಿತು ಮಾಹಿತಿ ನೀಡಿ.
ಅಮೆರಿಕ ಸಂಯುಕ್ತ ಸಂಸ್ಥಾನದ ಕೃಷಿ ಇಲಾಖೆ ಪ್ರಕಾರ, ಕೃಷಿಯನ್ನು ಮಾತ್ರವೇ ಉದ್ಯೋಗ ಎಂದು ದಾಖಲಿಸಿರುವವರ ಸಂಖ್ಯೆ 10 ಲಕ್ಷ. ಅಲ್ಲದೇ ಕೃಷಿಯೊಂದಿಗೆ ಮತ್ತೊಂದು ಉದ್ಯೋಗವನ್ನೂ ಮಾಡುತ್ತಿರುವವರ ಸಂಖ್ಯೆ ಕೂಡ 10 ಲಕ್ಷ ಇದೆ. ಸುಮಾರು 50 ಲಕ್ಷ ಜನ ಕೃಷಿ ಕ್ಷೇತ್ರಗಳಲ್ಲಿಯೇ ಜೀವಿಸುತ್ತಾರೆ. ದಿನಸಿ ಅಂಗಡಿ, ಸಾರಿಗೆ ಕ್ಷೇತ್ರಗಳಲ್ಲಿ ದುಡಿಯುವ ಅನೇಕ ನೌಕರರು ಹಾಗೂ ಅವರ ಕುಟುಂಬಗಳ ಸದಸ್ಯರೂ ಕೃಷಿಯ ಮೇಲೆಯೇ ಅವಲಂಬಿತರಾಗಿದ್ದಾರೆ. ಎಲ್ಲರೂ ಕೃಷಿ ಉತ್ಪನ್ನಗಳನ್ನೇ ತಿನ್ನುತ್ತಾರೆ. ಕೃಷಿ ಹಾಗೂ ಕೃಷಿಯ ವಿವಿಧ ರೂಪಗಳು ಅಮೆರಿಕ ಸಂಯುಕ್ತ ಸಂಸ್ಥಾನದ ನಿವ್ವಳ ದೇಶಿಯ ಉತ್ಪನ್ನದ ಶೇ.0.7ರಷ್ಟಿವೆ. 2009ನೇ ಸಾಲಿನಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಆರ್ಥಿಕತೆಗೆ ಕೃಷಿಯು 331 ಬಿಲಿಯ ಡಾಲರುಗಳನ್ನು ಸೇರಿಸಿದೆ.

ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ ನೀಡಲು ಅಮೆರಿಕ ಸಂಯುಕ್ತ ಸಂಸ್ಥಾನವು ಕೈಗೊಂಡಿರುವ ಕಾರ್ಯತಂತ್ರಗಳಲ್ಲಿ ಕೆಲವು ಇಂತಿವೆ: ಬೀಜ, ಪಶು ಆಹಾರ, ಗೊಬ್ಬರ, ಯಂತ್ರಗಳು, ನೀರಾವರಿ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿ ನೀಡಿಕೆ ಹೆಚ್ಚಿಸುವುದು; ಸಣ್ಣ ರೈತರಿಗೆ ಉತ್ಪಾದನೆ ಹೆಚ್ಚಳ ಹಾಗೂ ಕಾರ್ಯಚರಣೆ ವಿಸ್ತರಿಸಲು ಅಗತ್ಯ ಬಂಡವಾಳ ರೂಪಿಸಲು ಆರ್ಥಿಕ ಸೇವೆಗಳಿಗೆ ಸಂಪರ್ಕ ಒದಗಿಸುವಿಕೆ ಖಾತರಿಗೊಳಿಸುವುದು; ಮಣ್ಣಿನ ಬಳಕೆ ಸುಧಾರಣೆ, ಅಮೂಲ್ಯ ಜಲ ಸಂಪನ್ಮೂಲಗಳ ಸಂರಕ್ಷಣೆ, ಜೈವಿಕ ವೈವಿಧ್ಯ ರಕ್ಷಣೆ, ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆ ಮೂಲಕ ಉತ್ಪಾದಕತೆಯಲ್ಲಿ ಲಾಭದ ಸುಸ್ಥಿರತೆ ಖಾತರಿಗೊಳಿಸುವುದು. ನಮ್ಮ ವಿದೇಶಾಂಗ ನೀತಿಯಡಿ, ಅಮೆರಿಕ ಸಂಯುಕ್ತ ಸಂಸ್ಥಾನವು ಭಾರತದೊಂದಿಗೆ ಕೃಷಿ ಸಹಕಾರ ಹಾಗೂ ಆಹಾರ ಸುರಕ್ಷತೆಗೆ ಸಂಬಂಧಿಸಿದ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿದೆ. ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ವೆಬ್ಸೈಟುಗಳಿಗೆ ಭೇಟಿ ನೀಡಿ:
http://www.census.gov/compendia/statab/2012/tables/12s0841.pdf
http://www.epa.gov/oecaagct/ag101/demographics.html

