1. ಅಮೆರಿಕ ದೇಶದ ಆಡಳಿತ ವ್ಯವಸ್ಥೆ ಹೇಗೆ ? ನಮ್ಮ ದೇಶಕ್ಕೆ ಹೋಲಿಸಿದರೆ ಅಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಇದೆ? ಭ್ರಷ್ಟಾಚಾರವನ್ನು ನಿಗ್ರಹಿಸಲು ಅಲ್ಲಿರುವ ವ್ಯವಸ್ಥೆ ಏನು? ಭ್ರಷ್ಟರಿಗೆ ಅಲ್ಲಿ ಸಿಗುವ ಶಿಕ್ಷೆ ಏನು?
ಭ್ರಷ್ಟಾಚಾರವನ್ನು ನಿಗ್ರಹಿಸಲು ಬಹುಸಂಸ್ಥೀಯ ತಂತ್ರಗಾರಿಕೆಯನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಅಳವಡಿಸಿಕೊಂಡಿದೆ. ಈ ವಿಧಾನದ ಒಂದು ಅಂಶವನ್ನು ಸರ್ಕಾರಿ ನೀತಿಸಂಹಿತೆ ಕಚೇರಿಯು(Office of Government Ethics –OGE) ಪ್ರತಿನಿಧಿಸುತ್ತದೆ (ನೋಡಿ www.usoge.gov). ಕಾರ್ಯಾಂಗದ ನೀತಿ ಸಂಹಿತೆಯ ಮಟ್ಟವನ್ನು ಸ್ಥಾಪಿಸಲು, ಸರ್ಕಾರದಲ್ಲಿ ಪಾರದರ್ಶಕತೆಯನ್ನು ಖಚಿತ ಪಡಿಸಲು ಹಾಗೂ ಉತ್ತಮ ಆಡಳಿತಕ್ಕೆ ಉತ್ತೇಜನ ನೀಡಲು, ಸರ್ಕಾರಿ ನೀತಿ ಸಂಹಿತೆ ಕಚೇರಿಯು ನಿರ್ವಹಣೆ ಹಾಗೂ ಆಯವ್ಯಯ ಕಚೇರಿ (Office of Management and Budget), ಸರ್ಕಾರಿ ಉತ್ತರದಾಯಿತ್ವ ಕಚೇರಿ(Government Accountability Office) ಹಾಗೂ ನ್ಯಾಯಾಂಗ ಇಲಾಖೆಗಳೊಂದಿಗೆ ಸಹಕರಿಸುತ್ತದೆ.

ವಿಶ್ವಸಂಸ್ಥೆ, ಅಮೆರಿಕನ್ ರಾಜ್ಯಗಳ ಸಂಸ್ಥೆ(the Organization of American States), ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆ(Organization for Economic Co-operation and Development -OECD ), ಹಾಗೂ ಇನ್ನಿತರ ಬಹುಪಕ್ಷೀಯ ಸಂಸ್ಥೆಗಳ ಬೆಂಬಲವನ್ನೂ ಪಡೆದಿರುವ ಲಂಚಗುಳಿತನ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸುವ ಅಭಿಯಾನದ ನೇತೃತ್ವವನ್ನು ಅಮೆರಿಕ ಸಂಯುಕ್ತ ಸಂಸ್ಥಾನ ವಹಿಸಿದೆ. ಪರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆರಿಕಾದ ಕಂಪೆನಿಗಳು ಲಂಚ ನೀಡುವುದನ್ನು 1977ರ ವಿದೇಶಿ ಭ್ರಷ್ಟಾಚಾರ ಪದ್ಧತಿ ಕಾಯ್ದೆ (The 1977 Foreign Corrupt Practices Act -FCPA)ಯು ನಿಷೇಧಿಸುತ್ತದೆ.
ಡಾ ಕೆ.ಒ.ನರಸಿಂಹಮೂರ್ತಿ, ಕನ್ನಂಗಿ, ತೀರ್ಥಹಳ್ಳಿ (ತಾ), ಶಿವಮೊಗ್ಗ (ಜಿಲ್ಲೆ)

2. ಅಮೆರಿಕದಲ್ಲಿ ಪೂರ್ವ ಪ್ರಾಥಮಿಕದಿಂದ ಹಿಂದಿ ಕಲಿಕೆ ಕಡ್ಡಾಯವಂತೆ ಹೌದಾ?
ಅಮೆರಿಕಾದ ಅನೇಕ ಶಾಲೆಗಳ ಪದವಿ ಪಠ್ಯಕ್ರಮದಲ್ಲಿ ವಿದೇಶಿ ಭಾಷೆ ಬೋಧನೆ ಅಗತ್ಯವಾದ ಭಾಗವಲ್ಲ. ಆದರೆ, ಅನೇಕ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ವಿದೇಶಿ ಭಾಷೆಯನ್ನು ಕಲಿಯುವ ಆಯ್ಕೆ ನೀಡುತ್ತವೆ.

