ಚೀನಾ ತನ್ನ ಉತ್ಕೃಷ್ಟ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಕ್ಕೆ ಪೂರೈಸುತ್ತಿದೆ. ಇದು ಭಾರತದ ವಿರುದ್ಧ ಚೀನಾ ನಡೆಸುತ್ತಿರುವ ರಕ್ಷಣಾ ಕಾರ್ಯತಂತ್ರದ ಭಾಗವಾಗಿದ್ದು, ತನ್ನ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಸುತ್ತ ಶಸ್ತ್ರಾಗಾರಗಳನ್ನು ಹೆಚ್ಚಿಸುತ್ತಿದೆ.

ಯುದ್ಧ ವಿಮಾನಗಳು, ಜಲಾಂತರ್ಗಾಮಿಗಳು, ಯುದ್ಧ ನೌಕೆಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಇತರ ಯುದ್ಧೋಪಕರಣಗಳನ್ನು ಬೀಜಿಂಗ್ ಇಸ್ಲಾಮಾಬಾದ್ಗೆ ‘ಕೊಡುಗೆ’ ನೀಡಿದೆ.

ಭಾರತದ ಅತ್ಯಾಧುನಿಕ ಖರೀದಿಯಾಗಿರುವ S-400 ವಾಯು ರಕ್ಷಣಾ ವ್ಯವಸ್ಥೆಯನ್ನೂ ವಂಚಿಸುವಂತಹ ಶಬ್ದಾತೀತ ಶಸ್ತ್ರಾಸ್ತ್ರಗಳ ಬಲವನ್ನು ಚೀನಾವು ಪಾಕಿಸ್ತಾನಕ್ಕೆ ನೀಡುವ ಸಾಧ್ಯತೆ ಇದೆ ಎಂದು ಪ್ರಮುಖ ರಕ್ಷಣಾ ವಿಶ್ಲೇಷಕರೊಬ್ಬರು ಇತ್ತೀಚೆಗೆ ಹೇಳಿಕೊಂಡಿದ್ದಾರೆ.

ಶಬ್ದಾತೀತ ಶಸ್ತ್ರಾಸ್ತ್ರಗಳು ಮ್ಯಾಚ್ 5 (Mach 5) ವೇಗದಲ್ಲಿ, ಅಥವಾ ಶಬ್ದಕ್ಕಿಂತ ಐದು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತವೆ. ರಷ್ಯಾ ನಿರ್ಮಿತ S-400 ನಂತಹ ವಾಯು ರಕ್ಷಣಾ ವ್ಯವಸ್ಥೆಗಳನ್ನು ಭಾರತ ಮತ್ತು ಚೀನಾ ಹೊಂದಿವೆ. ಇವುಗಳಿಂದಲೂ ಈ ಶಬ್ದಾತೀತ ಅಸ್ತ್ರಗಳನ್ನು ಪತ್ತೆ ಹಚ್ಚುವುದು ಮತ್ತು ಎದುರಿಸುವುದು ಕಷ್ಟ ಎಂಬುದು ಗಮನಾರ್ಹ ಅಂಶ.

ಅಂತರರಾಷ್ಟ್ರೀಯ ಮೌಲ್ಯಮಾಪನ ಮತ್ತು ಕಾರ್ಯತಂತ್ರ ಕೇಂದ್ರದ ಹಿರಿಯ ಸಹವರ್ತಿಯಾಗಿರುವ ರಿಚರ್ಡ್ ಡಿ. ಫಿಶರ್ ಅವರು, ಚೀನಾದ ಮಿಲಿಟರಿ ಪ್ರಗತಿಯ ಬಗ್ಗೆ ಅಮೆರಿಕದ ಕಾಂಗ್ರೆಸ್ ಮುಂದೆ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದರು. ‘ಉತ್ತರ ಕೊರಿಯಾದ ಹೊಸ ಶಬ್ದಾತೀತ ಜಾರು ವಾಹನದ Hypersonic Glide Vehicle(HGV) ಕ್ಷಿಪಣಿ ಸಿಡಿತಲೆಗೆ ಚೀನಾ ಬೆಂಬಲ ನೀಡಿದೆ. ಅದೇ ರೀತಿ ಪಾಕಿಸ್ತಾನದ HGV ಗೂ ಸಹಾಯ ಮಾಡಲಿದೆ ಅಥವಾ DF-17 ಅನ್ನು ಮಾರಾಟ ಮಾಡಲಿದೆ’ ಎಂದು ಡಿಫೆನ್ಸ್ ನ್ಯೂಸ್ಗೆ ಅವರು ತಿಳಿಸಿದ್ದಾರೆ.

