ನವದೆಹಲಿ: ಭವಿಷ್ಯದಲ್ಲಿ ತೀವ್ರ ನೀರಿನ ಸಮಸ್ಯೆ ಎದುರಿಸಬಹುದಾದ ವಿಶ್ವದ ಹತ್ತು ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಸೇರಿದೆ.

ದೆಹಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್‌ಮೆಂಟ್ (ಸಿಎಸ್‌ಇ) ಪ್ರಕಟಿಸುವ ‘ಡೌನ್ ಟು ಅರ್ಥ್’ ಪತ್ರಿಕೆ ಈ ಪಟ್ಟಿಯನ್ನು ಸಿದ್ಧಪಡಿಸಿದೆ.

ಚೀನಾದ ಬೀಜಿಂಗ್, ಮೆಕ್ಸಿಕೊ, ಕೀನ್ಯಾದ ನೈರೋಬಿ, ಪಾಕಿಸ್ತಾನದ ಕರಾಚಿ, ಅಫ್ಗಾನಿಸ್ತಾನದ ಕಾಬೂಲ್, ಟರ್ಕಿಯ ಇಸ್ತಾಂಬುಲ್ ಈ ಪಟ್ಟಿಯಲ್ಲಿವೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಇದೇ ಜೂನ್–ಜುಲೈ ವೇಳೆಗೆ ಎಲ್ಲ ನಲ್ಲಿಗಳು ನೀರಿಲ್ಲದೆ ಬರಿದಾಗಲಿವೆ. ಬೆಂಗಳೂರು ಮತ್ತು ವಿಶ್ವದ ಇತರ 9 ನಗರಗಳಿಗೂ ಇದೇ ಪರಿಸ್ಥಿತಿ ಒದಗಲಿದೆ ಎಂದು ವರದಿ ಹೇಳಿದೆ. ನೀರನ್ನು ಮಿತವಾಗಿ ಬಳಸುವ ಜತೆಗೆ ಜಲಸಂಪನ್ಮೂಲಗಳನ್ನು ಸಂರಕ್ಷಿಸುವ ಬಗ್ಗೆ ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳಬೇಕಿದೆ ಎಂದು ಸಲಹೆ ಮಾಡಿದೆ.

ವಿಶ್ವ ಜಲದಿನದ ಪ್ರಯುಕ್ತ ಮಂಗಳವಾರ ಸಿಎಸ್‌ಇ ಬಿಡುಗಡೆ ಮಾಡಿರುವ ವರದಿಯಲ್ಲಿ ಬೆಂಗಳೂರಿಗರನ್ನು ಬೆಚ್ಚಿಬೀಳಿಸುವ ಅನೇಕ ಸಂಗತಿಗಳಿವೆ.

*ಬೆಂಗಳೂರು ಜನಸಂಖ್ಯೆ ಪ್ರತಿವರ್ಷ ಶೇ 3.5 ರಷ್ಟು ಹೆಚ್ಚಾಗುತ್ತಿದ್ದು 2031ರ ವೇಳೆಗೆ ಎರಡು ಕೋಟಿ ತಲುಪಬಹುದು

*ಎರಡು ದಶಕಗಳಲ್ಲಿ ಬೆಂಗಳೂರಿನ ಅಂತರ್ಜಲಮಟ್ಟ 10–12 ಮೀಟರ್‌ನಿಂದ 76–91 ಮೀಟರ್‌ಗೆ ಕುಸಿದಿದೆ.

*30 ವರ್ಷಗಳಲ್ಲಿ ಕೊಳವೆಬಾವಿಗಳ ಸಂಖ್ಯೆ ಐದು ಸಾವಿರದಿಂದ 4.50 ಲಕ್ಷಕ್ಕೆ ಹೆಚ್ಚಿದೆ.

*ಶಿಸ್ತುಬದ್ಧ ಯೋಜನೆ ಇಲ್ಲದೆ ಅವೈಜ್ಞಾನಿಕವಾಗಿ ನಗರದ ಬೆಳವಣಿಗೆ ಮತ್ತು ಹೆಚ್ಚಿದ ಅತಿಕ್ರಮಣದಿಂದಾಗಿ ಕೆರೆಗಳ ಸಂಖ್ಯೆ ಶೇ 79ರಷ್ಟು ಕುಸಿದಿವೆ.

*1973ರಲ್ಲಿ ಕೇವಲ ಶೇ 8ರಷ್ಟಿದ್ದ ಕಟ್ಟಡ ನಿರ್ಮಾಣ ಪ್ರದೇಶ ಈಗ ಶೇ 77ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.