2. ಕೆ. ರಾಜೇಂದ್ರ ಕುಮಾರ್ ಡಿ., ಮುದ್ನಾಳ, ಯಾದಗಿರಿ ತಾಲೂಕು
ಅಮೆರಿಕ ಸಂಯುಕ್ತ ಸಂಸ್ಥಾನವು ಭಾರತದಲ್ಲಿ ಉನ್ನತ ವ್ಯಾಸಂಗ ಮಾಡುವ ಭಾರತೀಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತದೆಯೇ? ಕೊಡುವುದಾದರೆ, ಯಾವ ಪರೀಕ್ಷೆ ಬರೆಯಬೇಕು ಹಾಗೂ ಅದರ ಮಾನದಂಡಗಳೇನು?
ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸಂಯುಕ್ತ ಸಂಸ್ಥಾನ ಸರ್ಕಾರ ಯಾವುದೇ ಬಗೆಯ ಶಿಷ್ಯವೇತನ ನೀಡುವುದಿಲ್ಲ. ಆದರೆ, ವೃತ್ತಿಜೀವನದ ಅಭಿವೃದ್ಧಿಗಾಗಿ ಸಂಶೋಧನೆಯನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೈಗೊಳ್ಳಲು ಭಾರತೀಯ ನಾಗರಿಕರಿಗೆ ಅನೇಕ ಫೆಲೋಷಿಪ್ಗಳು ಇವೆ.

ಅಮೆರಿಕ ಸಂಯುಕ್ತ ಸಂಸ್ಥಾನ ಪ್ರಾಯೋಜಿಸುವ ಅಂತರರಾಷ್ಟ್ರೀಯ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಅತ್ಯಂತ ಪ್ರಮುಖವಾದುದೆಂದರೆ ಫುಲ್ ಬ್ರೈಟ್ ಯೋಜನೆ. ಅಮೆರಿಕ ಹಾಗೂ ಇತರ ರಾಷ್ಟ್ರಗಳ ಜನರ ನಡುವಣ ಪರಸ್ಪರ ತಿಳಿವಳಿಕೆ ಹೆಚ್ಚಿಸಲು ಅನುವಾಗುವಂತೆ ಈ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಫುಲ್ ಬ್ರೈಟ್-ನೆಹರೂ ಯೋಜನೆಯನ್ನು ಅಮೆರಿಕ ಸಂಯುಕ್ತ ಸಂಸ್ಥಾನ-ಭಾರತ ಶೈಕ್ಷಣಿಕ ಪ್ರತಿಷ್ಠಾನ (The US-India Educational Foundation) ನಿರ್ವಹಿಸುತ್ತದೆ. ಇದಕ್ಕೆ ಎರಡೂ ಸರ್ಕಾರಗಳ ಬೆಂಬಲವೂ ಇದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಯೋಜನೆಯ ಪ್ರಮಾಣ ಮೂರು ಪಟ್ಟು ಹೆಚ್ಚಿದೆ. ಪ್ರತಿ ವರ್ಷ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಭಾರತದ ಸುಮಾರು 335 ವಿದ್ಯಾರ್ಥಿಗಳು ಹಾಗೂ ವಿದ್ವಾಂಸರು ಈ ಯೋಜನೆಯಲ್ಲಿ ಭಾಗವಹಿಸುತ್ತಾರೆ.