ಪ್ರೌಢಶಾಲೆಗಿಂತಲೂ ಪೂರ್ವದಲ್ಲಿಯೇ ಭಾಷೆಯೊಂದರ ಕಲಿಕೆ ನಿರ್ಧಾರವಾಗವುದು ಆ ಶಾಲೆಯು ಸರ್ಕಾರಿ ಶಾಲೆಯೋ ಅಥವಾ ಖಾಸಗಿ ಶಾಲೆಯೋ ಎಂಬುದನ್ನು ಅವಲಂಬಿಸಿರುತ್ತದೆ. ಅಲ್ಲದೇ ಅದು ಅಂತಾರಾಷ್ಟ್ರೀಯ ಶಾಲೆಯೋ ಅಥವಾ ಅದು ಯಾವ ಶೈಕ್ಷಣಿಕ ಜಿಲ್ಲೆಗೆ ಸೇರುತ್ತದೆ ಎಂಬ ಅಂಶಗಳೂ ಶಾಲೆಯ ಭಾಷಾ ಬೋಧನೆಯನ್ನು ನಿರ್ಧರಿಸುತ್ತವೆ. ಕೆಲ ದ್ವಿಭಾಷಾ ಶಾಲೆಗಳಿದ್ದು, ಅವುಗಳಲ್ಲಿ ಇಂಗ್ಲೀಷ್ ಹಾಗೂ ಇನ್ನೊಂದು ಭಾಷೆಯನ್ನೂ ಬೋಧಿಸಲಾಗುತ್ತದೆ.

ಕೆಲ ಶೈಕ್ಷಣಿಕ ಜಿಲ್ಲೆಗಳಲ್ಲಿ ಎರಡನೇ ಭಾಷೆಯನ್ನು ಕಲಿಯುವುದು ಕಡ್ಡಾಯ. ಆದರೆ, ಪ್ರತಿ ಜಿಲ್ಲೆ ಹಾಗೂ ರಾಜ್ಯಗಳು ಬೇರೆ ಬೇರೆ ಮಾನದಂಡಗಳನ್ನು ನಿಗದಿ ಪಡಿಸಿವೆ. ಅಮೆರಿಕದ ಶಾಲೆಗಳಲ್ಲಿ ಹೆಚ್ಚಾಗಿ ಕಲಿಸಲಾಗುವ ಭಾಷೆಗಳೆಂದರೆ ಫ್ರೆಂಚ್ ಹಾಗೂ ಸ್ಪ್ಯಾನಿಷ್. ಇವುಗಳೊಂದಿಗೆ ಇತರ ಭಾಷೆಗಳನ್ನು ಶಾಲೆಗಳು ಕಲಿಸಬಹುದಾದರೂ, ಅದು ಆಯಾ ಶಾಲೆಯ ಮೇಲೆ ಅವಲಂಬಿತವಾಗಿರುತ್ತದೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಲವು ಸಂಸ್ಧೆಗಳು ಹಿಂದಿಯೂ ಸೇರಿದಂತೆ ಹಲವಾರು ಭಾಷೆಗಳನ್ನು ಕಲಿಯುವ ಅವಕಾಶವನ್ನು ಒದಗಿಸುತ್ತವೆ.