ಭಾರತೀಯ ಮಾಧ್ಯಮವು S-400 ಅನ್ನು ‘ಗೇಮ್ ಚೇಂಜರ್’ ಎಂದು ಬಣ್ಣಿಸಿದೆ. ಏಕೆಂದರೆ, S-400 ನೆಲದಿಂದ ಗಾಳಿಗೆ ಚಿಮ್ಮುವ 40ರಿಂದ 400 ಕಿಲೋಮೀಟರ್ಗಳ ವ್ಯಾಪ್ತಿ ಹೊಂದಿರುವ ನಾಲ್ಕು ಬಗೆಯ ಕ್ಷಿಪಣಿಗಳನ್ನು ನಿಭಾಯಿಸಬಲ್ಲದು.

ಈ ಕ್ಷಿಪಣಿಗಳು ಯುದ್ಧ ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಬಾಂಬ್ಗಳು ಮತ್ತು ಕೆಲವು ರೀತಿಯ ಸಿಡಿತಲೆ ಕ್ಷಿಪಣಿಗಳು ಸೇರಿದಂತೆ ಹಲವು ಬಗೆಯ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿವೆ. ಅಂದರೆ, ಪಾಕಿಸ್ಥಾನದ ಪರಮಾಣು ಶಸ್ತ್ರಾಸ್ತ್ರಗಳನ್ನೂ ಅವು ಬಲಹೀನಗೊಳಿಸಬಲ್ಲವು.

ಭಾರತವು ‘S-400’ ಅನ್ನು ಹೊಂದಿರುವುದು ತನಗೆ ಪ್ರಮುಖವಾದ ಬೆದರಿಕೆ ಎಂಬಂತೆ ಪಾಕಿಸ್ತಾನವು ಪರಿಭಾವಿಸಿದೆ. ಈ ವ್ಯವಸ್ಥೆಯು ಪಾಕಿಸ್ಥಾನದ ವಾಯುನೆಲೆಗಳಲ್ಲಿರುವ ವಿಮಾನಗಳನ್ನೂ ಹೊಡೆದುರುಳಿಸಬಲ್ಲದು. S-400ರ ಸಂಭಾವ್ಯ ಆಕ್ರಮಣಶೀಲತೆಯು ವೈರಿ ರಾಷ್ಚ್ರಕ್ಕೆ ತನ್ನದೇ ವಾಯುನೆಲೆಯನ್ನೂ ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗದಂತೆ ಮಾಡುವುದು ಇದರ ಪ್ರಮುಖ ಲಕ್ಷಣವಾಗಿದೆ. ಪಾಕಿಸ್ತಾನದ ಭೌಗೋಳಿಕತೆ ಮತ್ತು ಭಾರತದೊಂದಿಗೆ ಸುದೀರ್ಘವಾದ ಗಡಿಯನ್ನು ಹಂಚಿಕೊಂಡಿರುವ ಕಾರಣಕ್ಕೆ, ಈ ರಕ್ಷಣಾ ವ್ಯವಸ್ಥೆಯು ದೇಶದ ಹೆಚ್ಚಿನ ಭಾಗವನ್ನು ಆವರಿಸುತ್ತದೆ.

