ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅಧ್ಯಾಪಕರ ಬೋಧನಾ ಅವಧಿಯನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ, ಉನ್ನತ ಶಿಕ್ಷಣ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮಾನುಸಾರ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರು ವಾರಕ್ಕೆ 16 ಗಂಟೆ ಬೋಧನೆ ಮಾಡಬೇಕು ಮತ್ತು 6 ಗಂಟೆ ಸಂಶೋಧನೆಯಲ್ಲಿ ತೊಡಗಬೇಕು.

ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿರದವರು ಅದಕ್ಕೆ ನಿಗದಿಯಾದ ಅವಧಿಯನ್ನು ಬೋಧನೆಗೆ ಬಳಸಲಿ ಎಂಬುದು ಸರ್ಕಾರದ ಸುತ್ತೋಲೆಯ ಹಿಂದಿರುವ ಆಶಯ. ಇಲ್ಲಿರುವ ತರ್ಕವನ್ನು ಅಲ್ಲಗಳೆಯಲಾಗದು. ಬೋಧನಾ ಅವಧಿ ಕಡಿಮೆ ಆಗಬೇಕು ಎಂದಾದಲ್ಲಿ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಬದ್ಧತೆಯನ್ನು ಅಧ್ಯಾಪಕರು ಪ್ರದರ್ಶಿಸಬೇಕಿದೆ. ಬೋಧನಾ ಅವಧಿಯ ಹೆಚ್ಚಳ ಅಂದರೆ ಒಟ್ಟು ಕೆಲಸದ ಅವಧಿಯ ಹೆಚ್ಚಳ ಎಂದೇನೂ ಅರ್ಥವಲ್ಲ.

ಕಾಲೇಜಿನಲ್ಲಿ ಇರುವ ಸಮಯದಲ್ಲೇ ಪ್ರತಿ ದಿನ ಇನ್ನೊಂದು ತಾಸು ಹೆಚ್ಚಿಗೆ ತರಗತಿಯಲ್ಲಿ ಪಾಠ ಹೇಳಬೇಕಾಗುತ್ತದೆ. ಆದರೆ ಬಹುಪಾಲು ಅಧ್ಯಾಪಕರು ಇದನ್ನು ‘ಹೊರೆ’ ಎಂದು ಭಾವಿಸಿದಂತಿದೆ. ಇದು ಆಡಳಿತಾತ್ಮಕ ನಿರ್ಧಾರವೇ ಹೊರತು, ಬೋಧನಾ ಸಾಮರ್ಥ್ಯ, ಅದಕ್ಕೆ ಬೇಕಾದ ಸಿದ್ಧತೆ ಮತ್ತು ಶೈಕ್ಷಣಿಕ ವಾಸ್ತವಗಳನ್ನು ಒರೆಗೆ ಹಚ್ಚಿ ತೆಗೆದುಕೊಂಡ ತೀರ್ಮಾನವಲ್ಲ ಎಂಬುದು ಪ್ರಾಧ್ಯಾಪಕರ ಅಭಿಮತ. ವಾಸ್ತವವಾಗಿ ನಿಯಮಾವಳಿ ಪ್ರಕಾರ ಸಂಶೋಧನೆಯಲ್ಲಿ ಅಧ್ಯಾಪಕರು ತೊಡಗಿಕೊಳ್ಳದೇ ಇದ್ದಲ್ಲಿ ಆಗುವ 6 ಗಂಟೆಗಳ ನಷ್ಟವನ್ನು ತುಂಬುವುದು ಹೇಗೆ ಎಂಬ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ.

ಬೋಧನಾ ಅವಧಿ ಹೆಚ್ಚಳದ ಸುತ್ತ ರೂಪುಗೊಂಡಿರುವ ಸಾರ್ವಜನಿಕ ಚರ್ಚೆ ಮೂಲ ವಿಷಯವನ್ನು ಬಿಟ್ಟು ಬೇರೆ ವಿಚಾರಗಳನ್ನೂ ಚರ್ಚೆಯ ಮುನ್ನೆಲೆಗೆ ತಂದಿದೆ. ಸರ್ಕಾರ ಆರ್ಥಿಕ ಹೊರೆ ಇಳಿಸಿಕೊಳ್ಳಲು ಈ ಕ್ರಮ ಕೈಗೊಂಡಿದೆ; ಇದರಿಂದ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬಂಥ ವಾದಗಳನ್ನು ಮಂಡಿಸಲಾಗುತ್ತಿದೆ. ಅತಿಥಿ ಉಪನ್ಯಾಸಕರ ಸಮಸ್ಯೆಗೆ ಬೇರೆ ಆಯಾಮವೇ ಇದೆ. ಅದನ್ನು ಇದರ ಜತೆ ತಳಕು ಹಾಕುವುದು ಉಚಿತವಲ್ಲ.