ಭಾರೀ ಸಂಖ್ಯೆಯ ವೈವಿಧ್ಯಮಯ ವಲಸಿಗರನ್ನು ಹೊಂದಿರುವ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಈ ವಲಸಿಗರ ಸಮುದಾಯಗಳು ಶಾಲಾ ಶಿಕ್ಷಣದಾಚೆಗೆ, ಅಂದರೆ ಧಾರ್ಮಿಕ ಸಂಸ್ಥೆಗಳು, ಸಾಂಸ್ಕೃತಿಕ ಕೇಂದ್ರಗಳಲ್ಲಿ ಆಯಾ ದೇಶಗಳ ಭಾಷೆ ಕಲಿಸಲು ಖಾಸಗಿ ತರಗತಿಗಳನ್ನು ನಡೆಸುತ್ತವೆ.
ಮಹೇಶ್, ಕಾರಂಜಾ ಕಾಲೋನಿ, ಭಾಲೆಂಬ್ರಾ, ಭಾಲ್ಕಿ ತಾಲೂಕು, ಬೀದರ್
ಡಾ ಕೆ.ಬಿ.ಬ್ಯಾಳಿ, ಕುಕನೂರು, ಕೊಪ್ಪಳ ಜಿಲ್ಲೆ

3. ನಾನು ಕರ್ನಾಟಕದ ಮುಕ್ತ ವಿಶ್ವವಿದ್ಯಾಲಯದಿಂದ ಏರೋನಾಟಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಶೇ 76 ಅಂಕಗಳೊಂದಿಗೆ ಪದವಿ ಪಡೆದಿದ್ದೇನೆ. ನಾನು ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಏರೋ ಸ್ಪೇಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡಬೇಕೆಂದಿದ್ದೇನೆ. ಅದಕ್ಕೋಸ್ಕರ ಅಲ್ಲಿನ ಖರ್ಚು ವೆಚ್ಚ ಮತ್ತು ಶಿಕ್ಷಣಕ್ಕೆ ಎಷ್ಟು ಹಣ ಬೇಕಾಗಬಹುದು ಎಂಬುದನ್ನು ದಯವಿಟ್ಟು ತಿಳಿಸಬೇಕು. ಅಲ್ಲಿನ ವಾತಾವರಣ ಹಾಗೂ ವಸತಿಯ ಬಗ್ಗೆಯೂ ತಿಳಿಸಬೇಕು.
ಬೋಧನಾ ಶುಲ್ಕವೂ ಸೇರಿದಂತೆ ಇತರ ಶುಲ್ಕಗಳು ಹಾಗೂ ಅಲ್ಲಿನ ಜೀವನ ವೆಚ್ಚದ ಕುರಿತ ವಿಶ್ವವಿದ್ಯಾಲಯದ ವೆಬ್ ಸೈಟಿನ ಆರ್ಥಿಕ ನೆರವು ಕಚೇರಿ((( ((Office of Financial Aid) ವಿಭಾಗದಲ್ಲಿ ಲಭ್ಯ. ಪ್ರವೇಶಾರ್ಹತೆ ಹಾಗೂ ಅರ್ಜಿ ಕುರಿತ ಮಾರ್ಗದರ್ಶನವೂ ವಿಶ್ವವಿದ್ಯಾಲಯದ ವೆಬ್ ಸೈಟಿನಲ್ಲಿ ಲಭ್ಯ. ನ್ಯೂಯಾರ್ಕ್ ನಗರದ ವಾತಾವರಣ ಹಾಗೂ ಹವಾಗುಣ ಕುರಿತು ಈ ಮುಂದಿನ ವೆಬ್ ಸೈಟಿಗೆ http://library. columbia.edu/eguides/nyc.htmlಭೇಟಿ ಕೊಡಿ. ಬೇರೆ ಶಾಲೆಗಳಿರುವ ಪ್ರದೇಶದ ಹವಾಗುಣವನ್ನು ತಿಳಿಯಲು ಈ ಮುಂದಿನ ವೆಬ್ ಸೈಟಿಗೆ http://www.discoveramerica. com/ ಭೇಟಿ ನೀಡಿ.

ಪ್ರವೇಶದ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಅನೇಕ ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಶಾಲೆಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅಮೆರಿಕ-ಭಾರತ ಶೈಕ್ಷಣಿಕ ಪ್ರತಿಷ್ಠಾನದ ಭಾಗವಾಗಿರುವ EducationUSAಯು ಸರಿಯಾದ ಶಾಲೆಯನ್ನು ಆಯ್ಕೆ ಮಾಡಲು ಹಾಗೂ ಅಮೆರಿಕ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತ ನೆರವು ನೀಡುತ್ತದೆ. ಬೆಂಗಳೂರು ಹಾಗೂ ಚೆನ್ನೈಗಳಲ್ಲಿ Education USAಯ ಕಚೇರಿಗಳಿವೆ. ಬೆಂಗಳೂರಿನ ಕೇಂದ್ರವು ಯಾಶ್ನಾ ಟ್ರಸ್ಟಿನಲ್ಲಿ (www.yashnatrust.org..) ಕೆಲಸ ಮಾಡುತ್ತದೆ. ಅಥವಾ ಅವರನ್ನು ದೂರವಾಣಿ ಸಂಖ್ಯೆ 080-41251922 ಮುಖಾಂತರವೂ ಸಂಪರ್ಕಿಸಬಹುದು.