ಗಮನಾರ್ಹ ಅಂಶವೆಂದರೆ, ಭಾರತದ S-400 ಟ್ರಯಂಫ್ ವ್ಯವಸ್ಥೆಯನ್ನು ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಪಂಜಾಬ್ ರಾಜ್ಯದಲ್ಲೇ ಸ್ಥಾಪಿಸಲಾಗಿದೆ. ಇದರ ನಿಯೋಜನೆಯು ಫೆಭ್ರುವರಿ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಶಬ್ದಾತೀತ ಕ್ಷಿಪಣಿಗಳು: ಒಂದು ಶಬ್ದಾತೀತ ಆಯುಧವು ಸಿಡಿತಲೆ ಕ್ಷಿಪಣಿಯ ಮೇಲೆ ಸ್ಥಾಪಿಸಲಾಗಿರುವ ಜಾರು ವಾಹನವನ್ನು ಒಯ್ಯುತ್ತದೆ. ಇದನ್ನು ಮೇಲಿನ ವಾತಾವರಣಕ್ಕೆ ಉಡಾಯಿಸಲಾಗುತ್ತದೆ ಮತ್ತು ಆಯುಧವನ್ನು ಅದರ ಗುರಿಯತ್ತ ಜಾರಿಸುತ್ತದೆ. ಅಮೆರಿಕದ ಗುಪ್ತಚರ ಇಲಾಖೆಯ ಅಂದಾಜಿನ ಪ್ರಕಾರ, ಚೀನಾದ DF-17 ಸುಮಾರು 2,500 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ಶಬ್ದಕ್ಕಿಂತ ಐದುರಿಂದ ಹತ್ತು ಪಟ್ಟು ವೇಗದಲ್ಲಿ ಚಲಿಸುತ್ತದೆ. DF-17 ಅನ್ನು ಚೀನಾದ ಮಿಲಿಟರಿಯಲ್ಲಿ ನಿಯೋಜಿಸಲಾಗಿದೆ ಎಂದು ನಂಬಲಾಗಿದೆ.

S-400ರ ನಿಯೋಜನೆಯನ್ನು ಎದುರಿಸಲು ಶಬ್ದಾತೀತ ಅಸ್ತ್ರಗಳ ಅಭಿವೃದ್ಧಿ ಮತ್ತು ನಿಯೋಜನೆ ಅನಿವಾರ್ಯವೆಂದು ಪಾಕಿಸ್ತಾನದ ವಿಶ್ಲೇಷಕರು ಈಗಾಗಲೇ ಸಲಹೆ ನೀಡಿದ್ದಾರೆ.

ಫಿಶರ್ ಅವರು ತಮ್ಮ ಮೌಲ್ಯಮಾಪನದಲ್ಲಿ ಹೇಳಿರುವಂತೆ, ‘ಬೀಜಿಂಗ್ ಮುಂದೆ ಮೂರು ಆಯ್ಕೆಗಳಿವೆ: ಒಂದೋ DF-17 ಅನ್ನು ನೇರವಾಗಿ ಪಾಕಿಸ್ತಾನಕ್ಕೆ ಮಾರಾಟ ಮಾಡುವುದು ಅಥವಾ ತಂತ್ರಜ್ಞಾನವನ್ನು ವರ್ಗಾಯಿಸುವುದು ಮತ್ತು ಇದೇ ರೀತಿಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುವುದು. ಇದಲ್ಲದೆ, ಇತ್ತೀಚೆಗೆ ಎರಡು ಅಭೂತಪೂರ್ವ ಪರೀಕ್ಷೆಗಳಲ್ಲಿ ಪ್ರಕಟವಾದ ಉತ್ತರ ಕೊರಿಯಾದ ಶಬ್ದಾತೀತ ತಂತ್ರಜ್ಞಾನಕ್ಕೆ ಚೀನಾ ಸಹಾಯ ಮಾಡಿದೆ ಎಂದು ಫಿಶರ್ ನಂಬುತ್ತಾರೆ. ಉತ್ತರ ಕೊರಿಯಾವು ಹೊಂದಿರುವ HGV ಸಹಿತವಾದ ಮಧ್ಯಮ-ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯನ್ನು ಉಲ್ಲೇಖಿಸಿರುವ ಅವರು, ಉತ್ತರ ಕೊರಿಯಾ ತನ್ನ HGV ಅನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಅನುಮತಿಸುವ ಆಯ್ಕೆಯನ್ನು ಬೀಜಿಂಗ್ ಈಗ ಹೊಂದಿದೆ ಎಂದು ಫಿಶರ್ ಹೇಳುತ್ತಾರೆ.

ಚೀನಾ ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ತನ್ನ ಶಬ್ದಾತೀತ ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಕಳೆದ ವರ್ಷ ಚೀನಾದ ಒಂದು ಶಬ್ದಾತೀತ ಕ್ಷಿಪಣಿಯು ಇಡೀ ಜಗತ್ತಿಗೆ ಪ್ರದಕ್ಷಿಣೆ ಹಾಕಿತ್ತು. ಅದು ತನ್ನ ಗುರಿಯನ್ನು ಕೆಲವು ಕಿಲೋಮೀಟರ್ಗಳಷ್ಟು ಅಂತರದಿಂದ ತಪ್ಪಿಸಿಕೊಂಡಿದ್ದರೂ, ಜಗತ್ತಿನ ಸುತ್ತ ಅಷ್ಟೂ ದೂರವನ್ನು ಶಬ್ದಾತೀತ ಕ್ಷಿಪಣಿಯೊಂದು ಪರಿಭ್ರಮಣ ಮಾಡಿದ್ದು ಇದೇ ಮೊದಲ ಸಲವಾಗಿತ್ತು.

ಹೆಚ್ಚುವರಿಯಾಗಿ, ದಕ್ಷಿಣ ಚೀನಾದ ಸಮುದ್ರದಲ್ಲಿ ಜಾರು ವಾಹನವೊಂದು ಸಬ್ಮ್ಯುನಿಷನ್ ಅನ್ನು ಪರೀಕ್ಷೆಯೊಂದರಲ್ಲಿ ಪ್ರಯೋಗಿಸಿರುವ ಆಘಾತಕಾರಿ ಸಂಗತಿಯೂ ಬಯಲಾಗಿದೆ.

ಓದಿ... ಕಳಪೆ ಸರಕು, ತಲೆ ಮೇಲೆ ಸಾಲ: ನೆರೆಯ ದೇಶಗಳಿಗೆ ಚೀನಾದ ಶೂಲ! ಗಿರೀಶ್ ಲಿಂಗಣ್ಣ ಲೇಖನ

ಶಬ್ದಾತೀತ ಕ್ಷಿಪಣಿ ಸಾಮರ್ಥ್ಯಗಳ ಕಾರ್ಯಕ್ರಮಗಳಲ್ಲಿ ಚೀನಾವು ಮಹತ್ವದ ದಾಪುಗಾಲು ಇರಿಸುತ್ತಿರುವುದಕ್ಕೆ ಸಂಬಂಧಿಸಿ ದೇಶದ ಪರಿಣಿತರ ಮತ್ತು ವೈಜ್ಞಾನಿಕ ಸಂಶೋಧಕರ ಸಮುದಾಯವು ಆಗಾಗ್ಗೆ ಪ್ರಕಟಣೆಗಳನ್ನು ನೀಡುವ ಮೂಲಕವೇ ಬೆಳೆದಿದೆ. ಆ ಅರ್ಥದಲ್ಲಿ, S-400 ಸಾಮರ್ಥ್ಯಗಳನ್ನು ಮೀರಿ ನಿಲ್ಲಲು ಶಬ್ದಾತೀತ ಕ್ಷಿಪಣಿಗಳೊಂದಿಗೆ ತನ್ನ ಆಪ್ತ ಮಿತ್ರರನ್ನು ಚೀನಾ ಶಸ್ತ್ರಸಜ್ಜಿತಗೊಳಿಸುತ್ತಿದೆ ಎಂದು ಊಹಿಸಬಹುದು.

