ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭವು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಪಾಲಿಕೆಯ ಉಪ ಮೇಯರ್ ಗೋಪಾಲ ಘಟಕಾಂಬಳೆ ನಡುವಿನ ಮಾತಿನ ‘ಜಗಳಬಂದಿ’ಗೆ ಸಾಕ್ಷಿಯಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರು ಕ್ಯಾಂಟೀನ್ ಬಾಗಿಲಿಗೆ ಕಟ್ಟಿದ್ದ ರಿಬ್ಬನ್ ಕತ್ತರಿಸಲುಹರಸಾಹಸ ಪಡುತ್ತಿದ್ದರು. ಮನಗೂಳಿ ಹಿಂಬದಿಯೇ ಇದ್ದ ಗೋಪಾಲ ಘಟಕಾಂಬಳೆ ರಿಬ್ಬನ್ ಹಿಡಿದು, ಸಚಿವರಿಗೆ ಸಹಕಾರ ನೀಡಲು ಮುಂದಾದರು. ಇವರಿರಿಬ್ಬರ ಹಿಂದೆ ನಿಂತಿದ್ದ ಶಾಸಕ ಬಸನಗೌಡ ಪಾಟೀಲರು ತಕ್ಷಣವೇ, ‘ಕಾಮನ್‌ಸೆನ್ಸ್ ಇಲ್ಲದವರಿಗೆ ಅಧಿಕಾರ ಸಿಕ್ಕರೆ ಹೀಗೆ ಆಗೋದು. ಸಚಿ
ವರ ಜತೆ ಮೇಯರ್ ಇರಬೇಕಲ್ವಾ’ ಎಂದು ಘಟಕಾಂಬಳೆಯನ್ನು ಛೇಡಿಸಿದರು. ಗೌಡರ ಬೆಂಬಲಿಗರು ಜೋರಾಗಿನಗುವ ಮೂಲಕ ಶಾಸಕರನ್ನು ಬೆಂಬಲಿಸಿದರು.

ರಿಬ್ಬನ್ ಕತ್ತರಿಸಿದ ಬಳಿಕ ಮುಖಂಡರೆಲ್ಲರೂ ಕ್ಯಾಂಟೀನ್ ಒಳಗೆ ತೆರಳುತ್ತಿದ್ದಂತೆ ಪುರೋಹಿತರುಬಸನಗೌಡರನ್ನು ಪೂಜೆಗೆ ಆಹ್ವಾನಿಸಿದರು. ಆರತಿ ಬೆಳಗಿದ ಯತ್ನಾಳ, ತಮ್ಮ ಕೈಯಲ್ಲಿದ್ದ ಪೂಜಾ ಸಾಮಗ್ರಿಯನ್ನು ತನ್ನ ಬೆಂಬಲಿಗ ಮೂರ್ನಾಲ್ಕು ಮಂದಿಗೆ ನೀಡಿದರು. ಇದನ್ನು ಗಮನಿಸಿದ ಗೋಪಾಲ, ‘ಇದ್ದಿಲು ಮಸಿಗೆ ಬುದ್ದಿ ಹೇಳ್ತಲ್ಲಪ್ಪೋ..! ತಾನು ಮಾಡುತ್ತಿರೋದು ಏನು? ಮೇಯರ್
ಅವರನ್ನು ಮುಂದಿಟ್ಟುಕೊಳ್ಳಬೇಕಲ್ವಾ. ಅವರಿಂದ ಪೂಜೆ ಮಾಡಿಸಬೇಕಲ್ವಾ’ ಎಂದು ಅದೇ ಜಾಗದಲ್ಲಿ ಎದಿರೇಟು ನೀಡುತ್ತಿದ್ದಂತೆ; ಗೌಡರ ಬೆಂಬಲಿಗರು ಪೆಚ್ಚು ಮೋರೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.