ಭಾರತದ ಮೊತ್ತ ಮೊದಲ ವಿಮಾನವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಹೆಸರನ್ನೇ ಪಡೆದುಕೊಂಡ ಭಾರತದ ನೂತನ ವಿಮಾನ ವಾಹಕ ನೌಕೆ 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿತು. ರಕ್ಷಣಾ ಸಚಿವಾಲಯ ಮತ್ತು ಕೊಚ್ಚಿನ್ ಶಿಪ್ಯಾರ್ಡ್ ಮಧ್ಯ ನಡೆದ ಒಪ್ಪಂದದ ಆಧಾರದಲ್ಲಿ, ಈ ವಿಮಾನವಾಹಕ ನೌಕೆಯನ್ನು 20,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಯಿತು. ಈ ಯೋಜನೆ ಮೂರು ಹಂತಗಳಲ್ಲಿ ನಿರ್ಮಾಣಗೊಂಡಿದ್ದು, ಕ್ರಮವಾಗಿ ಮೇ 2007, ಡಿಸೆಂಬರ್ 2014 ಹಾಗೂ ಅಕ್ಟೋಬರ್ 2019ರಲ್ಲಿ ಈ ಹಂತಗಳು ಪೂರ್ಣಗೊಂಡವು. ಈ ನೌಕೆಯ ತಳ ಭಾಗವನ್ನು ಫೆಬ್ರವರಿ 2009ರಲ್ಲಿ ಪೂರ್ಣಗೊಳಿಸಲಾಯಿತು.

ದೇಶೀಯ ವಿಮಾನವಾಹಕ ನೌಕೆ ನಿರ್ಮಾಣದ ಗುಂಪಿಗೆ ಭಾರತ ಸೇರ್ಪಡೆ
ಐಎನ್ಎಸ್ ವಿಕ್ರಾಂತ್ ನೌಕೆಗೆ ನಾಲ್ಕು ಎಲ್ಎಂ2500 ಇಂಜಿನ್ಗಳು ಶಕ್ತಿ ನೀಡುತ್ತವೆ. ಇವುಗಳು 88 ಮೆಗಾವ್ಯಾಟ್ ಶಕ್ತಿ ಉತ್ಪಾದಿಸುತ್ತಿದ್ದು, ನೌಕೆಯು 28 ನಾಟ್ಗಳ ಗರಿಷ್ಠ ವೇಗದಲ್ಲಿ ಸಂಚರಿಸಬಲ್ಲದು. ಐಎನ್ಎಸ್ ವಿಕ್ರಾಂತ್ ನೌಕೆಯು ಭಾರತ ಸರ್ಕಾರದ 'ಮೇಕ್ ಇನ್ ಇಂಡಿಯಾ' ಯೋಜನೆಯ ಯಶಸ್ಸಿಗೆ ಸಂದ ಸಾಕ್ಷಿಯಾಗಿದ್ದು, ಇದರಲ್ಲಿ ಬಳಸಲಾದ ಶೇ 76 ಸಾಮಗ್ರಿಗಳು ಮತ್ತು ಉಪಕರಣಗಳು ಭಾರತೀಯವಾಗಿ ನಿರ್ಮಾಣಗೊಂಡಿವೆ. ಈ ಮೂಲಕ ದೇಶೀಯ ವಿಮಾನವಾಹಕ ನೌಕೆ (ಐಏಸಿ) ನಿರ್ಮಾಣಗೊಳಿಸಿರುವ ಅಮೆರಿಕ, ಯುನೈಟೆಡ್ ಕಿಂಗ್ಡಮ್, ಚೀನಾ ಹಾಗೂ ಫ್ರಾನ್ಸ್ ಮುಂತಾದ ರಾಷ್ಟ್ರಗಳ ಮಹತ್ತರ ಗುಂಪಿಗೆ ಭಾರತವೂ ಸೇರ್ಪಡೆಗೊಂಡಿದೆ. ಇಲ್ಲಿಯತನಕ ಭಾರತ ತನಗೆ ಅಗತ್ಯವಿದ್ದ ವಿಮಾನವಾಹಕ ನೌಕೆಯನ್ನು ಆಮದು ಮಾಡಿಕೊಳ್ಳುತ್ತಿತ್ತು.

