ಟ್ರ್ಯಾಕ್ 2 ರಿಯಾಲಿಟಿ ಸಂಸ್ಥೆ ನಡೆಸಿದ್ದ ‘ಕನ್‌ಸ್ಯೂಮರ್ ಕಾನ್ಫಿಡೆನ್ಸ್ ರಿಪೋರ್ಟ್’ ಪ್ರಕಾರ, ಶೋಭಾ ಡೆವಲಪರ್ಸ್ ರಾಷ್ಟ್ರೀಯ ಮಟ್ಟದಲ್ಲಿ ಗೃಹ ಖರೀದಿದಾರರ ನೆಚ್ಚಿನ ಆಯ್ಕೆಯ ಬ್ರಾಂಡ್‌ಗಳಲ್ಲಿ ಮೊದಲ ಸ್ಥಾನ ಪಡೆದಿದೆ.

ಸಮಯಕ್ಕೆ ಸರಿಯಾಗಿ ಮನೆಗಳ ವಿತರಣೆ, ನಿರ್ಮಾಣ ಗುಣಮಟ್ಟ, ಹೊಂದಾಣಿಕೆಯ ಭರವಸೆಗಳು, ಹಣಕ್ಕೆ ತಕ್ಕ ಬೆಲೆ, ನಂಬಿಕೆ ಮತ್ತು ಪಾರದರ್ಶಕತೆ, ಸಂಬಂಧ ನಿರ್ವಹಣೆ, ಬ್ರಾಂಡ್ ಖ್ಯಾತಿ, ಸುರಕ್ಷಿತ ಹೂಡಿಕೆ ಮತ್ತು ಸೌಲಭ್ಯಗಳು ಇವಿಷ್ಟರಲ್ಲಿಯೂ ಕಂಪನಿ ಮುನ್ನಡೆ ಸಾಧಿಸಿದೆ. ಈ ಮೂಲಕ ಮೊದಲ ಸ್ಥಾನವನ್ನು ಶೋಭಾ ಡೆವಲಪರ್ಸ್ ನಾಲ್ಕನೇ ಬಾರಿಯೂ ಕಾಯ್ದುಕೊಂಡಿದೆ.

ದೇಶದಾದ್ಯಂತ 500 ಡೆವಲಪರ್‌ಗಳು ಸ್ಪರ್ಧಿಸಿದ್ದರು. ಅದರಲ್ಲಿ 412 ಅರ್ಜಿಗಳು ವಿಶ್ವಾಸಾರ್ಹತೆಗೆ ಅರ್ಹವಾಗಿಲ್ಲವೆಂದು ತಿರಸ್ಕರಿಸಲಾಯಿತು. ವಿಶ್ವಾಸಾರ್ಹ ಮಟ್ಟದಲ್ಲಿ ಗ್ರಾಹಕರು ಕೇವಲ 88 ಡೆವಲಪರ್ಸ್‌ಗಳನ್ನು ಮಾತ್ರ ಆಯ್ಕೆ ಮಾಡಿದ್ದರು. 20 ನಗರಗಳಲ್ಲಿ 10 ಸಾವಿರ ಗ್ರಾಹಕರನ್ನು ಗುರಿಯಾಗಿಸಿಕೊಂಡು ಸಮೀಕ್ಷೆ ನಡೆಸಲಾಯಿತು.

ಗ್ರಾಹಕರ ವಿಶ್ವಾಸಾರ್ಹ ಡೆವಲಪರ್ಸ್ ವರದಿಯ ‘ಪಾಸ್ಟಿಟಿವ್ ಔಟ್‌ಲುಕ್’ನಲ್ಲಿ ಕೇವಲ ಏಳು ಕಂಪನಿಗಳು ಸ್ಥಾನ ಪಡೆದಿವೆ. ಅದರಲ್ಲಿ ಶೋಭಾ, ಪ್ರೆಸ್ಟೀಜ್ ಗ್ರೂಪ್, ಬ್ರಿಗೇಡ್ ಗ್ರೂಪ್ ಮತ್ತು ಪುರವಂಕರ ಡೆವಲಪರ್ಸ್ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.