ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದು ದೆಹಲಿಯು ಮಾಲಿನ್ಯದಿಂದ ತತ್ತರಿಸುತ್ತಿದೆ. ನಗರದಲ್ಲಿ ಜನಜೀವನದ ಮೇಲೆ ಇದು ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ. ಇದು, ಜನರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿದೆ, ಅನಾರೋಗ್ಯದಿಂದ ಈ ಮೊದಲೇ ತೊಂದರೆಗೆ ಒಳಗಾಗಿದ್ದವರು ಇನ್ನಷ್ಟು ಸಂಕಟ ಪಡುವಂತಾಗಿದೆ. ಶಾಲೆ ಮತ್ತು ಇತರ ಹಲವು ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಡಚಣೆ ಉಂಟಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕವು ‘ಅತಿ ತೀವ್ರ ಕುಸಿತ’ವನ್ನೂ ದಾಟಿ ಹೋಗಿದೆ. ಗಾಳಿಯ ಗುಣಮಟ್ಟ ಕುಸಿತ ತಡೆಯುವ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಳಂಬ ಮಾಡಿರುವ ದೆಹಲಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಲಾರಿಗಳಿಗೆ ನಗರಕ್ಕೆ ಪ್ರವೇಶ ನಿಷೇಧ ಮತ್ತು ಸರ್ಕಾರ
ಕೈಗೆತ್ತಿಕೊಂಡಿರುವ ನಿರ್ಮಾಣ ಕಾಮಗಾರಿಗಳಿಗೆ ತಾತ್ಕಾಲಿಕ ತಡೆಯಂತಹ ಕ್ರಮಗಳನ್ನು ತೆಗೆದು
ಕೊಳ್ಳಬೇಕಿತ್ತು. ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಕೆಲವು ಪ್ರದೇಶಗಳಲ್ಲಿ 500 ದಾಟಿದೆ. ಸಾಮಾನ್ಯವಾಗಿ ಇದು 100 ಅಥವಾ ಅದಕ್ಕಿಂತ ಕಡಿಮೆ ಇರಬೇಕು. ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಈಗ ಗಾಳಿಯ ಗುಣಮಟ್ಟದ ತುರ್ತುಸ್ಥಿತಿ ಎದುರಾಗಿದೆ.

ದೆಹಲಿಯಲ್ಲಿ ಚಳಿಗಾಲದಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುವುದು ಪ್ರತಿವರ್ಷವೂ ಕಾಡುವ ಬಿಕ್ಕಟ್ಟಾಗಿದೆ. ಈ ವರ್ಷದ ಆರಂಭದಿಂದಲೂ ಗಾಳಿಯ ಗುಣಮಟ್ಟ ಕಳಪೆಯಾಗಿಯೇ ಇದೆ. ಜಗತ್ತಿನ ಅತ್ಯಂತ ಮಲಿನ ನಗರ ಎಂಬ ಕುಖ್ಯಾತಿಯನ್ನು ದೆಹಲಿ ಕೆಲವು ವರ್ಷಗಳಿಂದ ಹೊಂದಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ಲಿನ ಬಳಿಕ ಕೂಳೆಗೆ ಬೆಂಕಿ ಹಾಕುವುದರಿಂದ ದೆಹಲಿಯ ಗಾಳಿಯ ಗುಣಮಟ್ಟ ಕುಸಿಯುತ್ತದೆ. ಚಳಿಗಾಲದಲ್ಲಿ ಇದರ ಪರಿಣಾಮ ಇನ್ನೂ ಹೆಚ್ಚು. ಕೂಳೆಗೆ ಬೆಂಕಿ ಹಾಕುವುದನ್ನು ತಡೆಯಲು ತಾಂತ್ರಿಕ, ಆರ್ಥಿಕ ಮತ್ತು ಇತರ ಕಾರಣಗಳಿಂದಾಗಿ ಸಾಧ್ಯವಾಗಿಲ್ಲ. ಬಿತ್ತನೆಗೂ ಮುನ್ನ ಹೊಲಕ್ಕೆ ಬೆಂಕಿ ಇಟ್ಟು ಕೂಳೆಯನ್ನು ಸುಡುವುದು ರೈತರಿಗೆ ಅನಿವಾರ್ಯ. ಈ ಸಮಸ್ಯೆಗೆ ಕಾರ್ಯಸಾಧುವಾದ ಪರಿಹಾರ
ವೊಂದನ್ನು ಕಂಡುಕೊಳ್ಳಬೇಕು. ರೈತರ ಹಿತಾಸಕ್ತಿಯನ್ನೂ ಕಾಯ್ದುಕೊಂಡು ಮಾಲಿನ್ಯವನ್ನೂ ತಗ್ಗಿಸುವ ಪರಿಣಾಮಕಾರಿ ಪರಿಹಾರ ಬೇಕಾಗಿದೆ. ಹಲವು ವರ್ಷಗಳಿಂದ ಈ ಕುರಿತು ಚಿಂತನೆ, ಯೋಜನೆ ಮತ್ತು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರೂ ದೊಡ್ಡ ಮಟ್ಟದಲ್ಲಿ ಪ್ರಯೋಜನ ಆಗಿಲ್ಲ. ಸರ್ಕಾರಗಳು ಮತ್ತು ಇತರ ಸಂಸ್ಥೆಗಳ ವೈಫಲ್ಯವನ್ನು ಇದು ತೋರುತ್ತದೆ.