ಫುಲ್ ಬ್ರೈಟ್ ಯೋಜನೆಯಡಿ ವಿಶ್ವದಲ್ಲಿ ಅತಿ ಹೆಚ್ಚು ಶಿಕ್ಷಕ ವರ್ಗದ ವಿನಿಮಯ ಕಾರ್ಯವನ್ನು ಭಾರತದೊಂದಿಗೆ ನಡೆಸಲಾಗುತ್ತದೆ. ಭಾರತದೊಂದಿಗಿನ ಫುಲ್ ಬ್ರೈಟ್ ಯೋಜನೆ ಹಾಗೂ ಸಂಬಂಧಿಸಿದ ವಿನಿಮಯ ಕಾರ್ಯಕ್ರಮಗಳ ಲಾಭವನ್ನು 1950ರಿಂದ ಸುಮಾರು 17,000 ಅಮೆರಿಕನ್, ಭಾರತೀಯ ವಿದ್ಯಾರ್ಥಿಗಳು ಹಾಗೂ ವಿದ್ವಾಂಸರು ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಮುಂದಿನ ಕೊಂಡಿಯನ್ನು ಬಳಸಿ: ಡಿಡಿಡಿ.್ಠಜಿಛ್ಛಿ.ಟ್ಟಜ.ಜ್ಞಿ

3.ಚನ್ನಬಸವ ಪುತ್ತೂರ್ಕರ, ಚಿತ್ರದುರ್ಗ
ಅಮೆರಿಕದಲ್ಲಿ ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗಿನ ಶಿಕ್ಷಣ ವ್ಯವಸ್ಥೆ ಹೇಗಿದೆ ? ಅಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಮೂಲಕ ಶಿಕ್ಷಣ ನೀಡಲಾಗುತ್ತದೆಯೇ ? ಹಾಗಿದ್ದರೆ ಶುಲ್ಕಗಳ ವಿವರ ನೀಡಬಹುದೆ?
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಗ್ರಾಮಾಂತರ, ಪಟ್ಟಣ ಹಾಗೂ ನಗರ ಪ್ರದೇಶಗಳ ಮಕ್ಕಳು ಸರ್ಕಾರಿ, ಖಾಸಗಿ ಹಾಗೂ ಅನುಮೋದಿತ ಗೃಹಶಾಲೆಗಳಲ್ಲಿ ಕಲಿಯುತ್ತಾರೆ.

ರಾಜ್ಯಗಳಿಂದ ರಾಜ್ಯಗಳಿಗೆ ಕಡ್ಡಾಯ ಶಿಕ್ಷಣದ ವಯಸ್ಸು ಬದಲಾದರೂ, ಎಲ್ಲ ರಾಜ್ಯಗಳಲ್ಲಿಯೂ ಸಾರ್ವತ್ರಿಕ ಶಿಕ್ಷಣ ಕಡ್ಡಾಯ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣವು ಎಲ್ಲ ಆಸಕ್ತ ವಿದ್ಯಾರ್ಥಿಗಳಿಗೂ ಲಭ್ಯ. ಈ ಶಾಲೆಗಳನ್ನು ಸ್ಥಳೀಯ, ರಾಜ್ಯ ಹಾಗೂ ಫೆಡರಲ್ ಸರ್ಕಾರಗಳ ಸಂಪನ್ಮೂಲಗಳಿಂದ ನಡೆಸಲಾಗುತ್ತದೆ.

ಸರ್ಕಾರಿ ಶಾಲೆಗಳಿಗೆ ಲಭ್ಯವಾಗುವ ಆದಾಯದ ಪ್ರಮುಖ ಭಾಗ ಸ್ಥಳೀಯ ಆಸ್ತಿ ತೆರಿಗೆಯಾಗಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೆ ಲಭ್ಯವಾಗುವ ತಲಾ ಸಂಪನ್ಮೂಲ ಶಾಲೆಯಿಂದ ಶಾಲೆಗೆ ಬದಲಾಗುತ್ತದೆ. ತರಗತಿಯಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯೂ ಒಂದು ಶಾಲಾ ಜಿಲ್ಲೆಯಿಂದ ಮತ್ತೊಂದಕ್ಕೆ ಭಿನ್ನವಾಗಿರುತ್ತದೆ. ಖಾಸಗಿ ಶಾಲೆಗಳು ಬೇರೆಯದೇ ಆದ ಶುಲ್ಕ ವಿಧಿಸುತ್ತವೆ. ಬೋಧನಾ ರೀತಿ ಕೂಡ ಬೇರೆ ಬೇರೆಯಾಗಿದ್ದು, ಇದು ಆಯಾ ಶಾಲೆಯನ್ನು ಅವಲಂಬಿಸುತ್ತವೆ.

ಅಮೆರಿಕದಲ್ಲಿ ಶಿಕ್ಷಣದ ಪಠ್ಯಕ್ರಮ ಹಾಗೂ ಗುಣಮಟ್ಟವನ್ನು ರಾಜ್ಯಗಳ ಶಿಕ್ಷಣ ಇಲಾಖೆ ನಿಯಂತ್ರಿಸುತ್ತವೆ. ಮಕ್ಕಳ ಸರ್ವಾಂಗೀಣ ಶಿಕ್ಷಣಕ್ಕೆ ಒತ್ತು ನೀಡುವ ಜತೆಗೆ ಓದುವಿಕೆ, ಬರೆಯುವಿಕೆ, ಗಣಿತ ಸೇರಿದಂತೆ ವಿಜ್ಞಾನ ಹಾಗೂ ಸಮಾಜಶಾಸ್ತ್ರಗಳನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಇದಲ್ಲದೇ, ವಿದ್ಯಾರ್ಥಿಗಳಿಗೆ ದೃಶ್ಯ ಕಲೆ, ಸಂಗೀತ, ದೈಹಿಕ ಶಿಕ್ಷಣ ಹಾಗೂ ವಿದೇಶ ಭಾಷೆಗಳನ್ನೂ ಕಲಿಸಲಾಗುತ್ತದೆ.

ಶಾಲೆಗಳು ಎಲ್ಲ ಮಕ್ಕಳಿಗೂ ಸತತ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರ ಮೇಲೆ ನಿಗಾ ವಹಿಸಲು, ಅದನ್ನು ಖಾತರಿಪಡಿಸಿಕೊಳ್ಳಲು ಅಮೆರಿಕ ಸಂಯುಕ್ತ ಸಂಸ್ಥಾನದ ಸರ್ಕಾರವು ವಿವಿಧ ಗ್ರೇಡುಗಳಿಗೆ ರಾಷ್ಟ್ರದಾದ್ಯಂತ ಪರೀಕ್ಷೆಗಳ ಪ್ರಮಾಣೀಕರಣವನ್ನು ಅಗತ್ಯಗೊಳಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು
http:/www.ed.gov/ವೆಬ್ ಸೈಟಿಗೆ ಭೇಟಿ ನೀಡಿ.

