1947ರ ಮೊದಲರ್ಧ ಭಾರತದ ಇತಿಹಾಸದಲ್ಲಿ ನಿರ್ಣಾಯಕವಾದ ಕಾಲಘಟ್ಟ. ವಸಾಹತುಶಾಹಿ ಆಡಳಿತ ಕೊನೆಗಾಣುವುದು ನಿಶ್ಚಿತವಾಗಿದ್ದ ಹಾಗೆಯೇ ದೇಶ ವಿಭಜನೆ ಕೂಡ ಖಚಿತವಾಗಿತ್ತು. ಆದರೆ ಅದು ಒಂದಕ್ಕಿಂತ ಹೆಚ್ಚು ಭಾಗವಾಗುತ್ತದೆಯೇ ಎಂಬುದು ಅನಿಶ್ಚಿತವಾಗಿತ್ತು. ಬೆಲೆಗಳು ಏರುತ್ತಿದ್ದವು, ಆಹಾರದ ಕೊರತೆ ಸಾಮಾನ್ಯವಾಗಿತ್ತು ಆದರೆ ಇದೆಲ್ಲಕ್ಕಿಂತಲೂ ಮಿಗಿಲಾಗಿ, ಭಾರತದ ಏಕತೆ ತೀವ್ರ ಒತ್ತಡಕ್ಕೆ ಸಿಲುಕಿತ್ತು.

ಇಂಥ ಸನ್ನಿವೇಶದಲ್ಲಿ 1947ರ ಮಧ್ಯಭಾಗದಲ್ಲಿ ರಾಜ್ಯಗಳ ಇಲಾಖೆ ಅಸ್ತಿತ್ವಕ್ಕೆ ಬಂದಿತು. ಗಾತ್ರ, ಜನಸಂಖ್ಯೆ, ಭೂಪ್ರದೇಶ ಅಥವಾ ಆರ್ಥಿಕ ಪರಿಸ್ಥಿತಿಯಲ್ಲಿ ವೈವಿಧ್ಯಮಯವಾಗಿದ್ದ 550 ಸಂಸ್ಥಾನಗಳೊಂದಿಗೆ ಮಾತುಕತೆ ನಡೆಸಿ ಅವುಗಳನ್ನು ಭಾರತದಲ್ಲಿ ವಿಲೀನ ಮಾಡಿಕೊಳ್ಳುವುದು ಈ ಇಲಾಖೆಯ ಮುಖ್ಯ ಉದ್ದೇಶವಾಗಿತ್ತು. ‘ರಾಜ್ಯಗಳ ಸಮಸ್ಯೆ ಎಷ್ಟು ಕ್ಲಿಷ್ಟಕರವಾಗಿದೆ ಎಂದರೆ ನೀವೊಬ್ಬರೇ ಇದನ್ನು ಪರಿಹರಿಸಬಲ್ಲವರಾಗಿದ್ದೀರಿ’ ಎಂದು ಮಹಾತ್ಮ ಗಾಂಧಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಹೇಳಿದ್ದರಲ್ಲಿ ಅಚ್ಚರಿಯೇನಿಲ್ಲ.

ನಿಖರತೆ, ದೃಢತೆ ಮತ್ತು ಆಡಳಿತಾತ್ಮಕ ಕೌಶಲದಲ್ಲಿ ಕೆಲಸ ಮಾಡಿದ ಪಟೇಲರು ಏಕೀಕರಣದ ಕೆಲಸವನ್ನು ಪೂರ್ಣಗೊಳಿಸಿದರು. ಕಡಿಮೆ ಸಮಯದಲ್ಲಿ ಬೃಹತ್ ಕಾರ್ಯವನ್ನು ಮಾಡಬೇಕಿತ್ತು. ಆದರೆ, ಅಸಾಧಾರಣ ವ್ಯಕ್ತಿತ್ವದ ಪಟೇಲರು ದೇಶಕ್ಕೆ ನಿರಾಶೆ ಮಾಡಲಿಲ್ಲ. ಅವರು ಮತ್ತು ಅವರ ತಂಡ ಒಂದೊಂದೇ ಸಂಸ್ಥಾನಗಳೊಂದಿಗೆ ಮಾತುಕತೆ ನಡೆಸಿತು ಮತ್ತು ಅವರೆಲ್ಲರಿಗೂ ‘ನೀವು ಸ್ವತಂತ್ರ ಭಾರತದ ಭಾಗವಾಗುತ್ತೀರಿ’ ಎಂಬ ಖಾತ್ರಿ ನೀಡಿತು.