2007ನೇ ಇಸವಿಯಲ್ಲಿ ಈ ಐಏಸಿ ಯೋಜನೆ ಆರಂಭವಾಯಿತು. ಆ ಬಳಿಕ ಈ ನೌಕೆಗೆ ಶಕ್ತಿ ತುಂಬಲು ಜಿಇ ಮರಿನ್ ಸಂಸ್ಥೆ ಆಯ್ಕೆಗೊಂಡಿದೆ ಎಂದು ಘೋಷಿಸಲಾಯಿತು. ಈ ಉದ್ದೇಶವನ್ನು ಪೂರೈಸಲು ಜಿಇ ಮರಿನ್ ಎಲ್ಎಂ2500 ಮರಿನ್ ಗ್ಯಾಸ್ ಟರ್ಬೈನ್ ಅನ್ನು ಒದಗಿಸಿತು. ಐಎನ್ಎಸ್ ವಿಕ್ರಾಂತ್ಗಾಗಿ ಅಗತ್ಯವಿದ್ದ ಎಲ್ಎಂ2500 ನಿರ್ಮಾಣವನ್ನು ಭಾರತದ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಜಿಇ ಸಂಸ್ಥೆಯ ಸಹಭಾಗಿತ್ವದೊಡನೆ ಕೈಗೆತ್ತಿಕೊಂಡಿತು. 262 ಮೀಟರ್ ಉದ್ದವಿರುವ ಈ ವಿಮಾನವಾಹಕ ನೌಕೆಯಲ್ಲಿ 14 ಡೆಕ್ಗಳಿದ್ದು, 1,400 ಸಿಬ್ಬಂದಿಗಳನ್ನು ಒಳಗೊಳ್ಳಬಲ್ಲದು. ಈ ನೌಕೆಯ ಮೂಲಕ 30 ಯುದ್ಧ ವಿಮಾನಗಳು ಕಾರ್ಯನಿರ್ವಹಿಸಬಹುದು.

ಐಎನ್ಎಸ್ ವಿಕ್ರಾಂತ್ನಲ್ಲಿ ಅತ್ಯುನ್ನತ ಗುಣಮಟ್ಟದ ಸ್ವಯಂಚಾಲಿತ ಯಾಂತ್ರಿಕ ಕಾರ್ಯಾಚರಣೆಗಳು, ನ್ಯಾವಿಗೇಷನ್ ಹಾಗೂ ರಕ್ಷಣಾ ಸಾಮರ್ಥ್ಯವನ್ನು ಅಳವಡಿಸಲಾಗಿದೆ. ಈ ವಿಮಾನವಾಹಕ ನೌಕೆಯು ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್ ಎರಡರ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ. ನೌಕೆಯ ಏರ್ ವಿಂಗ್ 30 ಏರ್ಕ್ರಾಫ್ಟ್ಗಳಿಗೆ ಅವಕಾಶ ಒದಗಿಸಬಹುದಾಗಿದ್ದು, ಇದರಲ್ಲಿ ಮಿಗ್–29ಕೆ ಯುದ್ಧ ವಿಮಾನ, ಕಾಮೊವ್–31, ಎಂಎಚ್–60ಆರ್ ಬಹುಪಾತ್ರಗಳ ಹೆಲಿಕಾಪ್ಟರ್, ದೇಶೀಯ ನಿರ್ಮಾಣದ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಹಾಗು ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ಗಳೂ ಸೇರಿವೆ. ವಿಮಾನವಾಹಕ ನೌಕೆ ಶಾರ್ಟ್ ಟೇಕ್ ಆಫ್ ಬಳಸಿಕೊಂಡರೂ, ಅರೆಸ್ಟ್ ಲ್ಯಾಂಡಿಂಗ್ (ಸ್ಟೋಬಾರ್) ಏರ್ಕ್ರಾಫ್ಟ್ ಕಾರ್ಯಾಚರಣೆಯ ವಿಧಾನವನ್ನು ಹೊಂದಿದೆ. ನೌಕೆಯಿಂದ ವಿಮಾನವು ನೌಕೆಯ ಒಂದು ಬದಿಯಲ್ಲಿರುವ ಸ್ಕೈ ಜಂಪ್ ಟೇಕ್ ಆಫ್ ಸ್ಟ್ರಿಪ್ ಎಂಬ, ನೋಡಲು ಕಿರಿದಾದ, ಓರೆಯಾದ ಡಾಂಬರ್ ರನ್ವೇ ಮೂಲಕ ಉಡಾವಣೆಗೊಳ್ಳುತ್ತದೆ. ವಿಮಾನವು ಈ ಕಡಿಮೆ ಉದ್ದನೆಯ ರನ್ವೇನಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ, ನೌಕೆಯಲ್ಲಿರುವ ವಿಶೇಷವಾದ ಲೋಹದ ವೈರ್ಗಳಿಗೆ ವಿಮಾನವು ಬಂಧಿಸಲ್ಪಡುತ್ತದೆ. ಆ ಮೂಲಕ ವಿಮಾನವು ಕ್ಷಿಪ್ರವಾಗಿ ನಿಲುಗಡೆಗೊಳ್ಳುತ್ತದೆ. ಲ್ಯಾಂಡ್ ಆಗುವ ಸಂದರ್ಭದಲ್ಲಿ ಏನಾದರೂ ತೊಂದರೆ ಎದುರಾದರೆ, ಪೈಲಟ್ ವಿಮಾನದ ವೇಗವನ್ನು ಹೆಚ್ಚಿಸಿ, ಮರಳಿ ಟೇಕ್ ಆಫ್ ಮಾಡಿ, ವೃತ್ತಾಕಾರದಲ್ಲಿ ಸಂಚರಿಸಿ, ಮರಳಿ ಲ್ಯಾಂಡ್ ಆಗಲು ಪ್ರಯತ್ನಿಸುತ್ತಾನೆ.

