ಸರ್ಕಾರವು ಮುಂದಿನ ವರ್ಷ ಜನಗಣತಿ ನಡೆಸಲು ಯೋಜನೆ ರೂಪಿಸಿದೆ ಎಂಬ ವರದಿಗಳು ಪ್ರಕಟವಾಗಿವೆ. ಆದರೆ, ಅದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ವರದಿಗಳ ಪ್ರಕಾರ, ಮುಂದಿನ ವರ್ಷ ಆರಂಭಗೊಳ್ಳುವ ಜನಗಣತಿ ಪ್ರಕ್ರಿಯೆಯು 2026ರಲ್ಲಿ ಪೂರ್ಣಗೊಳ್ಳಲಿದೆ. 2021ರಲ್ಲಿಯೇ ನಡೆಯಬೇಕಿದ್ದ ಜನಗಣತಿಯ ವಿಧಾನ ಕುರಿತು ಇನ್ನೂ ಏನೂ ತಿಳಿದುಬಂದಿಲ್ಲ. ಗಣತಿ ನಡೆಸುವುದಕ್ಕೆ ಇಷ್ಟೊಂದು ವಿಳಂಬ ಮಾಡುತ್ತಿರುವುದು ಏಕೆ ಎಂಬುದಕ್ಕೂ ಯಾವುದೇ ಕಾರಣವನ್ನು ನೀಡಲಾಗಿಲ್ಲ. ದೇಶದಾದ್ಯಂತ ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿದ್ದ ಕಾರಣ, 2021ರಲ್ಲಿ ಜನಗಣತಿ ನಡೆಸುವುದು ಸಾಧ್ಯವಿರಲಿಲ್ಲ. ಸಾಂಕ್ರಾಮಿಕ ಆರಂಭವಾಗಿದ್ದ ಸಂದರ್ಭದಲ್ಲಿ ಜನಗಣತಿಗೆ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ, ದೇಶವು ಸಾಂಕ್ರಾಮಿಕದಿಂದ ಹೊರಬಂದ ಬಳಿಕ ಗಣತಿ ನಡೆಸಲು ಅಗತ್ಯವಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿಲ್ಲ. ಹತ್ತು ವರ್ಷಕ್ಕೊಂದು ಬಾರಿ ನಡೆಯುವ ಗಣತಿಯು 1881ರಿಂದ ಈವರೆಗೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಸಾಂಕ್ರಾಮಿಕದ ಕಾರಣಕ್ಕೆ ಜನಗಣತಿ ನಡೆಸಲಾಗದ 44 ದೇಶಗಳ ಪೈಕಿ ಭಾರತವೂ ಒಂದು.

ಜನರಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಜನಗಣತಿಯಲ್ಲಿ ಸಂಗ್ರಹಿಸಲಾಗುತ್ತದೆ. ಅರ್ಥವ್ಯವಸ್ಥೆ, ಸಮಾಜ ಕಲ್ಯಾಣ ಮತ್ತು ಇತರ ಕ್ಷೇತ್ರಗಳ ನೀತಿಗಳನ್ನು ರೂಪಿಸುವುದಕ್ಕೆ ಜನಗಣತಿಯ ದತ್ತಾಂಶವು ಸರ್ಕಾರ ಮತ್ತು ಇತರ ಸಂಘಟನೆಗಳಿಗೆ ಅತ್ಯಗತ್ಯ. ಜನರ ಜೀವನೋಪಾಯ ಮತ್ತು ಇತರ ಅಗತ್ಯಗಳಿಗೆ ಸಂಬಂಧಿಸಿ ಕಾರ್ಯಕ್ರಮಗಳನ್ನು ರೂಪಿಸಲು ಈ ಮಾಹಿತಿ ಬೇಕು. ಅದಕ್ಕಾಗಿ ಜನರ ಆದಾಯ ಮತ್ತು ಮನೆಯಲ್ಲಿ ಇರುವ ಜನರ ಸಂಖ್ಯೆ, ಮೂಲಸೌಕರ್ಯ ಗಳ ಲಭ್ಯತೆ, ಶಿಕ್ಷಣ ಮಟ್ಟ, ಉದ್ಯೋಗದ ಸ್ಥಿತಿಯಂತಹ ಮಾಹಿತಿ ಬೇಕಾಗುತ್ತದೆ. ಪ್ರದೇಶ, ರಾಜ್ಯಗಳು, ಸಾಮಾಜಿಕ ಗುಂಪುಗಳಲ್ಲಿ ಈ ಎಲ್ಲ ವಿವರಗಳು ಭಿನ್ನ ವಾಗಿರುತ್ತವೆ. ಜನರ ಸಮಸ್ಯೆಗಳು