ಭಾರತದ ಇಂದಿನ ಈ ಭೂಪಟಕ್ಕಾಗಿ ಸರ್ದಾರ್ ಪಟೇಲ್ ಅವರು ಅಂದು ಹಗಲಿರುಳು ಶ್ರಮಿಸಿದ್ದರು.

ಸ್ವಾತಂತ್ರ್ಯದ ಬಳಿಕ ಸರ್ಕಾರದ ಸೇವೆಯಿಂದ ನಿವೃತ್ತರಾಗುವುದಾಗಿ ವಿ.ಪಿ. ಮೆನನ್ ಹೇಳಿದ್ದರು. ಆದರೆ, ‘ಇದು ವಿಶ್ರಾಂತಿಯ ಅಥವಾ ನಿವೃತ್ತಿಯ ಸಮಯವಲ್ಲ’ ಎಂದು ಮೆನನ್ ಅವರಿಗೆ ಪಟೇಲರು ಸ್ಪಷ್ಟವಾಗಿ ತಿಳಿಸಿದ್ದರು. ಮೆನನ್ ಅವರನ್ನು ರಾಜ್ಯಗಳ ಇಲಾಖೆಯ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ‘ದಿ ಸ್ಟೋರಿ ಆಫ್ ದಿ ಇಂಟೆಗ್ರೇಷನ್ ಅಫ್ ಇಂಡಿಯನ್ ಸ್ಟೇಟ್ಸ್’ (ಭಾರತದ ರಾಜ್ಯಗಳ ಏಕೀಕರಣದ ಕತೆ) ಪುಸ್ತಕದಲ್ಲಿ ಪಟೇಲರ ನಾಯಕತ್ವ, ಇಡೀ ತಂಡ ಅವಿಶ್ರಾಂತವಾಗಿ ದುಡಿಯಲು ಅವರು ಕೊಟ್ಟ ಪ್ರೇರಣೆಯನ್ನು ಮೆನನ್ ವಿವರಿಸಿದ್ದಾರೆ.ಭಾರತದ ಜನರ ಹಿತಾಸಕ್ತಿಯೇ ಮೊದಲು, ಅದರಲ್ಲಿ ಯಾವುದೇ ರಾಜಿ ಸಲ್ಲ ಎಂಬುದು ಪಟೇಲರ ಸ್ಪಷ್ಟ ನಿಲುವಾಗಿತ್ತು ಎಂದು ಮೆನನ್ ಬರೆಯುತ್ತಾರೆ.

1947ರ ಆಗಸ್ಟ್ 15ರಂದು ನಾವು ಹೊಸ ಸಾಮ್ರಾಜ್ಯದ ಉದಯದ ಸಂಭ್ರಮ ಆಚರಿಸಿದೆವು, ಆದರೆ ರಾಷ್ಟ್ರ ನಿರ್ಮಾಣದ ಕೆಲಸ ಇನ್ನೂ ಪೂರ್ಣವಾಗಿರಲಿಲ್ಲ. ಸ್ವತಂತ್ರ ಭಾರತದ ಪ್ರಥಮ ಗೃಹ ಸಚಿವರಾಗಿ ಅವರು, ಆಡಳಿತಾತ್ಮಕ ಚೌಕಟ್ಟು ರೂಪಿಸಿದರು, ಅದು ಸರ್ಕಾರದ ದೈನಂದಿನ ಆಡಳಿತದಲ್ಲಿ ಜನರ ಹಿತವನ್ನು ಅದರಲ್ಲೂ ನಿರ್ದಿಷ್ಟವಾಗಿ ಬಡವರು ಮತ್ತು ಶೋಷಿತರ ಹಿತಾಸಕ್ತಿಗಳನ್ನು ರಕ್ಷಿಸುತ್ತಾ ಬಂದಿದೆ.

ಪಟೇಲ್ ಅವರು ನುರಿತ ಆಡಳಿತಗಾರ. 1920ರ ದಶಕದಲ್ಲಿ ಅವರು ಅಹಮದಾಬಾದ್ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಸ್ವತಂತ್ರ ಭಾರತದ ಆಡಳಿತಾತ್ಮಕ ಚೌಕಟ್ಟನ್ನು ಬಲಪಡಿಸುವ ಸಲುವಾಗಿ ಕೆಲಸ ಮಾಡಿದ್ದರು. ಅಹಮದಾಬಾದ್ನಲ್ಲಿದ್ದಾಗ, ಅವರು ನಗರದ ಸ್ವಚ್ಛತೆಗಾಗಿ ಗಣನೀಯ ಸೇವೆ ಸಲ್ಲಿಸಿದ್ದರು.