ಚೆನ್ನೈನಲ್ಲಿ, ಅಮೆರಿಕ-ಭಾರತ ಶೈಕ್ಷಣಿಕ ಪ್ರತಿಷ್ಠಾನವನ್ನು ದೂರವಾಣಿ 044-28574423/4131 ಇಲ್ಲವೇ usiefchennai @usief.org.inಮುಖಾಂತರವೂ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಯನ್ನೂ ಈ ಮುಂದಿನ ಕೊಂಡಿಗಳಿಂದಲೂ ಪಡೆಯಲು ಪ್ರಯತ್ನಿಸಿ;www.Facebook.com/EducationUSA Chennai/www.EducationUSA.state.gov ಮತ್ತು www.usief.org.in.

4. ಅಮೆರಿಕದಲ್ಲಿ ಸೈನಿಕರನ್ನು ಆಯ್ಕೆ ಮಾಡುವ ವಿಧಾನವನ್ನು ತಿಳಿಸಿ. ವಿದ್ಯಾರ್ಹತೆ, ದೈಹಿಕ ಮಟ್ಟ, ದೈಹಿಕ ಪಟುತ್ವ ಪರೀಕ್ಷೆಗಳ ಕುರಿತೂ ಮಾಹಿತಿ ನೀಡಿ.
ಅಮೆರಿಕದ ಸೇನಾ ಪಡೆಯು ಸಂಪೂರ್ಣವಾಗಿ ಸ್ವ-ಇಚ್ಚೆಯಿಂದ ಸೇವೆ ಸಲ್ಲಿಸುವವರನ್ನು ಹೊಂದಿದೆ. ಅಂದರೆ, ಸೇನೆಯಲ್ಲಿ ಸೇವೆ ಸಲ್ಲಿಸಲು ಪುರುಷರು ಹಾಗೂ ಸ್ತ್ರೀಯರು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಸೇನಾ ಪಡೆಯನ್ನು ಸೇರಬಯಸುವವರು, ನೇಮಕಾತಿ ಕಚೇರಿಯಲ್ಲಿಯ ನೇಮಕಾತಿ ಅಧಿಕಾರಿಯನ್ನು ಭೇಟಿ ಮಾಡಬಹುದು. ಭೂಸೇನೆ, ವಾಯುಸೇನೆ, ನೌಕಾದಳ, ಮರೈನ್ ಕೋರ್ ಅಥವಾ ಕೋಸ್ಟಲ್ ಗಾರ್ಡ್ ಪಡೆಗಳನ್ನು ತಮ್ಮ ವೈಯಕ್ತಿಕ ಆಸಕ್ತಿಯ ಮೇರೆಗೆ ಆಯ್ಕೆ ಮಾಡಿಕೊಳ್ಳಬಹುದು.

ನೇಮಕಾತಿ ಅಧಿಕಾರಿಯ ಸಂದರ್ಶನದ ನಂತರ, ಅರ್ಜಿದಾರರು ಲಿಖಿತ ಪರಿಕ್ಷೆಯನ್ನು ತೆಗೆದುಕೊಳ್ಳಬೇಕು. ಸೇನಾಪಡೆಯ ವೈವಿಧ್ಯಮಯ ವೃತ್ತಿಗಳಲ್ಲಿ ಯಾವುದು ಸೂಕ್ತ ಎಂಬುದನ್ನು ಈ ಪರೀಕ್ಷೆಯು ನಿರ್ಧರಿಸುತ್ತದೆ. ಆ ಬಳಿಕ ದೈಹಿಕ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಪ್ರೌಢಶಾಲೆಯ ಪದವಿ ಅಥವಾ ಸೂಕ್ತ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಲ್ಲದೇ, ದೇಶಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಬಲ್ಲರು ಎಂಬುದನ್ನು ಖಚಿತ ಪಡಿಸಿಕೊಳ್ಳಲು ಹಿನ್ನೆಲೆಯನ್ನೂ ಪರೀಕ್ಷಿಸಲಾಗುತ್ತದೆ.

