‘ಬೋರ್ಡ್, ಕಾಲೇಜು, ವಿಶ್ವವಿದ್ಯಾಲಯಗಳ ವಿವಿಧ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿನಿಯರದೇ ಮೇಲುಗೈ. ಆದರೆ ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವಿದ್ಯಾರ್ಥಿನಿಯರ ಸಂಖ್ಯೆ ಏಕೆ ಇಷ್ಟು ಕಡಿಮೆಯಿದೆ?’ ಇದು 2018ರಲ್ಲಿ ಐಐಟಿ ಖರಗಪುರದ 64ನೆಯ ಪದವಿ ಪ್ರದಾನ ಸಮಾರಂಭದಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶಿಕ್ಷಣ ತಜ್ಞರನ್ನು ಕೇಳಿದ ಮುಖ್ಯ ಪ್ರಶ್ನೆ.

ನಮ್ಮ ದೇಶದ ಪ್ರತಿಷ್ಠಿತ ಐಐಟಿಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು, ‘ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್– ಮೇನ್ ಮತ್ತು ಅಡ್ವಾನ್ಸ್ಡ್ (ಜೆಇಇ) ಎಂಬ ಎರಡು ಹಂತದ ಪ್ರವೇಶ ಪರೀಕ್ಷೆ ಬರೆಯಬೇಕು. ರಾಷ್ಟ್ರಪತಿ ಕೇಳಿದ ಪ್ರಶ್ನೆಯ ಹಿನ್ನೆಲೆ
ಯಲ್ಲಿ, ಒಂದು ವರ್ಷ ಹಿಂದಿನ, ಅಂದರೆ 2017ರ ಈ ಪರೀಕ್ಷೆಯನ್ನು ಪರಿಶೀಲಿಸೋಣ. ಆ ವರ್ಷ ಜೆಇಇ (ಮೇನ್ಸ್) ಮೊದಲ ಹಂತದ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳ ಸಂಖ್ಯೆ 12.86 ಲಕ್ಷ. ಇದರಲ್ಲಿ ಯುವಕರ ಪ್ರಮಾಣ ಶೇ 72.2ರಷ್ಟು, ಯುವತಿಯರು ಶೇ 27.8
ರಷ್ಟು. ಎರಡನೆಯ ಹಂತದಲ್ಲಿ ಜೆಇಇ (ಅಡ್ವಾನ್ಸ್ಡ್) ಪರೀಕ್ಷೆ ಬರೆಯಲು ಆಯ್ಕೆಯಾದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 2.20 ಲಕ್ಷ. ಇವರಲ್ಲಿ ಗಂಡುಮಕ್ಕಳು ಶೇ 79.2 ರಷ್ಟು ಮತ್ತು ಹೆಣ್ಣುಮಕ್ಕಳು ಶೇ 20.8ರಷ್ಟು. ಆ ವರ್ಷ ದೇಶದ 23 ಐಐಟಿಗಳಲ್ಲಿ ಲಭ್ಯವಿದ್ದ ಸೀಟುಗಳ ಸಂಖ್ಯೆ 10,572. ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿನಿಯರ ಸಂಖ್ಯೆ 995 ಅಥವಾ ಶೇ 9.4ರಷ್ಟು. ವಿಪರ್ಯಾಸದ ಸಂಗತಿಯೆಂದರೆ, ಈ ರೀತಿ ಆಯ್ಕೆಯಾದ ವಿದ್ಯಾರ್ಥಿನಿಯರಲ್ಲಿ ಅನೇಕರು ಐಐಟಿಗಳಿಗೆ ಸೇರಲೇ ಇಲ್ಲ. 2017ರ ಹಿಂದಿನ ವರ್ಷಗಳ ಕಥೆಯೂ ಸರಿಸುಮಾರು ಇದೇ! ರಾಷ್ಟ್ರಪತಿಯವರ ಪ್ರಶ್ನೆಯ ಹಿಂದಿದ್ದುದು ಈ ಪರಿಸ್ಥಿತಿಯ ಬಗೆಗಿನ ಕಾಳಜಿ.

