ದಾವಣಗೆರೆ: ಸದಾ ಸುದ್ದಿಯಲ್ಲಿರಲು ಬಯಸುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಈಗ ಮರಳಿನ ಸಂಬಂಧದ ಹೋರಾಟದಿಂದ ಜಿಲ್ಲೆಯಲ್ಲಿ ಕಾವು ಸೃಷ್ಟಿಸಿದ್ದಾರೆ.

ಜನರಿಗೆ ಮರಳು ಸಿಗಬೇಕು. ಅದಕ್ಕಾಗಿ ನದಿಗೇ ಇಳಿದು ಮರಳು ತೆಗೆಯುವ ನೇರ ಕಾರ್ಯಾಚರಣೆಗೆ ಇಳಿದಿದ್ದಾರೆ. ‘ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವಕ್ರಮ ಕೈಗೊಂಡರೂ ಅದನ್ನು ಎದುರಿಸಲು ಸಿದ್ಧ’ ಎಂದು ಸವಾಲು ಹಾಕಿದ್ದಾರೆ. ‘ಜನರ ಪರವಾಗಿ ಹೋರಾಟ ಮಾಡಿಕೊಂಡು ಬಂದ ನನಗೆ ಜೈಲು ಹೊಸದಲ್ಲ, ಮೊಕದ್ದಮೆ ಹಳೆಯದಲ್ಲ’ ಎಂದು ಡೈಲಾಗ್ ಹೊಡೆಯುತ್ತಿದ್ದಾರೆ.

ಈ ಕಾರ್ಯಾಚರಣೆ ವಿಷಯ ತಿಳಿಸಲು ನಡೆಸಿದ ಸುದ್ದಿಗೋಷ್ಠಿ ಸ್ಥಳಕ್ಕೇ ರೇಣುಕಾಚಾರ್ಯ ಮರಳು ಲಾರಿ ತಂದಿದ್ದರು. ಸಾಲದ್ದಕ್ಕೆ ಲಾರಿಯನ್ನೇ ಏರಿ, ‘8 ಟನ್ ಇರುವ ಈ ಮರಳಿಗೆ ₹ 22 ಸಾವಿರ ನೀಡಬೇಕಾಗಿದೆ. ಜನಸಾಮಾನ್ಯರು ಇಷ್ಟು ದುಬಾರಿ ದರ ನೀಡಿ ಮರಳು ಖರೀದಿಸಲು ಸಾಧ್ಯವೇ’ ಎಂದು ಕೇಳಿ ಕ್ಯಾಮೆರಾಗಳಿಗೆ ಮುಖವೊಡ್ಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.