ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಯಕ್ಷರಂಗ’ಕ್ಕೀಗ ಇಪ್ಪತ್ತನೆಯ ವರ್ಷ

Published : 14 ನವೆಂಬರ್ 2024, 10:30 IST
Last Updated : 14 ನವೆಂಬರ್ 2024, 10:30 IST
ಫಾಲೋ ಮಾಡಿ
Comments
ರಾಜ್ಯ ಮಟ್ಟದ ದೊಡ್ಡ ದೊಡ್ಡ ಪತ್ರಿಕೆಗಳೇ ತಮ್ಮ ಓದುಗ ವರ್ಗವನ್ನು ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಯಕ್ಷಗಾನದಂತಹ ಸೀಮಿತ ಕ್ಷೇತ್ರಕ್ಕೆ ಮೀಸಲಾದ ಪತ್ರಿಕೆ ’ಯಕ್ಷರಂಗ’ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವುದು ವಿಶೇಷ. ಇದರ ಸಂಪಾದಕ ಗೋಪಾಲಕೃಷ್ಣ ಭಾಗವತರು ತುಂಬಾ ಸಂಯಮದಿಂದ ಸ್ವತಃ ಬರೆಯುತ್ತಾ, ಬರಹಗಳನ್ನೂ ಪ್ರಕಟಿಸುತ್ತಾ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದಾರೆ. ಅವರ ತಂದೆ ಕಡತೋಕಾ ಮಂಜುನಾಥ ಭಾಗವತರು ನಡೆಸುತ್ತಿದ್ದ ಪತ್ರಿಕೆಯನ್ನು ಮತ್ತೆ ಪ್ರಕಟಿಸುತ್ತಿರುವುದು ಒಂದು ಕ್ರಾಂತಿಕಾರಿ ಕೆಲಸವೇ ಸರಿ. ಇದರ ಮಾರ್ಗದರ್ಶಕನಾಗಿಯೂ ಪತ್ರಿಕೆಯ ಬರಹಗಾರನಾಗಿಯೂ ನಾನು ಇರುವುದು ನನಗೆ ಧನ್ಯತೆಯನ್ನು ತಂದಿದೆ. -
ಡಾ.ಎಂ.ಪ್ರಭಾಕರ ಜೋಶಿ, ಯಕ್ಷಗಾನದ ಹಿರಿಯ ಸಂಶೋಧಕರೂ ಅರ್ಥಧಾರಿಗಳು
ಯಕ್ಷಗಾನದ ಬಹುಶ್ರುತ ವಿದ್ವಾಂಸ ಮತ್ತು ಮುಂಚೂಣಿಯ ಸಂಶೋಧಕ ಡಾ.ಕೆ.ಎಂ.ರಾಘವ ನಂಬಿಯಾರರು ’ಯಕ್ಷರಂಗ’ ಪತ್ರಿಕೆಯ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ:- ’ಯಕ್ಷರಂಗ’ ಪತ್ರಿಕೆ ತನ್ನ ಪ್ರಕಟಣೆಯ ಇಪ್ಪತ್ತನೆ ವರ್ಷಕ್ಕೆ ಕಾಲಿರಿಸಿದೆ ಎಂಬುದು ಕಿವಿಗೆ ಹಬ್ಬವಾಗುವ ಸುದ್ದಿ. ಇದರ ಹಿಂದುಗಡೆ ಇರುವ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತರ ಸಾಹಸ ಎವರೆಸ್ಟ್ ಏರುವುದಕ್ಕೂ ಮಿಗಿಲೆಂದು ಆ ರಂಗದ ಬಗೆಗೆ ಗೊತ್ತಿರುವವರಿಗೆ ಗೊತ್ತಿದೆ. ಯಕ್ಷಗಾನದ ಜನಸಾಮಾನ್ಯರ ಗ್ರಹಿಕೆ, ತಜ್ಞರ ಗ್ರಹಿಕೆಗಳ ಅಂತರ ಅಪಾರವೆಂಬುದು ಅರಿವಾಗಿಯೂ ಎಲ್ಲ ಓದುಗರನ್ನು ತಡವುವ ಸಹನೆಯೊಂದಿಗೆ ಒಬ್ಬ ಪ್ರಬುದ್ಧ ಕಲಾ ಪತ್ರಕರ್ತನಾಗಿ ಭಾಗವತರು ಬೆಳೆದರೆಂಬುದು ಪತ್ರಿಕೆಯ ಸಂಸ್ಥಾಪಕ, ಸ್ವರ್ಗದಲ್ಲಿರುವ ಕುಶಾಗ್ರಮತಿ ಮಂಜು ಭಾಗವತರೂ ಹರುಷಗೊಳ್ಳುವ ಸಂಗತಿ. ತನ್ನ ಧೋರಣೆಯನ್ನು ಗೋಪಾಲಕೃಷ್ಣರು ವ್ಯಕ್ತಪಡಿಸಿದ ರೀತಿ - ’ ಓದುಗರೂ ಬರೆಯಬೇಕು, ಬರಹಗಾರರೂ ಓದಬೇಕು’ ಅವರ ಸಾಂಸ್ಕೃತಿಕ ಕಾಳಜಿಯನ್ನು ಹೇಳುತ್ತದೆ. ಅನೇಕ ಗಂಭೀರ ಪ್ರಶ್ನೆಗಳನ್ನು ಸಾರ್ವಜನಿಕ ಚರ್ಚೆಗೊಳಪಡಿಸಿದ ಈ ಪತ್ರಿಕೆ ತುಂಬು ಪ್ರೋತ್ಸಾಹಕ್ಕೆ ಅರ್ಹವಿದೆ.-
ಡಾ.ಕೆ.ಎಂ.ರಾಘವ ನಂಬಿಯಾರ್, ಬಹುಶ್ರುತ ಯಕ್ಷಗಾನ ವಿದ್ವಾಂಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT