ತಾತನ ಸರಳತೆಯೇ ನಮ್ಮ ಕುಟುಂಬಕ್ಕೆ ದೊರೆತ ದೊಡ್ಡ ಶಿಕ್ಷಣ. ಸರಳ ಜೀವನಶೈಲಿ ಇರಬೇಕು ಎಂದು ಹೇಳುತ್ತಿದ್ದ ಅವರು ಅದೇ ರೀತಿ ಬದುಕಿ ತೋರಿಸಿದರು.

ಯಾರಿಗೇ ಅನ್ಯಾಯವಾದರೂ ಅದನ್ನು ಪ್ರಶ್ನಿಸಬೇಕು, ಪ್ರತಿಭಟಿಸಬೇಕು ಎಂದು ಯಾವಾಗಲೂ ಹೇಳುತ್ತಿದ್ದರು. ಸಿಂಪಲ್ ಲಿವಿಂಗ್, ಹೈ ಥಿಂಕಿಂಗ್ ಎಂಬ ಮಾತು ಅವರನ್ನು ನೋಡಿಯೇ ಮಾಡಿದ್ದಾರೇನೋ ಎನಿಸುತ್ತಿತ್ತು. ಅವರು ಎಷ್ಟು ಸರಳವಾಗಿರುತ್ತಿದ್ದರೋ, ದೇಶ ಮತ್ತು ನಾಡಿನ ಆಗು–ಹೋಗುಗಳ ಬಗ್ಗೆ ಅವರಿಗೆ ಅಷ್ಟೇ ಜ್ಞಾನ ಇರುತ್ತಿತ್ತು.

ಜನಪರವಾದಯಾವುದೇ ಹೋರಾಟ ಇದ್ದಾಗ ಯಾರೇ ಕರೆದರೂ ಅವರು ಆ ಹೋರಾಟಕ್ಕೆ ಧುಮುಕುತ್ತಿದ್ದರು. ಈ ರೀತಿಯ ಹೋರಾಟದ ಹಾದಿಯಲ್ಲಿಯೇ ನೀವೂ ನಡೆಯಬೇಕು ಎಂದು ಕಿವಿಮಾತು ಹೇಳುತ್ತಿದ್ದರು.

ಇತ್ತೀಚೆಗೆ ಅವರ ಬಗ್ಗೆ ಕೆಲವರು ಟೀಕೆ ಮಾಡಿದಾಗಲೂ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಅವೆಲ್ಲ ತಲೆ–ಕಾಲಿಲ್ಲದ ಹೇಳಿಕೆಗಳು ಎನ್ನುತ್ತಿದ್ದ ಅವರು ತಮ್ಮ ಹೋರಾಟದ ಹಾದಿ ಮುಂದುವರಿಸಿದ್ದರು.

ಲಾಕ್‌ಡೌನ್‌ನಿಂದ ಜನರು ಎದುರಿಸುತ್ತಿದ್ದ ಕಷ್ಟಗಳನ್ನು ಕಂಡು ಮರುಕ ಪಡುತ್ತಿದ್ದರು. ಈ ಸಂದರ್ಭದಲ್ಲಿ ಹೋರಾಟ ನಡೆಸಲು, ಪ್ರಶ್ನಿಸಲು ಆಗುತ್ತಿಲ್ಲವಲ್ಲ ಎಂದು ಆ ಇಳಿವಯಸ್ಸಿನಲ್ಲಿಯೂ ಅವರು ಪರಿತಪಿಸಿದ್ದನ್ನು ನೋಡಿದ್ದೇನೆ. ಅವರ ಕೆಲಸ ಮತ್ತು ಜೀವನವೇ ನಮಗೆಲ್ಲ ಮಾರ್ಗದರ್ಶನವಾಗಿದೆ.
–ಮೀನಾಕ್ಷಿ ಶೇಷಾದ್ರಿ, ದೊರೆಸ್ವಾಮಿ ಮೊಮ್ಮಗಳು

ಇವನ್ನೂ ಓದಿ
*ಎಚ್.ಎಸ್. ದೊರೆಸ್ವಾಮಿ: ಧರೆಯ ಮಡಿಲಿಗೆ ಹೋರಾಟದ ದೊರೆ
*ನುಡಿ-ನಮನ: ಹೋರಾಟನಿರತರ ಬೆಸೆಯುುವ ಚುಂಬಕ ಶಕ್ತಿ
*ನುಡಿ ನಮನ: ಭಗವತಿ ಕೆರೆಗೆ ಕೊನೆಗೂ ‘ದೊರೆ’ ಬರಲಿಲ್ಲ
*ನುಡಿ ನಮನ: ಯಾರನ್ನೂ ಮೆಚ್ಚಿಸುವ ಕೆಲಸ ಮಾಡುತ್ತಿರಲಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.