ಇಂದು, ಭಾರತವು ಚಲನಶೀಲ ಸಹಕಾರ ವಲಯಕ್ಕೆ ಹೆಸರಾಗಿದೆ, ಈ ಶ್ರೇಯದ ಅತಿ ದೊಡ್ಡ ಪಾಲು ಸರ್ದಾರ್ ಪಟೇಲ್ ಅವರಿಗೆ ಸಲ್ಲಬೇಕು. ಸ್ಥಳೀಯ ಸಮುದಾಯದ ಅದರಲ್ಲೂ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿ ಪಟೇಲ್ ಅವರ ಚಿಂತನೆಗಳಲ್ಲಿಯೇ ಅಮೂಲ್ನ ಬೇರುಗಳನ್ನು ಗುರುತಿಸಬಹುದು. ಹಲವರಿಗೆ ಆಸರೆ ಮತ್ತು ಗೌರವದ ನೆಲೆ ನೀಡಿರುವ ವಸತಿ ಸಹಕಾರ ಸಂಘಗಳ ಕಲ್ಪನೆಯನ್ನು ಜನಪ್ರಿಯಗೊಳಿಸಿದ್ದು ಕೂಡ ಪಟೇಲ್ ಅವರೇ.

ವಿಶ್ವಾಸ ಮತ್ತು ಬದ್ಧತೆ ಎಂಬ ಎರಡು ಗುಣಗಳು ಸರ್ದಾರ್ ಪಟೇಲ್ ಅವರಿಗೆ ಸಮಾನಾರ್ಥಕವಾಗಿವೆ. ಬರ್ದೋಲಿ ಸತ್ಯಾಗ್ರಹವನ್ನು ಮುನ್ನಡೆಸಿದ್ದ ಪಟೇಲರು, ರೈತನ ಮಗ. ಕಾರ್ಮಿಕ ವರ್ಗಕ್ಕೂ ಅವರು ಧ್ವನಿಯಾಗಿದ್ದರು. ಹಾಗಾಗಿ ರೈತರು ಮತ್ತು ಕಾರ್ಮಿಕರು ಪಟೇಲರನ್ನು ತಮ್ಮ ಆಶಾಕಿರಣ ಎಂದೇ ಪರಿಗಣಿಸಿದ್ದರು. ಭಾರತದ ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿಯ ಚಿಂತನೆಗಳನ್ನು ಹೊಂದಿದ್ದ ಪಟೇಲರ ಜತೆ ಕೆಲಸ ಮಾಡಲು ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಕಾತರರಾಗಿದ್ದರು.

ರಾಜಕೀಯ ಸಹವರ್ತಿಗಳಿಗೂ ಪಟೇಲರ ಮೇಲೆ ಭಾರಿ ನಂಬಿಕೆ ಇತ್ತು. ಮಾರ್ಗದರ್ಶನಕ್ಕೆ ಗಾಂಧೀಜಿ ದೊರೆಯದಿದ್ದಾಗ ಪಟೇಲ್ ಅವರ ಬಳಿ ಹೋಗುತ್ತಿದ್ದುದಾಗಿ ಆಚಾರ್ಯ ಕೃಪಲಾನಿ ಹೇಳಿದ್ದರು. ‘ದಿಟ್ಟ ನಿರ್ಧಾರಗಳ ಛಲ ಬಿಡದ ವ್ಯಕ್ತಿ’ ಎಂದು ಸರೋಜಿನಿ ನಾಯ್ಡು ಅವರು ಪಟೇಲರನ್ನು ಬಣ್ಣಿಸಿದ್ದರು.

ಜಾತಿ, ಮತ, ಧರ್ಮ, ನಂಬಿಕೆ, ವಯಸ್ಸಿನ ಭೇದವಿಲ್ಲದೆ ಎಲ್ಲರಿಗೂ ಪಟೇಲರ ಬಗ್ಗೆ ವಿಶ್ವಾಸವಿತ್ತು, ಗೌರವವಿತ್ತು.

