ದುಃಖ ಮರೆಯಲು ಏನು ಮಾಡಬೇಕು? ನಾವು ಸಾಮಾನ್ಯರು ದುಃಖದಿಂದ ನಿದ್ದೆ ಬರಲಿಲ್ಲ ಎಂದು ನಿದ್ದೆ ಗುಳಿಗಿ ತಗೊಂಡು ಮಲಗುತ್ತೀವಿ. ಎಚ್ಚರಾದ ತಕ್ಷಣ ಮತ್ತೆ ದುಃಖ ಹಾಗೆಯೇ ಇರುತ್ತದೆ. ತುಂಬಾ ಮದ್ಯ ಕುಡಿಯೋರನ್ನು ಕೇಳಿ ‘ಯಾಕೆ ಕುಡೀತಿ’ ಅಂತ. ‘ದುಃಖ ಬಹಳ ಆಗ್ಯದೆ. ಅದಕ್ಕೆ ಕುಡೀತೀನಿ’ ಅಂತಾರ. ನಿಶೆ ಇಳಿದ ಮೇಲೆ ದುಃಖ ಕಿಸೆಯಲ್ಲೇ ಬಂದು ಇರ್ತದ.

ಹಳ್ಯಾಗ ಹೇಳ್ತಾರ, ‘ಜಾಗ ಬದಲಾಯಿಸು ಚಲೋ ಆಗ್ತದ’ ಅಂತಾರ. ಹಾಂಗಂತ ಟ್ರಿಪ್ಪಿಗೆ ಹೋಗ್ತಾರ. ಆದರೂ ಸಂಸಾರದ ತಾಪ ಕಡಿಮೆ ಆಗಲ್ಲ. ಜಾಗ ಬದಲಾದರೂ ಮನದಲ್ಲಿ ತಾಪ ಬದಲಾಗದು. ಸಾಮಾನ್ಯ ಮನುಷ್ಯ ದುಃಖವನ್ನು ಮರೆಯಲು ಪ್ರಯತ್ನ ಪಡ್ತಾನ. ಆದರೆ ಒಬ್ಬ ಜ್ಞಾನಿ ಅದನ್ನು ಬೇರು ಸಹಿತ ಕಳಕೋಬೇಕು ಅಂತ ಪ್ರಯತ್ನ ಪಡ್ತಾನ. ದುಃಖ ಇದೆ, ನೋವು ಇದೆ. ಹಾಗಾದರೆ ಅದಕ್ಕೊಂದು ಕಾರಣವೂ ಇರಬೇಕಲ್ಲ? ಕಾರಣ ಇದೆ ಎಂದ ಮೇಲೆ ಅದಕ್ಕೊಂದು ಪರಿಹಾರವೂ ಇರಬೇಕಲ್ಲ? ಅದಕ್ಕೆ ಶರಣರ, ಈ ದೇಶದ ದಾರ್ಶನಿಕರ ಸಂಶೋಧನೆ ಎಷ್ಟು ಅದ್ಭುತ! ವಿಷಯಗಳಿಂದ ನೀನು ದೂರವಾಗಬಹುದು, ಆದರೆ ವಿಷಯಗಳ ರಸ ನಿನ್ನ ಹೃದಯದಲ್ಲಿದ್ದು ತಾಪ ಕೊಡತೈತಿ. ಇದರಿಂದ ಹೇಗೆ ದೂರವಾಗಬಹುದು ಎಂದು ಅವರು ಸಂಶೋಧನೆ ಮಾಡಿದರು. ಶಬ್ದದಿಂದ
ದೂರವಾಗಬಹುದು, ರೂಪದಿಂದ ದೂರವಾಗಬಹುದು, ಆದರೆ ವಿಷಯದ ನೆನಪು ಹೃದಯದಲ್ಲೇ ಇದ್ದು ತಾಪ ಕೊಡ್ತದಲ್ಲ ಇದರಿಂದ ದೂರವಾಗುವುದು ಹೇಗೆ? ನೆನಪು ಮರೆಯಾಗುವುದಕ್ಕೆ ಪರಮ ಶ್ರೇಷ್ಠವಾದದ್ದು ನೋಡು ಅಂದರು. ಯಾವುದು ಶ್ರೇಷ್ಠವಾದದ್ದು?

ಒಂದು ಹಳ್ಳಿಯಲ್ಲಿ ಒಬ್ಬ ಒಂದು ಆಕಳನ್ನು ಇನ್ನೊಬ್ಬರ ಮನೆಯಿಂದ ಖರೀದಿ ಮಾಡಿದ್ದ. ತಂದು ತನ್ನ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ. ಆದರೆ, ಬೆಳಿಗ್ಗೆ ಅದನ್ನು ಮೇಯಲು ಬಿಟ್ಟರೆ ಅದು ಸಂಜೆ ವೇಳೆಗೆ ಮತ್ತೆ ಮಾರಾಟ ಮಾಡಿದವನ ಮನೆಗೇ ಹೋಗತೈತಿ. ಇವ ಹೋಗಿ ಕರಕೊಂಡು ಬಂದು ಮತ್ತೆ ತನ್ನ ಕೊಟ್ಟಿಗೆಯಲ್ಲಿ ಕಟ್ಟಿದರೂ ಮಾರನೇ ದಿನವೂ ಹಾಗೆಯೇ ಮಾಡತೈತಿ. ಆ ಮೇಲೆ ದಿನಾ ಅಲ್ಲದಿದ್ದರೂ ಆಗಾಗ ಅಲ್ಲಿಗೆ ಹೋಗತೈತಿ. ಅದು ಯಾವಾಗ ಅಲ್ಲಿಗೆ ಹೋಗುವುದನ್ನು ಬಿಡತೈತಿ ಅಂದರ ಈ ಕೊಟ್ಟಿಗೆಯಲ್ಲಿ ಒಂದು ಕರು ಹಾಕಿದ ನಂತರ ಅಲ್ಲಿಗೆ ಹೋಗುವುದನ್ನು ನಿಲ್ಲಿಸತೈತಿ. ಹಾಗೆಯೇ, ಮನುಷ್ಯನ ಹೃದಯದೊಳಗೆ ಜ್ಞಾನವೊಂದು ಕರು ಹಾಕಿದರೆ ವಿಷಯಗಳ ರಸದಿಂದ ಮನಸ್ಸು ಮುಕ್ತವಾಗತೈತಿ. ಜ್ಞಾನ ಅಂದರೆ ಅಂತರಂಗದ ಬೆಳಕು. ಸತ್ಯವನ್ನು ತೋರಿಸುವುದು. ಇರುವ ವಿಷಯವನ್ನು ಇದ್ದಂತೆ ತೋರಿಸುವುದು ಜ್ಞಾನ. ಅಂತಹ ಜ್ಞಾನ ನಮ್ಮ ಹೃದಯದಲ್ಲಿ ಇತ್ತು ಎಂದರೆ ಜಗತ್ತಿನ ಯಾವ ದುಃಖಗಳೂ ನಮಗೆ ಬಾಧಿಸುವುದಿಲ್ಲ.

ಭಾರತೀಯರು ಎಂದರೆ ಯಾರು? ಬೆಳಕನ್ನು, ಜನರನ್ನು ಪ್ರೀತಿಸುವ ಜನ ಇದ್ದಾರಲ್ಲ ಅವರು ಭಾರತೀಯರು. ಜ್ಞಾನವನ್ನು ಪ್ರೀತಿಸುವ ಜನರಿಗೆ ಭಾರತೀಯರು ಅಂತಾರೆ. ನಿಸರ್ಗ ಕೊಟ್ಟ ಈ ಜೀವನದಲ್ಲಿ ಸಂತೋಷ ಪೂರ್ಣ ಜೀವನವನ್ನು ಕಟ್ಟಿಕೊಳ್ಳುವ ಜ್ಞಾನ ಇಲ್ಲ ಅಂತಾದರೆ ಮನುಷ್ಯನನ್ನು ವಿಚಾರಪೂರ್ಣ ಪ್ರಾಣಿ ಅಂತ ಹೇಗೆ ಕರೆಯೋದು? ಸುಂದರವಾದ ಜೀವನವನ್ನು ಕಟ್ಟಿಕೊಳ್ಳುವ ಕಲೆ ಗೊತ್ತಿರಬೇಕು. ಗೊತ್ತಿಲ್ಲ ಎಂದರೆ ಈ ಬದುಕಿಗೆ ಏನರ್ಥ ಐತಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.