ಐದು ದಿನಗಳ ಹಿಂದೆ, ಆಸ್ಪತ್ರೆಯಲ್ಲಿದ್ದ ಎಚ್.ಎಸ್.ದೊರೆಸ್ವಾಮಿ ಅವರನ್ನು ಭೇಟಿಯಾಗಲು ಹೋಗಿದ್ದರವಿಕೃಷ್ಣಾ ರೆಡ್ಡಿ ಅವರ ಮೊಬೈಲ್‌ನಿಂದ ಕರೆ ಮಾಡಿ ನನ್ನ ಜತೆ ಮಾತನಾಡಿದ್ದರು. ‘ಆನಂದದಿಂದ ಹೋಗುತ್ತಿದ್ದೇನೆ ರಾಮಸ್ವಾಮಿಯವರೇ. ಅಲ್ಲೂ ನಿಮ್ಮ ಸ್ಮರಣೆ ಮಾಡುತ್ತೇನೆ’ ಅಂದ್ರು. ಆ ಮಾತು ಮನಸ್ಸಿಗೆ ತುಂಬಾ ನೋವು ಉಂಟು ಮಾಡಿತು. ಪುರಭವನದ ಮುಂದೆ ಭೂ ಕಬಳಿಕೆ ವಿರುದ್ಧ ನಡೆದ ಹೋರಾಟದಲ್ಲಿ 39 ದಿನವೂ ಪಾಲ್ಗೊಂಡಿದ್ದರು. ‘ಇಳಿ ವಯಸ್ಸಿನಲ್ಲೂ ಆರೋಗ್ಯದಿಂದ ಇರುವುದರ ಗುಟ್ಟೇನು?’ ಅಂತ ಕೇಳಿದಾಗ, ನಕ್ಕು ಸುಮ್ಮನಾಗಿದ್ದರು. ಮತ್ತೆಕೇಳಿದಾಗ, ‘ಬಡತನ’ ಎಂದಿದ್ದರು.

ನೇರ–ನಿಷ್ಠುರವಾದಿಯಾಗಿದ್ದ ಅವರು ಯಾರನ್ನೂ ಮೆಚ್ಚಿಸುವ ಕೆಲಸ ಮಾಡುತ್ತಿರಲಿಲ್ಲ. ಯಾವಾಗಲೂ ಸಮಾಜಮುಖಿ ಕೆಲಸ. ಇಂದು ಗಾಂಧಿವಾದ, ಅಹಿಂಸಾವಾದ ಕೆಲಸ ಮಾಡುವುದಿಲ್ಲ ಎಂಬ ಭಾವನೆ ಹಲವರಲ್ಲಿದೆ. ಆದರೆ. ಈ ಎರಡಕ್ಕೂ ಜಯವಿದೆ ಎಂಬುದನ್ನುತೋರಿಸಿಕೊಟ್ಟರು. ನೊಂದವರು, ಅಸಹಾಯಕರಿಗೆ ಯಾವಾಗಲೂ ಸ್ಪಂದಿಸುತ್ತಿದ್ದರು. ಸುಖ ಜೀವನಕ್ಕೆ ಎಂದೂ ಮಾರು ಹೋದವರಲ್ಲ. ತ್ಯಾಗ ಜೀವನವೇ ಶ್ರೇಷ್ಠ ಎಂಬ ಅಚಲ ನಂಬಿಕೆ ಇತ್ತು. ಸತ್ಯ, ಅಹಿಂಸೆ ಅವರ ಜೀವನದ ಸತ್ವಗಳಾಗಿದ್ದವು.

ಬೆಂಗಳೂರಿನಲ್ಲಿ ಕಸದ ವಿಲೇವಾರಿ ಸಮಸ್ಯೆ ಕುರಿತು ಅವರೊಂದಿಗೆ ಚರ್ಚಿಸುವಾಗ,‘ಕಸ ಒಂದು ಸಮಸ್ಯೆಯಲ್ಲ. ಕಸ ತಿನ್ನುವವರಿಂದ ಕಸದ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಅವರು ಹೇಳಿದ ಮಾತು ಈಗಲೂ ನೆನಪಿದೆ. ಅವರುಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಸಾಮಾಜಿಕ ಸ್ವಾಸ್ಥ್ಯದ ಬಗ್ಗೆಯೂ ಕಾಳಜಿ ಇತ್ತು.
–ಎ.ಟಿ.ರಾಮಸ್ವಾಮಿ, ಅರಕಲಗೂಡು ಕ್ಷೇತ್ರದ ಶಾಸಕ

ಇವನ್ನೂ ಓದಿ
*ಎಚ್.ಎಸ್. ದೊರೆಸ್ವಾಮಿ: ಧರೆಯ ಮಡಿಲಿಗೆ ಹೋರಾಟದ ದೊರೆ
*ನುಡಿ-ನಮನ: ಹೋರಾಟನಿರತರ ಬೆಸೆಯುುವ ಚುಂಬಕ ಶಕ್ತಿ

*ನುಡಿ ನಮನ: ಭಗವತಿ ಕೆರೆಗೆ ಕೊನೆಗೂ ‘ದೊರೆ’ ಬರಲಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.