ಈ ಎಲ್ಲ ಪರೀಕ್ಷೆಗಳ ಬಳಿಕ ತನ್ನ ಅರ್ಹತೆಗನುಗುಣವಾದ ಕೆಲಸವನ್ನು ಚರ್ಚಿಸಿ, ಆಯ್ದುಕೊಳ್ಳಲು ಸೇನಾ ಪಡೆಯ ಸಲಹಾಗಾರರನ್ನು ಅರ್ಜಿದಾರ ಭೇಟಿಯಾಗಬೇಕಾಗುತ್ತದೆ. ಲಭ್ಯವಿರುವ ಆಯ್ಕೆಗಳು ಹಾಗೂ ಸೇನಾ ಜೀವನದ ಕುರಿತು ಮಾಹಿತಿಗಳನ್ನು ಸಲಹಾಗಾರರು ನೀಡುತ್ತಾರೆ. ಈ ಹಂತದವರೆಗೂ ಸೇನೆ ಸೇರುವ ಕುರಿತು ಅರ್ಜಿದಾರರ ತನ್ನ ಅಂತಿಮ ಬದ್ಧತೆಯನ್ನು ನೀಡಿರುವುದಿಲ್ಲ. ಕರಾರು ಪತ್ರಕ್ಕೆ ಸಹಿ ಹಾಕಿ, ಸೇನೆ ಸೇರುವ ಕುರಿತು ಪ್ರತಿಜ್ಞೆ ವಿಧಿ ಸ್ವೀಕರಿಸಿದ ಬಳಿಕವೇ ಅಮೆರಿಕ ಸಂಯುಕ್ತ ಸಂಸ್ಥಾನದ ಸೇನೆಗೆ ಸೇವೆ ಸಲ್ಲಿಲು ಬದ್ಧತೆಯನ್ನು ವ್ಯಕ್ತಪಡಿಸಿದಂತೆ.
ಮಾರುತಿ ತೋಟದ್

5. ನಾರ್ತ್ ಈಸ್ಟ್ರನ್ ರಾಜ್ಯ ವಿಶ್ವವಿದ್ಯಾಲಯ, ಒಕ್ಲಾಹಾಮದ ಸಹಯೋಗದೊಂದಿಗೆ ಶೇಷಾದ್ರಿಪುರಂ ಅಕಾಡೆಮಿ ಫಾರ್ ಗ್ಲೋಬಲ್ ಎಕ್ಸಲೆನ್ಸ್ ಸಂಸ್ಥೆಯು ನಡೆಸುತ್ತಿರುವ ಗ್ಲೋಬಲ್ ಎಂಬಿಎ ಕೋರ್ಸನ್ನು ನಾನು ಮಾಡುತ್ತಿದ್ದೇನೆ. ದಯವಿಟ್ಟು ವಿದ್ಯಾರ್ಥಿ ವಿಸಾ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿ. ವಿದ್ಯಾರ್ಥಿಗಳಿಂದ ಯಾವ ಬಗೆಯ ಮಾಹಿತಿಯನ್ನು ದೂತಾವಾಸಗಳಲ್ಲಿ ನಿರೀಕ್ಷಿಸಲಾಗುತ್ತದೆ.