ನಮ್ಮ ದೇಶದ ಐಐಟಿ ವಿದ್ಯಾರ್ಥಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಎದ್ದು ಕಾಣುವಂತೆ ಕಡಿಮೆಯಿರಲು ಕಾರಣಗಳನ್ನು ವಿಶ್ಲೇಷಿಸಿ ಅದನ್ನು ಸರಿಪಡಿಸಲು ಸೂಕ್ತ ಸಲಹೆಗಳನ್ನು ನೀಡುವ ಉದ್ದೇಶದಿಂದ ಐಐಟಿ ನಿರ್ದೇಶಕ ಪ್ರೊ. ತಿಮೋತಿ ಗೋನ್ಸಾಲ್ವೆಸ್ ಅವರ ಅಧ್ಯಕ್ಷತೆಯಲ್ಲಿ
17 ಪರಿಣತ ಸದಸ್ಯರ ಸಮಿತಿಯೊಂದನ್ನು 2017ರಲ್ಲಿ ನೇಮಿಸಲಾಯಿತು. ಈ ಸಮಿತಿ ನೀಡಿದ ವರದಿಯಂತೆ, ಈ ಪರಿಸ್ಥಿತಿಗೆ ಪೋಷಕರು, ಕುಟುಂಬ ಮತ್ತು ಶಿಕ್ಷಕರ ಲಿಂಗಪಕ್ಷಪಾತ ಮತ್ತು ಲಿಂಗತಾರತಮ್ಯದ ಧೋರಣೆ ಹಾಗೂ ಬಹಳಷ್ಟು ಪ್ರಮಾಣದಲ್ಲಿ ‘ರೋಲ್ ಮಾಡೆಲ್’ಗಳ ಅಭಾವ ಮುಖ್ಯ ಕಾರಣಗಳಾಗಿದ್ದವು.

ಜೆಇಇ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗಳಲ್ಲೊಂದು.ಸರಿಯಾದ ಮಾರ್ಗದರ್ಶನ, ಬೋಧನೆ, ತರಬೇತಿ, ಕುಟುಂಬದ ಬೆಂಬಲವಿಲ್ಲದೇ ಜಯ ಗಳಿಸುವುದು ಬಹುಮಟ್ಟಿಗೆ ಅಸಾಧ್ಯ. ನಗರ, ಪಟ್ಟಣ ಪ್ರದೇಶಗಳಲ್ಲಿ ಕೋಚಿಂಗ್ ಕೇಂದ್ರಗಳು ವಿಧಿಸುವ ಶುಲ್ಕ ಬಹು ದುಬಾರಿ. ಹೆಚ್ಚಿನ ಕುಟುಂಬಗಳು ಈ ವೆಚ್ಚವನ್ನು ಭವಿಷ್ಯದ ಬದುಕಿಗೆ ಹೂಡಿಕೆ ಮಾಡುವ ಬಂಡವಾಳವೆಂದು ಪರಿಗಣಿಸುತ್ತವೆ. ಅದರಲ್ಲಿ ತಪ್ಪೇನಿಲ್ಲ. ಆದರೆ ‘ಮಗ’ನಿಗಾಗಿ ಬಂಡವಾಳ ಹೂಡುವ ಪೋಷಕರು, ‘ಮಗಳ’ ಪ್ರಶ್ನೆ ಬಂದಾಗ ಅದು ಕೇವಲ ಅನಗತ್ಯ ವೆಚ್ಚ ಎಂದು ಹಿಂದೆಗೆಯುತ್ತಾರೆ. ಪರೀಕ್ಷಾ ಸಿದ್ಧತೆಗಾಗಿ ದೂರದ ಊರುಗಳಲ್ಲಿ ಉಳಿಯಬೇಕಾದಾಗ ಹೆಣ್ಣುಮಕ್ಕಳ ಸುರಕ್ಷತೆ ಪೋಷಕರಿಗೆ ಸದಾಕಾಲದ ಚಿಂತೆಯಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನೂ ಎದುರಿಸಿ, ಅತ್ಯುತ್ತಮ ಶಿಕ್ಷಣ ಪಡೆದು ಬದುಕಿನಲ್ಲಿ ಮುಂದೆ ಬಂದಿರುವ ‘ರೋಲ್ ಮಾಡೆಲ್’ಗಳೊಡನೆ ಚರ್ಚೆ, ಸಂವಾದ, ಸಮಾಲೋಚನೆಗಳಿಗೆ ಗ್ರಾಮಾಂತರ ಪ್ರದೇಶಗಳಲ್ಲಿರುವ ಅವಕಾಶಗಳು ಇಲ್ಲವೇ ಇಲ್ಲವೆನ್ನಿಸುವಷ್ಟು ಕಡಿಮೆ.

ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮ ಆಸಕ್ತಿಯ ವಿಷಯ, ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಪೋಷಕರ, ಹಿತಚಿಂತಕರ ಒತ್ತಡ ಮುಖ್ಯಪಾತ್ರ ವಹಿಸುತ್ತದೆ. ಮನೆಗೆ ಹತ್ತಿರವಿದ್ದು, ಬಹಳಷ್ಟು ಹೆಣ್ಣುಮಕ್ಕಳಿರುವ, ಸುರಕ್ಷಿತ ಪರಿಸರದ ಸಂಸ್ಥೆಯಲ್ಲಿ ಯಾವುದೇ ಕೋರ್ಸ್ ಆದರೂ ನಡೆಯು ತ್ತದೆ. ಇಂಥ ಧೋರಣೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣವೆಂಬುದು ಪರಿಣತ ಸಮಿತಿಯ ಅಭಿಪ್ರಾಯ. ಇದರ ಪರಿಣಾಮವಾಗಿಯೇ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಮುಂತಾದವು ನೀಡುವ ಪ್ರತಿಷ್ಠಿತ ಫೆಲೋಶಿಪ್ಗಳು ಮತ್ತು ವೈಜ್ಞಾನಿಕ ಸಂಶೋಧನಾ ಕ್ಷೇತ್ರದ ಅತ್ಯುನ್ನತ ಗೌರವವಾದ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ವಿಜೇತರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿಲ್ಲ.

ಐಐಟಿಗಳಲ್ಲಿ ವಿದ್ಯಾರ್ಥಿನಿಯರ ಕಡಿಮೆ ಪ್ರಮಾಣಕ್ಕೆ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಕಾರಣಗಳನ್ನು ವಿಶ್ಲೇಷಿಸಿದ ಪರಿಣತ ಸಮಿತಿಯು ಸಮಸ್ಯೆಯನ್ನು ಎದುರಿಸಲು ಮಾಡಿದ ಹಲವಾರು ಶಿಫಾರಸುಗಳಲ್ಲಿ ಬಹುಮುಖ್ಯವಾದುದು ವಿದ್ಯಾರ್ಥಿನಿಯರಿಗೆಂದೇ ಪ್ರತ್ಯೇಕವಾದ ಹೆಚ್ಚುವರಿ ‘ಸೂಪರ್ ನ್ಯೂಮರರಿ’ ಸೀಟುಗಳನ್ನು ಸೃಷ್ಟಿಸುವುದು. ಅದರಂತೆ, ದೇಶದ ಎಲ್ಲ ಐಐಟಿ
ಗಳ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಐಐಟಿ ಮಂಡಳಿ, 2018ರಲ್ಲಿ ಒಟ್ಟು 800 ಸೀಟುಗಳನ್ನು ಹೊಸದಾಗಿ ಸೃಷ್ಟಿಸಿತು. ಇದರಿಂದ ಇತರ ವರ್ಗಗಳಿಗೆ, ಅದರಲ್ಲೂ ಮುಖ್ಯವಾಗಿ ಯುವಕರಿಗೆ ಲಭ್ಯವಿದ್ದ ಸೀಟುಗಳಲ್ಲಿ ಯಾವುದೇ ಕಡಿತ ಉಂಟಾಗಲಿಲ್ಲ. ಅದರ ಜೊತೆಗೆ ಈ ಅವಕಾಶವನ್ನು ಬಳಸಿಕೊಳ್ಳಲು ವಿದ್ಯಾರ್ಥಿನಿಯರು ಈ ಮೊದಲಿನಂತೆಯೇ ಜೆಇಇ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಪ್ರವೇಶಕ್ಕೆ ಅರ್ಹತೆ ಪಡೆಯಬೇಕಿತ್ತು. ಅದರಲ್ಲಿ ಯಾವ ರಿಯಾಯಿತಿಯೂ ಇರಲಿಲ್ಲ.