ಅನೇಕ ರೀತಿಯ ದೀರ್ಘ-ಶ್ರೇಣಿಯ ನಿಖರವಾದ ಶಸ್ತ್ರಾಸ್ತ್ರಗಳನ್ನು ಚೀನಾ ಮಾರಾಟ ಮಾಡಬಹುದು ಎಂಬುದು ನಿಜ. ಸಿಡಿತಲೆ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಅಂತಹ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲು ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಸ್ವೇಚ್ಛೆಯನ್ನೋ, ಸ್ವಾತಂತ್ರ್ಯವನ್ನೋ ಹೊಂದಿರುವಂತೆ ತೋರುತ್ತಿದೆ.

ಆದರೂ 1990ರ ದಶಕದಿಂದ, ಕಾರ್ಯತಂತ್ರದ ಶಸ್ತ್ರಾಸ್ತ್ರ ವ್ಯವಸ್ಥೆಗಳ ವಿಚಾರದಲ್ಲಿ ಪಾಕಿಸ್ತಾನದ ಮಿಲಿಟರಿ-ಕೈಗಾರಿಕಾ ವಲಯವು ಸ್ವದೇಶೀಕರಣದ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಆದ್ದರಿಂದ, ಪಾಕಿಸ್ತಾನದಲ್ಲಿ ಹೊರಹೊಮ್ಮಿದ ಮೊದಲ ಶಬ್ದಾತೀತ ಕ್ಷಿಪಣಿಯು ಪಾಕಿಸ್ತಾನದಲ್ಲೇ ಸಂಪೂರ್ಣವಾಗಿ (ಶೇಕಡ 100ರಷ್ಟು) ತಯಾರಾಗಿದೆ.

ಪಾಕಿಸ್ತಾನವು ಯಾವುದೇ ಸಮಯದಲ್ಲಿ ಶಬ್ದಾತೀತ ಕ್ಷಿಪಣಿಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ನಾನು ನಂಬದಿರಲು ಹಲವು ಕಾರಣಗಳಿವೆ. ಮೊದಲನೆಯದಾಗಿ, ಚೀನಾದ ಸ್ವಂತ ಶಬ್ದಾತೀತ ಕ್ಷಿಪಣಿಯು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಇನ್ನೂ ಸಮಯವಿದೆ. ಕಳೆದ ವರ್ಷ ಅದು ಪರೀಕ್ಷೆಯನ್ನು ನಡೆಸಿದೆ. ಅದು ಕೆಲವು ಕಿಲೋಮೀಟರ್ಗಳಷ್ಟು ಅಂತರದಲ್ಲಿ ಗುರಿಯನ್ನು ತಪ್ಪಿಸಿಕೊಂಡಿತು. ಆದ್ದರಿಂದ, ರಫ್ತಿನ ಬಗ್ಗೆ ಯೋಚಿಸುವ ಮೊದಲು ಹೆಚ್ಚು ವರ್ಧಿತ ನಿಖರತೆಯ ಮಟ್ಟವನ್ನು ಸಾಧಿಸಲು ಚೀನಿಯರು ಬಯಸುತ್ತಾರೆ.

ಓದಿ... ಕಜಖಸ್ತಾನ | ರಸ್ತೆಗಿಳಿದು ಜನರ ಪ್ರತಿಭಟನೆ; ತೈಲ ಶ್ರೀಮಂತ ರಾಷ್ಟ್ರದಲ್ಲೇನಾಗಿದೆ?