ವಿಕ್ರಾಂತ್ ನೌಕೆಯು ತನ್ನ ಪ್ರಮುಖ ಉಪಕರಣಗಳನ್ನು ಪರಿಶೀಲಿಸಲು ನಾಲ್ಕು ಹಂತಗಳ ಸಮುದ್ರ ಪರೀಕ್ಷಾ ಪ್ರಯೋಗಗಳನ್ನು ಆಗಸ್ಟ್ 2021 ಹಾಗೂ ಜುಲೈ 2022ರ ಮಧ್ಯದಲ್ಲಿ ಕೈಗೊಂಡಿತ್ತು.

ಪ್ರಮುಖ ಪ್ರದರ್ಶಕ: ಎಲ್ಎಂ2500 ಗ್ಯಾಸ್ ಟರ್ಬೈನ್
ಕಳೆದ 30 ವರ್ಷಗಳಿಗೂ ಹೆಚ್ಚು ಕಾಲ ಜಿಇ ಸಂಸ್ಥೆಯು ಭಾರತೀಯ ನೌಕಾಪಡೆಗಾಗಿ ಎಲ್ಲಾ ಎಲ್ಎಂ2500 ಗ್ಯಾಸ್ ಟರ್ಬೈನ್ಗಳನ್ನು ಉತ್ಪಾದಿಸಿದೆ. ಈ ಎಲ್ಲಾ ಗ್ಯಾಸ್ ಟರ್ಬೈನ್ಗಳನ್ನು ಪರಿಶೀಲಿಸಿ, ಪರೀಕ್ಷಿಸುವ ಕಾರ್ಯವನ್ನು ಎಚ್ಎಎಲ್ ನಿರ್ವಹಿಸುತ್ತಿದೆ. ಇದರಿಂದ ಮೂರು ದಶಕಗಳ ಕಾಲ ಜಿಇ ಹಾಗೂ ಎಚ್ಎಎಲ್ ಜೊತೆಯಾಗಿ ಕೆಲಸ ಮಾಡಿವೆ. ಎಲ್ಎಂ2500 ಗ್ಯಾಸ್ ಟರ್ಬೈನ್ ಕಿಟ್ಗಳು ಜಿಇ ಸಂಸ್ಥೆಯ ಇವಾಂಡೇಲ್, ಓಹಿಯೋ, ಯುಎಸ್ ಕಾರ್ಖಾನೆಯಲ್ಲಿ ನಿರ್ಮಾಣಗೊಳ್ಳುತ್ತವೆ. ಅವುಗಳನ್ನು ಎಚ್ಎಎಲ್ನ ಬೆಂಗಳೂರಿನಲ್ಲಿರುವ ಇಂಡಸ್ಟ್ರಿಯಲ್ ಆಂಡ್ ಮರೀನ್ ಗ್ಯಾಸ್ ಟರ್ಬೈನ್ ಡಿವಿಷನ್ನಲ್ಲಿ ಜೋಡಿಸಿ, ಪರೀಕ್ಷೆಗೊಳಪಡಿಸಲಾಗುತ್ತದೆ. ಎಚ್ಎಎಲ್ ಸಂಸ್ಥೆಯು ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು, ಏವಿಯಾನಿಕ್ಸ್ ಹಾಗೂ ಏರೋಸ್ಪೇಸ್ ರಕ್ಷಣಾ ಉಪಕರಣಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಜಗತ್ತಿನ ಮುಂಚೂಣಿ ಕಂಪನಿಗಳಲ್ಲಿ ಒಂದಾಗಿದೆ.

