ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಅಗಿದ್ದ ಜಿ.ಎನ್. ಸಾಯಿಬಾಬಾ ಅವರ ಸಾವು, ಸರ್ಕಾರದ ಕಡೆಯಿಂದ ಆಗಿರುವ ದೋಷವನ್ನು ತೋರಿಸುತ್ತಿದೆ. ಅಲ್ಲದೆ, ಇದು ನ್ಯಾಯದಾನ ವ್ಯವಸ್ಥೆಯಲ್ಲಿನ ಕಟು ವಾಸ್ತವಕ್ಕೆ ಹಿಡಿದಿರುವ ಕೈಗನ್ನಡಿಯೂ ಹೌದು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. 10 ವರ್ಷ ಜೈಲಿನಲ್ಲಿದ್ದ ಸಾಯಿಬಾಬಾ ಅವರನ್ನು ನ್ಯಾಯಾಲಯವು ಕೆಲವು ತಿಂಗಳ ಹಿಂದೆ ಬಿಡುಗಡೆ ಮಾಡಿತ್ತು. ಸಾಯಿಬಾಬಾ ಅವರು ಶೇಕಡ 90ರಷ್ಟು ಅಂಗವಿಕಲರಾಗಿದ್ದರು, ಗಾಲಿಕುರ್ಚಿಗೆ ಅವರು ಸೀಮಿತರಾಗಿದ್ದರು. ಅವರಿಗೆ ಪಿತ್ತಕೋಶದಲ್ಲಿ ಕಲ್ಲು ಆಗಿತ್ತು. ಅದನ್ನು ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಿದ ನಂತರ ಅವರ ಆರೋಗ್ಯ ಪರಿಸ್ಥಿತಿ ವಿಷಮಗೊಂಡು, 57 ವರ್ಷ ವಯಸ್ಸಿನ ಅವರು ಶನಿವಾರ ಮೃತಪಟ್ಟಿದ್ದಾರೆ. 57 ವರ್ಷ ಸಾಯುವ ವಯಸ್ಸಲ್ಲ. ಬಹಳ ದೀರ್ಘ ಅವಧಿಗೆ ಅವರನ್ನು ಜೈಲಿನಲ್ಲಿ ಇರಿಸಿದ್ದು, ಜೈಲಿನ ಕೊಠಡಿಯು ಬಹಳ ಇಕ್ಕಟ್ಟಾಗಿದ್ದುದು ಕೂಡ ಅವರ ಸಾವಿಗೆ ಕಾರಣ ಎನ್ನಲು ಆಧಾರಗಳಿವೆ. ಗಾಲಿಕುರ್ಚಿ ಇಲ್ಲದೆ ಎಲ್ಲಿಗೂ ತೆರಳಲು ಸಾಧ್ಯವಿಲ್ಲದಿದ್ದ ಅವರಿಗೆ ಪದೇ ಪದೇ ಜಾಮೀನು ನಿರಾಕರಿಸಲಾಯಿತು. ಅವರನ್ನು ಭಯೋತ್ಪಾದಕನಂತೆ, ಶಿಕ್ಷೆಗೆ ಗುರಿಯಾದ ಅಪರಾಧಿಯಂತೆ ಕಾಣಲಾಯಿತು. ಜೈಲಿನಿಂದ ಹೊರಗೆ ಬರಲು, ತಾವು ಅಮಾಯಕ ಎಂಬುದನ್ನು ಮನವರಿಕೆ ಮಾಡಿಕೊಡಲು ಅವರು ನ್ಯಾಯಾಲಯಗಳಲ್ಲಿ ಹಲವು ಹಂತಗಳಲ್ಲಿ ಹೋರಾಟ ನಡೆಸಬೇಕಾಯಿತು.

ಸಾಯಿಬಾಬಾ ಅವರನ್ನು ಮಹಾರಾಷ್ಟ್ರ ಸರ್ಕಾರವು 2014ರಲ್ಲಿ ಬಂಧಿಸಿತು. ಮಾವೊವಾದಿಗಳ ಜೊತೆ ಅವರಿಗೆ ನಂಟು ಇದೆ ಎಂಬ ಆರೋಪ ಹೊರಿಸಲಾಯಿತು. ಅವರ ಬಂಧನ ಹಾಗೂ ಅವರ ವಿರುದ್ಧ ಕರಾಳ ಯುಎಪಿಎ ಕಾಯ್ದೆಯ ಅಡಿಯಲ್ಲಿ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದರ ಬಗ್ಗೆ ಆರಂಭದಿಂದಲೂ ಹಲವು ಪ್ರಶ್ನೆಗಳು ಇದ್ದವು. ಮೂರು ವರ್ಷಗಳ ನಂತರ ವಿಚಾರಣಾ ನ್ಯಾಯಾಲಯವೊಂದು ಅವರನ್ನು ಅಪರಾಧಿ ಎಂದು ಘೋಷಿಸಿತು. ಆದರೆ ಮುಂಬೈ ಹೈಕೋರ್ಟ್ ಈ ಆದೇಶವನ್ನು ರದ್ದುಪಡಿಸಿತು. ಈ ಆದೇಶ ಬರುವಷ್ಟರಲ್ಲಿ, ಅಪರಾಧಿ ಎಂಬ ಘೋಷಣೆ ಆಗಿ ಐದು ವರ್ಷಗಳು ಕಳೆದಿದ್ದವು. ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಆಧರಿಸಿ, ಒಂದು ಶನಿವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ವಿಶೇಷ ಪೀಠವು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು. ನಂತರದಲ್ಲಿ ಪ್ರಕರಣವನ್ನು ಹೈಕೋರ್ಟ್ಗೆ ಮತ್ತೆ ರವಾನಿಸಿತು. ತನ್ನ ಮೊದಲಿನ ನಿಲುವನ್ನು ಪುನರುಚ್ಚರಿಸಿದ ಹೈಕೋರ್ಟ್, ಆರೋಪಗಳಿಗೆ ಪೂರಕವಾಗಿ ಯಾವುದೇ ಸಾಕ್ಷ್ಯವನ್ನು ಒದಗಿಸದ ಮಹಾರಾಷ್ಟ್ರ ಸರ್ಕಾರವನ್ನು ಕಟುವಾಗಿ ಟೀಕಿಸಿತು. ನಕ್ಸಲ್ ಸಿದ್ಧಾಂತಕ್ಕೆ ಸಂಬಂಧಿಸಿದ ವಿಷಯಗಳನ್ನು ಡೌನ್ಲೋಡ್ ಮಾಡಿಕೊಂಡ ಮಾತ್ರಕ್ಕೆ, ಸಿದ್ಧಾಂತದ ಬಗ್ಗೆ ಸಹಾನುಭೂತಿ ಹೊಂದಿದ್ದ ಮಾತ್ರಕ್ಕೆ ಯುಎಪಿಎ ಅಡಿಯಲ್ಲಿ ಬಂಧಿಸುವ ಅಗತ್ಯ ಇಲ್ಲ ಎಂದು ಕೂಡ ಕೋರ್ಟ್ ಹೇಳಿತು.

ಸಾಯಿಬಾಬಾ ಅವರ ದುರಂತಮಯ ಜೀವನವು ವ್ಯವಸ್ಥೆಯು ಅದೆಷ್ಟು ವಿಷಕಾರಿಯಾಗಿರುತ್ತದೆ, ವ್ಯವಸ್ಥೆಯಲ್ಲಿನ ಹುಳುಕುಗಳು ಸರ್ಕಾರದ ಶಕ್ತಿಯ ಮುಂದೆ ವ್ಯಕ್ತಿಯೊಬ್ಬನನ್ನು ಹೇಗೆ ನಿಸ್ಸಹಾಯಕನನ್ನಾಗಿ ಮಾಡುತ್ತವೆ ಎಂಬುದನ್ನು ತೋರಿಸುತ್ತಿವೆ. ಸರ್ಕಾರಗಳು ತಮ್ಮ ತಾಕತ್ತನ್ನು ಮನಸೋಇಚ್ಛೆ ಬಳಕೆ ಮಾಡುವುದರ ಮೇಲೆ ನ್ಯಾಯಾಂಗ ವ್ಯವಸ್ಥೆಯು ನಿಯಂತ್ರಣ ಹೇರಬೇಕಿತ್ತು. ಆದರೆ ಹಲವು ಸಂದರ್ಭಗಳಲ್ಲಿ ವ್ಯವಸ್ಥೆಯು ಸಾಯಿಬಾಬಾ ಅವರ ನೆರವಿಗೆ ಬರಲಿಲ್ಲ. ಅವರಿಗೆ ವ್ಯವಸ್ಥೆಯ ನೆರವು ಸಿಗುವ ಹೊತ್ತಿಗೆ ಅವರ ಜೀವನದ 10 ವರ್ಷಗಳು ಕಳೆದುಹೋಗಿದ್ದವು. ಆದರ್ಶ ಸ್ಥಿತಿಯಲ್ಲಿ ಪ್ರತಿ ಪ್ರಜೆಗೂ ಮೂಲಭೂತ ಹಕ್ಕುಗಳ ಖಾತರಿ ಇದೆ. ಆದರೆ ಹಲವು ಸಂದರ್ಭಗಳಲ್ಲಿ ಪ್ರಜೆಗಳ ನಿಜ ಜೀವನದಲ್ಲಿ ಹಕ್ಕುಗಳ ಖಾತರಿ ಇರುವುದಿಲ್ಲ. 10 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರು ಎಂಬುದಷ್ಟೇ ಸಾಯಿಬಾಬಾ ಅವರಿಗೆ ಆದ ನಷ್ಟವಲ್ಲ. ಅವರು ತಮ್ಮ ಉದ್ಯೋಗ ಕಳೆದುಕೊಂಡರು, ತಮ್ಮ ಕುಟುಂಬದಿಂದ ದೂರವಾದರು, ಜೈಲುವಾಸವು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಿತು. ವ್ಯಕ್ತಿಯ ರಕ್ಷಣೆಗೆ ಕಾನೂನು ಹಾಗೂ ನ್ಯಾಯಾಲಯಗಳು ಇವೆಯಾದರೂ, ಸರ್ಕಾರವು ಹಟಕ್ಕೆ ಬಿದ್ದರೆ ಅಮಾಯಕ ವ್ಯಕ್ತಿಯೊಬ್ಬನನ್ನು ‘ಶಿಕ್ಷೆ’ಗೆ ಗುರಿಪಡಿಸಬಲ್ಲದು ಎಂಬ ಸಂಗತಿಯು ಆತಂಕ ಮೂಡಿಸುವಂಥದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.