ದೆಹಲಿಯಲ್ಲಿ ಮಾಲಿನ್ಯವು ಇಷ್ಟೊಂದು ತೀವ್ರವಾಗಿ ಏಕಿದೆ? ದೆಹಲಿಯದ್ದೇ ಆದ ಕೆಲವು ಕಾರಣಗಳು ಇವೆ. ಹೆಚ್ಚುತ್ತಲೇ ಇರುವ ವಾಹನಗಳ ಸಂಖ್ಯೆ ಮತ್ತು ನಿರ್ಮಾಣ ಚಟುವಟಿಕೆಗಳು, ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು, ಕಾರ್ಖಾನೆಗಳಿಂದ ಹೊರಬರುವ ಹೊಗೆ ಈ ಎಲ್ಲವೂ ನಗರದ ಮಾಲಿನ್ಯಕ್ಕೆ ಕಾರಣಗಳು. ವಾಹನಗಳ ಮೇಲೆ ನಿರ್ಬಂಧ, ಮೋಡ ಬಿತ್ತನೆ, ಡ್ರೋನ್ಗಳ ಬಳಕೆ, ನೀರು ಚಿಮುಕಿಸುವಿಕೆಯಂತಹ ಕ್ರಮಗಳಿಂದಲೂ ಹೆಚ್ಚಿನ ಪ್ರಯೋಜನ ಆಗಿಲ್ಲ. ಕಾರ್ಯಸಾಧುವಾದ ಮತ್ತು ದೀರ್ಘಾವಧಿಯ ಪರಿಹಾರಕ್ಕಾಗಿ ಬಲವಾದ ರಾಜಕೀಯ ಇಚ್ಛಾಶಕ್ತಿ ಇರಬೇಕು. ಕೇಂದ್ರ, ರಾಜ್ಯ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳ ನಡುವೆ ಸಹಕಾರ ಹಾಗೂ ಸಮನ್ವಯ ಇರಬೇಕು. ಸ್ಪಷ್ಟ ಮತ್ತು ಸಮಗ್ರವಾದ ಕಾರ್ಯತಂತ್ರ, ಸಾರ್ವಜನಿಕರ ಬೆಂಬಲವೂ ಇರಬೇಕು. ಸರ್ಕಾರಗಳು ಮತ್ತು ಸರ್ಕಾರದ ಅಧೀನದ ಸಂಸ್ಥೆಗಳು ಪರಸ್ಪರ ದೂಷಣೆಯಲ್ಲಿಯೇ ತೊಡಗಿವೆ ಮತ್ತು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು
ಪ್ರಯತ್ನಿಸುತ್ತಿವೆ. ಮಾಲಿನ್ಯದ ವಿರುದ್ಧದ ಹೋರಾಟವು ನಿರಂತರವಾಗಿರಬೇಕು ಮತ್ತು ಅದು ಯಾವುದೇ ಒಂದು ಋತುವಿಗೆ ಸೀಮಿತವಾಗಿ ಇರಬಾರದು. ಇತರ ಹಲವು ನಗರಗಳು, ಕೆಲವು ಸಣ್ಣ ಪಟ್ಟಣಗಳು ಕೂಡ ಮಾಲಿನ್ಯದ ಅಪಾಯ ಎದುರಿಸುತ್ತಿವೆ. ಚಳಿಗಾಲದ ಋತುವಿನಲ್ಲಿ ಮಾಲಿನ್ಯಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವುದಕ್ಕೆ ನಡೆಸಿದ ಪ್ರಯತ್ನದಲ್ಲಿಯೇ ಬಹಳ ಸಮಯ ಕಳೆದುಹೋಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.