ತಾವು F1 ವಿದ್ಯಾರ್ಥಿ ವಿಸಾಕ್ಕೆ ಅರ್ಜಿ ಸಲ್ಲಿಸಬೇಕೆಂದರೆ, ತಮಗೆ ಪ್ರವೇಶ ನೀಡಲು ಒಪ್ಪಿರುವ ಅಮೆರಿಕದ ವಿಶ್ವವಿದ್ಯಾಲಯ ದಿಂದ I-20 ಅರ್ಜಿಯನ್ನು ಪಡೆದಿರಬೇಕು. ಒಕ್ಲಾಹಾಮದಲ್ಲಿರುವ ನಾರ್ತ್ ಈಸ್ಟ್ರನ್ ರಾಜ್ಯ ವಿಶ್ವವಿದ್ಯಾಲಯದೊಂದಿಗೆ ಶೇಷಾದ್ರಿಪುರಂ ಅಕಾಡೆಮಿ ಆಫ್ ಗ್ಲೋಬಲ್ ಎಕ್ಸಲೆನ್ಸ್ ಸಹಯೋಗ ಹೊಂದಿದ್ದರೆ, I-20ಅರ್ಜಿಯು ನಾರ್ತ್ ಈಸ್ಟ್ರನ್ ವಿಶ್ವವಿದ್ಯಾಲಯದಿಂದ ಬರಬೇಕು. ನೀವು ಹಾಜರಾಗುತ್ತಿರುವ ವಿಶ್ವವಿದ್ಯಾಲಯ, ಅಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ, ಹಾಗೂ ಬೋಧನಾ ಶುಲ್ಕವನ್ನು ಭರಿಸುವ ಬಗೆ ಇತ್ಯಾದಿ ಮಾಹಿತಿಗಳನ್ನು ಈ ಅರ್ಜಿಯು ಹೊಂದಿರುತ್ತದೆ.

ತಮ್ಮ ಬೆರಳಚ್ಚು ನೀಡಲು ಹಾಗೂ ಚೆನ್ನೈನ ಅಮೆರಿಕ ಸಂಯುಕ್ತ ಸಂಸ್ಥಾನದ ದೂತಾವಾಸದಲ್ಲಿ ವಿಸಾ ಸಂದರ್ಶನಕ್ಕಾಗಿ ತಾವು ಸೂಕ್ತ ಸಮಯವನ್ನು ನಿಗದಿ ಪಡಿಸಿಕೊಳ್ಳಬೇಕು. ತಮ್ಮ ವಿಸಾ ಸಂದರ್ಶನದ ದಿನಾಂಕ ಹಾಗೂ ಸಮಯವನ್ನು ನಿಗದಿ ಪಡಿಸಿ ಹಾಗೂ ವಿಸಾ ಅರ್ಜಿಯನ್ನು www.ustraveldocs.com/in ವೆಬ್ ಸೈಟಿನಲ್ಲಿ ಭರ್ತಿ ಮಾಡಬಹುದು. ಸಂದರ್ಶನ ಸಂದರ್ಭದಲ್ಲಿ ತಮ್ಮ I-20, SEVIS ಶುಲ್ಕ ರಸೀತಿ, ಭರ್ತಿ ಮಾಡಿದ DS-160 ಅರ್ಜಿ, ನಿಮ್ಮ ಪಾಸ್ ಪೋರ್ಟ್, ನಿಮ್ಮ ಶೈಕ್ಷಣಿಕ ದಾಖಲೆಗಳು ಹಾಗೂ ಅಂಕ ಪಟ್ಟಿಗಳನ್ನು ತರಬೇಕು.

ಅಮೆರಿಕದಲ್ಲಿ ಅಧ್ಯಯನ ಮಾಡಲು ಸಾಕಷ್ಟು ಆಸಕ್ತಿಯನ್ನು ಹೊಂದಿರುವುದನ್ನು ಹಾಗೂ ಆ ಶಿಕ್ಷಣ ಪಡೆಯಲು ತಗಲುವ ವೆಚ್ಚವನ್ನು ಭರಿಸುವ ಸಾಮರ್ಥ್ಯವನ್ನು ತಾವು ವಿಸಾ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಅಲ್ಲದೇ, ವ್ಯಾಸಂಗದ ಬಳಿಕ ಸ್ವದೇಶಕ್ಕೆ ಹಿಂದಿರುಗುವ ಇಂಗಿತವನ್ನು ವಿಸಾ ಅಧಿಕಾರಿಗಳಿಗೆ ತಿಳಿಸಿಕೊಡಬೇಕು. ಅಮೆರಿಕದಲ್ಲಿ ಉನ್ನತ ವ್ಯಾಸಂಗದ ಕುರಿತ ಹೆಚ್ಚಿನ ಮಾಹಿತಿಗಾಗಿ ಅಮೆರಿಕ-ಭಾರತ ಶೈಕ್ಷಣಿಕ ಪ್ರತಿಷ್ಠಾನದ www.usief.org.in ವೆಬ್ ಸೈಟಿಗೆ ಭೇಟಿ ನೀಡಿ.
ರೋಹಿಣಿ ಚನ್ನಪ್ಪ ಎಸ್. ಆರ್. ದೇವನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.