4. ಡಾ.ಮಲ್ಲಿಕಾರ್ಜುನ ಕುಂಬಾರ, ರಾಜೂರ, ತಾಲ್ಲೂಕ- ರೋಣ(ಗದಗ ಜಿಲ್ಲೆ)
ಅಮೆರಿಕದ ಪ್ರಮುಖ ಜನಪದ ಕಲೆಯ ಬಗ್ಗೆ ತಿಳಿಸುವಿರಾ?
ಅಮೆರಿಕದಲ್ಲಿ ಅನೇಕ ಜನಪದ ಹಾಗೂ ಸಾಂಸ್ಕೃತಿಕ ಪರಂಪರೆಗಳಿವೆ. ವಲಸಿಗರು ತಮ್ಮ ಮೂಲದಿಂದ ತಂದಿರುವಂಥದ್ದು ಮಾತ್ರವಲ್ಲದೇ ಅಮೆರಿಕದ ಮೂಲ ನಿವಾಸಿಗಳ ಜನಪದ ಹಾಗೂ ಸಾಂಸ್ಕೃತಿಕ ಪರಂಪರೆಗಳನ್ನು ಅವು ಪ್ರತಿಬಿಂಬಿಸುತ್ತವೆ. ಕತೆಗಳು, ಸಂಗೀತ, ಕುಶಲ ಕಲೆ ಹಾಗೂ ಆಹಾರ ಪರಂಪರೆಗಳನ್ನು ಇವು ಒಳಗೊಂಡಿವೆ. ಜ್ಾ, ರಾಕ್ ಅಂಡ್ ರೋಲ್ಗಳಂತಹ ಅನೇಕ ಅಮೆರಿಕದ ಕಲೆಗಳು ಹಲವಾರು ಬೇರೆ ಬೇರೆ ದೇಶೀ ಸಂಸ್ಕೃತಿಗಳ ಸಂಗಮವಾಗಿವೆ. ಈ ಬಗೆಯ ಕಲೆಗಳನ್ನು ಮುಂದಿನ ಪೀಳಿಗೆಗಳಿಗಾಗಿ ಸಂಗ್ರಹಿಸಿ, ಸಂರಕ್ಷಿಸುವ ಕೆಲಸವನ್ನು ಸ್ಮಿತ್ ಸೋನಿಯನ್ ಸಂಸ್ಥೆ ಮಾಡುತ್ತಿದೆ. ಅಮೆರಿಕ ಜನಪದದ ಕುರಿತ ಹೆಚ್ಚಿನ ಮಾಹಿತಿಯನ್ನು ಸ್ಮಿತ್ ಸೋನಿಯನ್ ಮ್ಯೂಸಿಯಂ ವೆಬ್ಸೈಟಿನ್ಲ್ಲಲೂ ಪಡೆಯಬಹುದು: www.folklife.si.edu

5. ಪ್ರಮೋದ ಕುಮಾರ, ಬೆಂಗಳೂರು
ನನ್ನ ತಂಗಿಗೆ ಅಮೆರಿಕದಲ್ಲಿ ಎಂಬಿಎ ಮಾಡಿಸಬೇಕು ಎಂಬ ಯೋಜನೆ ಹಾಕಿಕೊಂಡಿದ್ದೇನೆ. ಅವಳಿಗೆ ಅಲ್ಲಿನ ವಾವಾರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾದೀತಾ? ಅದಕ್ಕೆ ಹಣ ಎಷ್ಟುಬೇಕಾಗುತ್ತದೆ?
ಭಾರತದಂತೆಯೇ ಅಮೆರಿಕ ಸಂಯುಕ್ತ ಸಂಸ್ಥಾನವೂ ಭೌಗೋಳಿಕವಾಗಿ ವಿಶಾಲ ಹಾಗೂ ವೈವಿಧ್ಯಮಯ ಪ್ರದೇಶವನ್ನು ಒಳಗೊಂಡಿರುವುದರಿಂದ ಹಲವಾರು ಬಗೆಯ ವಾತಾವರಣಗಳನ್ನು ಹೊಂದಿದೆ. ಉದಾಹರಣೆಗಾಗಿ, ಅಮೆರಿಕ ಸಂಸ್ಥಾನದ ಉತ್ತರದ ಭಾಗಗಳು ದಕ್ಷಿಣದ ಭಾಗಗಳಿಗೆ ಹೋಲಿಸಿದರೆ ಹೆಚ್ಚು ಶೀತಮಯ. ಇಲ್ಲಿ ಶೈಕ್ಷಣಿಕ ಗುರಿು ಸಾಧನೆಗಾಗಿ ಬರುವ ಲಕ್ಷಾಂತರ ವಿದೇಶಿ ವಿದ್ಯಾರ್ಥಿಗಳು ತುಂಬ ಸುಲಭವಾಗಿ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ.