ಜಿಇ ಮರಿನ್ ಸಂಸ್ಥೆಯು ಭಾರತೀಯ ನೌಕಾಪಡೆಗೆ ಒಂದು ನಿಷ್ಠಾವಂತ ಸಹಯೋಗಿಯಾಗಿದೆ. ಜಿಇ ಇಲ್ಲಿಯ ತನಕ ಭಾರತೀಯ ನೌಕಾಪಡೆಗೆ 18 ಇಂಜಿನ್ಗಳನ್ನು ಒದಗಿಸಿದ್ದು, ಅವೆಲ್ಲವೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಇ ಸಂಸ್ಥೆಗೆ ಪ್ರಾಜೆಕ್ಟ್ 17ಎ ನೌಕೆಗೆ ಹೆಚ್ಚಿನ ಪವರ್ ಯುನಿಟ್ಗಳನ್ನು ಒದಗಿಸುವ ಕಾರ್ಯವನ್ನೂ ಹಸ್ತಾಂತರಿಸುವುದರಿಂದ ಈ ಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಲಿದೆ. ಜಾಗತಿಕ ಮಾರುಕಟ್ಟೆಯ ಬಹುಪಾಲು ಆವರಿಸಿರುವ ಜಿಇ ಸಂಸ್ಥೆಯು ತನ್ನ ಗ್ಯಾಸ್ ಟರ್ಬೈನ್ ಬಳಸುವ ಭಾರತ ಮತ್ತು ಇತರ 39 ನೌಕಾಪಡೆಗಳಿಗೆ ಜಗತ್ತಿನಾದ್ಯಂತ ಸಾಗರದಲ್ಲಾಗಲಿ, ದಡದಲ್ಲಾಗಲಿ ಸಹಕಾರ ಒದಗಿಸುತ್ತದೆ. ಇದರೊಡನೆ ಇತರ ಸ್ನೇಹಿ ನೌಕೆಗಳೊಡನೆ ಪರಸ್ಪರ ಸಹಕಾರವೂ ಲಭಿಸುತ್ತದೆ.

ಜಿಇ ಸಂಸ್ಥೆಯ ಯಶಸ್ಸಿನ ಸ್ಪಷ್ಟ ಚಿತ್ರಣ ನೀಡಬೇಕಾದರೆ, ಅಮೆರಿಕಾದ ನೌಕಾಪಡೆಯ ಶೇ 95 ನೌಕೆಗಳ ಗ್ಯಾಸ್ ಟರ್ಬೈನ್ಗಳನ್ನು ಜಿಇ ಒದಗಿಸಿದೆ. ಜಾಗತಿಕವಾಗಿ 633 ನೌಕಾಪಡೆ ಹಡಗುಗಳಲ್ಲಿ ಜಿಇ ಗ್ಯಾಸ್ ಟರ್ಬೈನ್ಗಳು ಬಳಕೆಯಾಗಿವೆ. ಎಲ್ಎಂ2500 ಸಾಧನೆಗಳು ಅತ್ಯುತ್ತಮವಾಗಿದ್ದು, ಇದು ಸದಾ ಸಮರ ಸನ್ನದ್ಧವಾಗಿರುತ್ತದೆ. ಅದರೊಡನೆ ಇದರ ನಿರ್ವಹಣೆಯೂ ಸುಲಭವಾಗಿದ್ದು, ಜಾಗತಿಕ ಸಹಕಾರ ಲಭಿಸುವುದರಿಂದ ಎಲ್ಎಂ2500 ಇಂದಿಗೂ ಜಗತ್ತಿನ ನೌಕಾಪಡೆಗಳ ಪ್ರಮುಖ ಆಯ್ಕೆಯಾಗಿದೆ.

ಲೇಖಕ:ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.