ಎರಡನೆಯದಾಗಿ ಶಬ್ದಾತೀತ ಅಯುಧಗಳು J-20 ಸ್ಟೆಲ್ತ್ ಯುದ್ಧ ವಿಮಾನದಂತೆ ಹೆಚ್ಚು ವರ್ಗೀಕರಿಸಿದ ತಂತ್ರಜ್ಞಾನಗಳಾಗಿದ್ದು, ಹಂಚಿಕೊಳ್ಳಲು ಚೀನಾ ಸಿದ್ಧವಿರಲಿಕ್ಕಿಲ್ಲ. ಚೀನಾ ಪಾಕಿಸ್ತಾನದ ಮೇಲೆ ದೊಡ್ಡ ನಿರೀಕ್ಷೆಗಳನ್ನು ಹೊಂದಿದೆ. ಆದರೆ, ನಂಬಿಕೆಯ ವಿಷಯದಲ್ಲಿ ಇನ್ನೂ ಕೊರತೆಯಿದೆ. ಬೇಹುಗಾರಿಕೆಯ ಅಪಾಯ ಯಾವಾಗಲೂ ಇರುತ್ತದೆ. ಅಮೆರಿಕ ಮತ್ತು ಇಂಗ್ಲೆಂಡ್ ಶಬ್ದಾತೀತ ಕ್ಷಿಪಣಿಗಳನ್ನು ಹೊಂದಿಲ್ಲ. ಹೀಗಾಗಿ, ಚೀನಾ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಈ ಹಂತದಲ್ಲಿ ಅಪಾಯವನ್ನು ಆಹ್ವಾನಿಸಲು ಚೀನಾ ಸಿದ್ಧವಿಲ್ಲ.

ಪಾಕಿಸ್ತಾನವು ಚೀನಾದಿಂದ ಶಬ್ದಾತೀತ ಕ್ಷಿಪಣಿಗಳನ್ನು ಪಡೆದುಕೊಳ್ಳುವುದು ದೂರದ ಮಾತು ಎಂದು ತೋರುವುದಾದರೂ, ಈ ದೇಶವು ತನ್ನ ಶಸ್ತ್ರಾಗಾರದಲ್ಲಿ ಅನೇಕ ದೀರ್ಘ-ಮಧ್ಯ-ಮತ್ತು ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಹೊಂದಿದೆ. ಇಸ್ಲಾಮಿಕ್ ರಾಷ್ಟ್ರವು S-400 ವಾಯು ರಕ್ಷಣಾ ವ್ಯವಸ್ಥೆಯ ಚೀನೀ ಆವೃತ್ತಿಯನ್ನು ಹೊಂದಿದೆ. ಇದನ್ನು HQ-9B ಎಂದು ಕರೆಯಲಾಗುತ್ತದೆ. ಆದರೂ, ಇದರ ವ್ಯಾಪ್ತಿ ಕಡಿಮೆ. ಅಂದರೆ, ಕೇವಲ 240 ಕಿಲೋಮೀಟರ್ಗಳಷ್ಟಿದೆ.

ಭಾರತವು ಪಾಕಿಸ್ತಾನ ಮತ್ತು ಚೀನಾ- ಎರಡೂ ಕಡೆಗಳಿಂದ ಯುದ್ಧದ ಬೆದರಿಕೆಯನ್ನು ಎದುರಿಸುತ್ತಿರುವ ಕಾರಣ, ಊಹಾಪೋಹಗಳ ಹೊರತಾಗಿಯೂ ಅದರ ‘ಕಠಿಣ ಸಹೋದರ’ನೊಂದಿಗೆ ಬೀಜಿಂಗ್ನ ರಕ್ಷಣಾ ಸಹಯೋಗವು ಶಬ್ದಾತೀತ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಮುಂದುವರಿಯುತ್ತದೆ ಅಥವಾ ಬಹುಶಃ ಅದು ಇನ್ನೂ ಬಹುಪಾಲು ಹೆಚ್ಚುತ್ತದೆ.

–ಲೇಖಕರು

ಗಿರೀಶ್ ಲಿಂಗಣ್ಣ
ವ್ಯವಸ್ಥಾಪಕ ನಿರ್ದೇಶಕರು
ಎ. ಡಿ. ಡಿ. ಇಂಜಿನಿಯರಿಂಗ್ ಇಂಡಿಯಾ
(ಇಂಡೋ -ಜರ್ಮನ್ ರಕ್ಷಣಾ ಸಾಮಗ್ರಿ ಪೂರೈಕೆ ಸಂಸ್ಥೆ )

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.