ಈ ವರ್ಷದ ಪಟೇಲ್ ಜಯಂತಿಗೆ ಇನ್ನಷ್ಟು ವೈಶಿಷ್ಟ್ಯಗಳಿವೆ. 130 ಕೋಟಿ ಭಾರತೀಯರ ಆಶೀರ್ವಾದದ ಫಲವಾಗಿ ‘ಏಕತೆಯ ಪ್ರತಿಮೆ ಇಂದು (ಅಕ್ಟೋಬರ್ 31) ಅನಾವರಣಗೊಳ್ಳುತ್ತಿದೆ. ನರ್ಮದಾ ನದಿಯ ದಂಡೆಯಲ್ಲಿರುವ ಈ ಪ್ರತಿಮೆ ವಿಶ್ವದಲ್ಲಿಯೇ ಅತಿ ಎತ್ತರದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಮಣ್ಣಿನ ಮಗ’ ಸರ್ದಾರ್ ಪಟೇಲ್ ಅವರು ಬಾನೆತ್ತರಕ್ಕೆ ನಿಂತು ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಮತ್ತು ಸ್ಫೂರ್ತಿ ನೀಡುತ್ತಿದ್ದಾರೆ.

ಈ ಬೃಹತ್ ಪ್ರತಿಮೆಯ ಸಾಕಾರಕ್ಕೆ ಹಗಲಿರುಳು ಶ್ರಮಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ. ನನ್ನ ಮನಸ್ಸು 2013ರ ಅಕ್ಟೋಬರ್ 31ಕ್ಕೆ ಸಾಗುತ್ತದೆ, ನಾವು ಅಂದು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದೆವು. ದಾಖಲೆಯ ಅವಧಿಯಲ್ಲಿ ಇಷ್ಟು ಬೃಹತ್ ಯೋಜನೆ ಸಾಕಾರಗೊಂಡಿದ್ದು, ಪ್ರತಿ ಭಾರತೀಯನೂ ಹೆಮ್ಮೆ ಪಡುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ನೀವೆಲ್ಲರೂ ‘ಏಕತೆಯ ಪ್ರತಿಮೆ’ಗೆ ಭೇಟಿ ನೀಡುವಂತೆ ಕೋರುತ್ತಿದ್ದೇನೆ.

ನಮ್ಮ ಒಗ್ಗಟ್ಟು ಮತ್ತು ಮಾತೃಭೂಮಿ ಏಕೀಕರಣದ ಸಂಕೇತವಾಗಿ ಈ ಪ್ರತಿಮೆ ಇದೆ. ವಿಭಜಿತರಾದರೆ ನಮಗೆ ನಮ್ಮನ್ನೇ ಎದುರಿಸಲಾಗದು, ಆದರೆ, ಒಟ್ಟಾಗಿದ್ದರೆ ಜಗವನ್ನೇ ಗೆಲ್ಲಬಹುದು, ಪ್ರಗತಿ ಮತ್ತು ಔನ್ನತ್ಯದಲ್ಲಿ ಹೊಸ ಎತ್ತರಕ್ಕೆ ಏರಬಹುದು ಎಂಬುದನ್ನು ನಮಗೆ ಈ ಪ್ರತಿಮೆ ನೆನಪಿಸಲಿದೆ.

ಸಾಮ್ರಾಜ್ಯಶಾಹಿ ಇತಿಹಾಸವನ್ನು ಕೆಡವಿ ಭೌಗೋಳಿಕ ಏಕೀಕರಣಕ್ಕಾಗಿ ಅದ್ಭುತ ವೇಗದಲ್ಲಿ ಶ್ರಮಿಸಿದ ವ್ಯಕ್ತಿ ಪಟೇಲ್. ದೇಶ ಹೋಳಾಗದಂತೆ ರಕ್ಷಿಸಿದರು ಮತ್ತು ಅತ್ಯಂತ ದುರ್ಬಲವಾದ ಪ್ರದೇಶಗಳನ್ನೂ ರಾಷ್ಟ್ರೀಯತೆಯ ಚೌಕಟ್ಟಿನೊಳಗೆ ಜೋಡಿಸಿದರು. ಇಂದು, 130 ಕೋಟಿ ಭಾರತೀಯರು ಬಲಿಷ್ಠ ಪ್ರಗತಿಪರ, ಸಮಗ್ರ ನವಭಾರತದ ನಿರ್ಮಾಣಕ್ಕಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದೇವೆ.ಪಟೇಲರು ಬಯಸಿದ್ದಂತೆ, ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಪಕ್ಷಪಾತಕ್ಕೆ ಆಸ್ಪದವಿಲ್ಲದಂತೆ ಅಭಿವೃದ್ಧಿಯ ಫಲವನ್ನು ಅತ್ಯಂತ ದುರ್ಬಲರಿಗೂ ತಲುಪಿಸುವ ನಿಟ್ಟಿನಲ್ಲಿ ನಾವು ಪ್ರತಿಯೊಂದು ನಿರ್ಧಾರಗಳನ್ನೂ ಕೈಗೊಳ್ಳುತ್ತಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.