2018, 2019, 2020ರಲ್ಲಿ ಒಟ್ಟು ಸೀಟುಗಳ ಶೇ 14, ಶೇ 17 ಮತ್ತು ಶೇ 20ರಷ್ಟು ಸೀಟುಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಿದ ಕ್ರಮ ಇಂದಿಗೂ ಮುಂದುವರಿದಿದೆ. ಇದರಿಂದ 2017ಕ್ಕೆ ಹೋಲಿಸಿದರೆ, 2021- 22ರಲ್ಲಿ ದೇಶದ ಐಐಟಿಗಳಲ್ಲಿ ವಿದ್ಯಾರ್ಥಿನಿ
ಯರ ಪ್ರಮಾಣ ಮೂರು ಪಾಲು ಹೆಚ್ಚಾಗಿರುವುದನ್ನು ಅಧ್ಯಯನ ಖಚಿತಪಡಿಸಿದೆ. ಆದರೆ ಈ ಹೆಚ್ಚಳಕ್ಕೆ ಹೆಚ್ಚುವರಿ ಸೀಟುಗಳ ಸೃಷ್ಟಿಯಷ್ಟೇ ಕಾರಣವಲ್ಲ. ಎಲ್ಲ ಐಐಟಿಗಳೂ ಪ್ರತಿಭಾವಂತ ಹೆಣ್ಣುಮಕ್ಕಳನ್ನು, ಅದರಲ್ಲೂ ಮುಖ್ಯವಾಗಿ ಆಯ್ಕೆಯಾದ ನಂತರವೂ ಐಐಟಿಗಳಿಗೆ ಸೇರದೇ ಹಿಂದುಳಿಯುವ ಯುವತಿಯರು ಹಾಗೂ ಅವರ ಪೋಷಕರ ಮನವೊಲಿಸುವ ವಿಶೇಷ ‘ಔಟ್ರೀಚ್’ ಕಾರ್ಯಕ್ರಮಗಳನ್ನು ಪ್ರಾರಂಭಿಸಿವೆ.