ಮತ್ತು ಅಭಿವೃದ್ಧಿಯಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಬೇಕಾದ ನೀತಿಗಳನ್ನು ರೂಪಿಸಲು ನಿರ್ದಿಷ್ಟ ಮತ್ತು ನಂಬಲರ್ಹ ದತ್ತಾಂಶದ ಅಗತ್ಯ ಇದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹಾಗೂ ಕಲ್ಯಾಣ ಮತ್ತು ಅಭಿವೃದ್ಧಿಯ ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿರುವ ಭಾರತದಂತಹ ದೇಶಕ್ಕೆ ಈ ಮಾಹಿತಿ ಅತ್ಯಂತ ಅಗತ್ಯ. ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯನ್ನು ಹೊಂದಿದೆ. ಅರ್ಥವ್ಯವಸ್ಥೆಯ ಬೆಳವಣಿಗೆಯನ್ನು ಸುಸ್ಥಿರಗೊಳಿಸುವಂತಹ ನೀತಿ ರೂಪಿಸಲು ಕೂಡ ವಿಶ್ವಾಸಾರ್ಹ ದತ್ತಾಂಶ ಬೇಕಿದೆ.

ಜನಗಣತಿಯ ಜೊತೆಗೆ ಜಾತಿ ಜನಗಣತಿಯನ್ನೂ ನಡೆಸಬೇಕು ಎಂಬ ಬೇಡಿಕೆ ಬಲವಾಗಿ ವ್ಯಕ್ತವಾಗಿದೆ. ಇಡೀ ದೇಶಕ್ಕೆ ಅನ್ವಯಿಸುವಂತೆ ಈಗ ಇರುವ ಜಾತಿ ಜನಗಣತಿಯ ಮಾಹಿತಿಯು 1931ರಲ್ಲಿ ಸಂಗ್ರಹಿಸಿ
ದ್ದಾಗಿದೆ. ಹಾಗಾಗಿ, ಆ ಮಾಹಿತಿ ಈಗ ಬಳಕೆಗೆ ಯೋಗ್ಯವಲ್ಲ. ಅಸಮಾನತೆ ನಿವಾರಣೆ ಮತ್ತು ಇತರ ನೀತಿಗಳನ್ನು ರೂಪಿಸಲು ಜಾತಿ ಜನಗಣತಿಯ ಮಾಹಿತಿ ಬೇಕಾಗಿದೆ ಎಂದು ವಿರೋಧ ಪಕ್ಷಗಳು ಗಟ್ಟಿಯಾಗಿ ಪ್ರತಿಪಾದಿಸುತ್ತಿವೆ. ಆದರೆ, ಜನಗಣತಿಯಲ್ಲಿ ಜಾತಿ ಜನಗಣತಿಯೂ ಸೇರಿಕೊಳ್ಳಲಿದೆಯೇ
ಎಂಬುದರ ಕುರಿತು ಸರ್ಕಾರ ಏನನ್ನೂ ಹೇಳಿಲ್ಲ. ಹೊಸದಾಗಿ ಸಂಗ್ರಹಿಸಲಾಗುವ ಜನಸಂಖ್ಯೆಯ ದತ್ತಾಂಶದ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಡೆಸುವ ಪ್ರಸ್ತಾವವೂ ಇದೆ ಎಂಬುದು ಗಣತಿಗೆ ಸಂಬಂಧಿಸಿದ ಇನ್ನೊಂದು ವಿವಾದಾತ್ಮಕ ಅಂಶ. ಇದರಿಂದಾಗಿ, ಜನಸಂಖ್ಯೆ ನಿಯಂತ್ರಿಸು
ವಲ್ಲಿ ಯಶಸ್ವಿಯಾಗಿರುವ ರಾಜ್ಯಗಳಿಗೆ ಲೋಕಸಭೆಯಲ್ಲಿ ಕಡಿಮೆ ಪ್ರಾತಿನಿಧ್ಯ ದೊರೆಯಲಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ವಿಫಲವಾದ ರಾಜ್ಯಗಳ ಪ್ರಾತಿನಿಧ್ಯ ಹೆಚ್ಚಲಿದೆ. ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ಪುನರ್ ವಿಂಗಡಣೆಗೆ ದಕ್ಷಿಣದ ರಾಜ್ಯಗಳ ಪ್ರಬಲ ವಿರೋಧ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.