ಬಹುತೇಕ ವಿಶ್ವವಿದ್ಯಾಲಯಗಳು ಎಂಬಿಎ ಪದವಿಗಳನ್ನು ಪಡೆಯಲು 2-3 ವರ್ಷಗಳ ವೃತ್ತಿ ಅನುಭವವನ್ನು ನಿಗದಿಪಡಿಸಿವೆ. ಅಲ್ಲದೇ, GMAT (Graduate Management Admission Test) and TOEFL (Test of English as a Foreign Language) / IELTS (International English Language Testingಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನೂ ಪರಿಗಣಿಸಲಾಗುತ್ತದೆ. ಪದವಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಮುಂದಿನ ಕೊಂಡಿಯನ್ನು ಬಳಸಿhttp://www.educationusa.info/5_steps_to_study/.

ಅಲ್ಲದೇ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಎಂಬಿಎ ಪದವಿಗಳನ್ನು ನೀಡುವ ಕಾಲೇಜುಗಳನ್ನು ಗುರುತಿಸಲು ಈ ಮುಂದಿನ ವೆಬ್ಸೈಟಿಗೂ ಭೇಟಿ ನೀಡಬಹುದು: www.petersons.com ವರ್ಷವೊಂದಕ್ಕೆ ಸುಮಾರು 15,000-35,000 ಅಮೆರಿಕನ್ ಡಾಲರುಗಳಷ್ಟು ಶುಲ್ಕ ನೀಡಬೇಕಾಗಬಹುದು. ಒಟ್ಟಾರೆ ವೆಚ್ಚ, ಬೋಧನಾ ಶುಲ್ಕ, ಇತರೆ ಶುಲ್ಕ ಹಾಗೂ ಜೀವನ ವೆಚ್ಚದ ಕುರಿತ ಹೆಚ್ಚಿನ ಮಾಹಿತಿಗಳನ್ನು ಆಯಾ ವಿಶ್ವವಿದ್ಯಾಲಯಗಳ ವೆಬ್ಸೈಟುಗಳಲ್ಲಿ “Office of the Financial Aid” ಅಥವಾ “Tuition and Fees” ವಿಭಾಗದಲ್ಲಿ ನೋಡಬಹುದು.

ಅತ್ಯುತ್ತಮವಾದ ಸಂಸ್ಥೆಯ ಆಯ್ಕೆಗೆ ನೆರವು ನೀಡಲು ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನವು ಅಮೆರಿಕ ಸಂಯುಕ್ತ ಸಂಸ್ಥಾನ-ಭಾರತ ಶೈಕ್ಷಣಿಕ ಪ್ರತಿಷ್ಠಾನ(The US-India Educational Foundation)ದಲ್ಲಿರುವ EducationUSA ಕೇಂದ್ರದಲ್ಲಿ ಲಭ್ಯ. ಹೆಚ್ಚಿನ ನೆರವಿಗಾಗಿUSIEFಅನ್ನು ದೂರವಾಣಿ ಸಂಖ್ಯೆ 044-28574423/4134 ಅಥವಾ ಈ ಮೇಲ್ usiefchennai@usief.org.in ಸಂಪರ್ಕಿಸಿ. ಫೇಸ್ಬುಕ್ ಪುಟದ ಮುಖಾಂತರವೂ www.Facebook.com/EducationUSAChennai ನಮ್ಮ ಸಂಪರ್ಕದಲ್ಲಿರಬಹುದು. ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ www.usief.org.in ವೆಬ್ಸೈಟನ್ನೂ ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.