ಉನ್ನತ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂಬುದು ಸರ್ವವಿದಿತ. ಅದನ್ನು ಸರಿಪಡಿಸುವುದು ಹೇಗೆ? ಬೋಧನಾ ಕ್ರಮವನ್ನು ಮತ್ತಷ್ಟು ಉತ್ತಮಪಡಿಸುವುದು ಹೇಗೆ? ಎಂಬುದರ ಕುರಿತು ಚಿಂತಿಸುವುದು ಇಂದಿನ ತುರ್ತು ಅಗತ್ಯ. ಗುಣಮಟ್ಟದ ಬೋಧನೆಗೆ ನಿರಂತರ ಕಲಿಕೆ ಅಗತ್ಯ. ಹೀಗಾಗಿ ಸಂಶೋಧನೆ ಮತ್ತು ಬೋಧನೆ ಬೇರೆ ಬೇರೆ ಅಲ್ಲವೇ ಅಲ್ಲ. ಕಲಿಸುವಿಕೆ ಯಾಂತ್ರಿಕವಾಗದಿರಲು ಅಧ್ಯಾಪಕರಲ್ಲಿ ಸಂಶೋಧನಾ ಮನಸ್ಸು ಇರುವುದು ಅತ್ಯಗತ್ಯ. ಅಧ್ಯಾಪಕರಿಗೆ ಈ ವಿಚಾರದಲ್ಲಿ ಬದ್ಧತೆ ಇರಬೇಕು. ಆದರೆ ನಮ್ಮ ಸಂಶೋಧನಾ ಪ್ರಬಂಧಗಳನ್ನು ನೋಡಿದರೆ ಬೋಧನಾ ಗುಣಮಟ್ಟ ಹೇಗಿದೆ ಎಂಬುದು ಮನವರಿಕೆಯಾಗುತ್ತದೆ.

ನಮ್ಮ ಶೈಕ್ಷಣಿಕ ವಾತಾವರಣ ಆರೋಗ್ಯಕರವಾಗಿಲ್ಲ. ಇದಕ್ಕೆ ಕಾರಣ ಯಾರು? ಇದರಲ್ಲಿ ಬೋಧಕರ ಪಾಲೆಷ್ಟು? ಉನ್ನತ ಶಿಕ್ಷಣ ಇಲಾಖೆಯ ಪಾಲೆಷ್ಟು? ಈ ಕುರಿತು ಆತ್ಮಾವಲೋಕನ ಆಗಬೇಕಾಗಿದೆ. ಹಲವಾರು ಕಾಲೇಜುಗಳಲ್ಲಿ ಸಂಶೋಧನಾ ಕೇಂದ್ರಗಳು ಇಲ್ಲ. ಅದಕ್ಕೆ ಪೂರಕವಾದ ವಾತಾವರಣ ಮತ್ತು ಸೌಕರ್ಯಗಳಿಲ್ಲ ಅಂತ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಎಷ್ಟು ಸರಿ? ಸೌಕರ್ಯ ಕೊರತೆಯೇ ಬೋಧನಾ ಅವಧಿ ಹೆಚ್ಚಿಸಲು ಕಾರಣವಾಗಿದ್ದರೆ ಅದನ್ನು ಒಪ್ಪಲಾಗದು. ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಲು, ಅಧ್ಯಾಪಕರ ಸಂಶೋಧನಾ ಸಾಮರ್ಥ್ಯ ಹೆಚ್ಚಿಸಲು ಬೇಕಾದ ಎಲ್ಲ ಉಪಕ್ರಮಗಳನ್ನೂ ಸರ್ಕಾರ ಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.