ಬಹುತೇಕ ಐಐಟಿಗಳು ‘ಆಸ್ಕ್ ಐಐಟಿ’ ಎಂಬ ಪೋರ್ಟಲ್ ಒಂದನ್ನು ಸೃಷ್ಟಿಸಿ, ಭವಿಷ್ಯದ ವಿದ್ಯಾರ್ಥಿಗಳು ಮತ್ತು ಪೋಷಕರು, ಪ್ರಾಧ್ಯಾಪಕರು, ಹಿರಿಯ ವಿದ್ಯಾರ್ಥಿಗಳು, ಉದ್ಯಮದ ನಾಯಕರೊಡನೆ ಸಮಾಲೋಚನೆ ನಡೆಸುವ ಅವಕಾಶವನ್ನು ಕಲ್ಪಿಸಿವೆ. ಎಲ್ಲ ಐಐಟಿಗಳೂ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಪೋಷಕರ ಕ್ಯಾಂಪಸ್ ಭೇಟಿಯನ್ನು ಏರ್ಪಡಿಸುತ್ತಿವೆ. ಆ ವೆಚ್ಚವನ್ನು ಭರಿಸುವ ಸಂಸ್ಥೆಗಳೂ ಉಂಟು. ಇವುಗಳ ಫಲವಾಗಿ ಕಾನ್ಪುರ ಮತ್ತು ಮದ್ರಾಸ್ ಐಐಟಿಗಳಲ್ಲಿ ವಿದ್ಯಾರ್ಥಿನಿಯರ ಪ್ರಮಾಣ ಹಿಂದಿನ ವರ್ಷ ಶೇ 29 ಮತ್ತು ಶೇ 30ಕ್ಕೇರಿದೆ. ದೆಹಲಿ ಐಐಟಿ ಇದನ್ನು ಶೇ 50ಕ್ಕೇರಿಸುವ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ವಿದ್ಯಾರ್ಥಿನಿಯರ ಸಂಖ್ಯೆಯನ್ನು ಹೆಚ್ಚಿಸುವ ಈ ಎಲ್ಲ ಕ್ರಮಗಳು ಸ್ವಾಗತಾರ್ಹವಾದರೂ ಆರ್ಥಿಕವಾಗಿ ದುರ್ಬಲ
ರಾಗಿರುವ, ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ಉಚಿತವಾಗಿ ಅಥವಾ ಅಲ್ಪ ವೆಚ್ಚದಲ್ಲಿ ಉತ್ತಮ ಕೋಚಿಂಗ್ ಸೌಲಭ್ಯ ದೊರೆಯದಿದ್ದರೆ, ಈ ಹೆಚ್ಚುವರಿ ಸೀಟುಗಳಿಂದ ಅಲ್ಲಿನ ವಿದ್ಯಾರ್ಥಿನಿಯರಿಗೆ ಯಾವ ಪ್ರಯೋಜನವೂ ಇಲ್ಲ. ಹೀಗಾಗಿ ಅಂತಹ ವಿವಿಧ ಅವಕಾಶಗಳನ್ನು ನಗರ, ಪಟ್ಟಣಗಳಿಂದ ದೂರವಿರುವ ಹೆಣ್ಣುಮಕ್ಕಳಿಗೆ ಸೃಷ್ಟಿಸಬೇಕಾದ ತುರ್ತು ಅಗತ್ಯವಿದೆ. ದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ ಸರ್ಕಾರಗಳು ಈ ದಿಕ್ಕಿನಲ್ಲಿ ಉತ್ತಮ ಕೆಲಸ ಮಾಡಿವೆ. ಕಾರ್ಪೊರೇಟ್ ವಲಯವೂ ಈ ಕ್ಷೇತ್ರದಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆ.

ಬದುಕಿನ ಸಮಸ್ಯೆಗಳನ್ನು ತಂತ್ರಜ್ಞಾನದ ನೆರವಿನಿಂದ ಪರಿಹರಿಸಿ, ಜೀವನದ ಗುಣಮಟ್ಟವನ್ನು ಉತ್ತಮಪಡಿಸುವುದು ಐಐಟಿಗಳ ಮುಖ್ಯ ಉದ್ದೇಶ. ಈ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿದಂತೆ ಅವರ ಆಲೋಚನೆ, ಹೊಸದೃಷ್ಟಿ, ಒಳನೋಟಗಳು ತರುವ ವೈವಿಧ್ಯವು ಶೈಕ್ಷಣಿಕ ಮತ್ತು ಬೌದ್ಧಿಕ ಚಟುವಟಿಕೆಗಳನ್ನು ಮತ್ತಷ್ಟು ಶ್ರೀಮಂತಗೊಳಿಸಿ, ನಮ್ಮ ಅನೇಕ ಸಮಸ್ಯೆಗಳಿಗೆ ವಿನೂತನ ಪರಿಹಾರಗಳನ್ನು ಸೂಚಿಸಲಿವೆ ಎಂಬುದು ಪರಿಣತರ ಖಚಿತ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.