ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ನುಡಿ ಬೆಳಗು

ADVERTISEMENT

ನುಡಿ ಬೆಳಗು: ತಾಪ ಕೊಡುವ ಕೋಪ!

ಸಣ್ಣ ಕೋಪವೂ ಮನುಷ್ಯನಿಗೆ ಸಾಕಷ್ಟು ತಾಪ ಕೊಡುತೈತಿ. ಇತಿಹಾಸದಲ್ಲಿ ಒಂದು ಅದ್ಭುತ ಘಟನೆ ನಡೆಯಿತು. ಒಂದು ಸಣ್ಣ ಕೋಪ ಬದುಕನ್ನು ಎಷ್ಟು ಹೀನಾಯ ಮಾಡತೈತಿ ಅನ್ನೋದಕ್ಕೆ ಅದು ಉದಾಹರಣೆ.
Last Updated 12 ನವೆಂಬರ್ 2024, 0:01 IST
ನುಡಿ ಬೆಳಗು: ತಾಪ ಕೊಡುವ ಕೋಪ!

ನುಡಿ ಬೆಳಗು: ಮನಸ್ಸು ಮಹಾದೇವನ ಗೂಡು!

ಮನಸ್ಸಿನ ಆರೋಗ್ಯ ಚೆನ್ನಾಗಿರಬೇಕು ಅಂದರ ಏನು ಮಾಡಬೇಕು? ಮನವೆಂಬುದಿದೇನು ಮಹಾದೇವನ ಇರುವು ನೋಡಾ ಅಂತಾರ ಶರಣರು. ಮನಸ್ಸು ಕೂಡ ಮಹಾದೇವನ ಸ್ವರೂಪ.
Last Updated 10 ನವೆಂಬರ್ 2024, 23:35 IST
ನುಡಿ ಬೆಳಗು: ಮನಸ್ಸು ಮಹಾದೇವನ ಗೂಡು!

ನುಡಿ ಬೆಳಗು - 62: ಅಮೃತವಾಗುವ ಅನ್ನ!

ನಾವು ಹೊಟ್ಟೆಗೆ ತಿನ್ನೋದು ಮಾತ್ರ ಆಹಾರವಲ್ಲ. ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಎಂಬ ಪಂಚೇಂದ್ರಿಯಗಳಿಂದ ಏನೇನು ಸ್ವೀಕಾರ ಮಾಡ್ತೀವಲ್ಲ ಅದೆಲ್ಲವೂ ಆಹಾರವೆ. ಕಣ್ಣಿಗೆ ರೂಪ, ಕಿವಿಗೆ ಶಬ್ದ, ಚರ್ಮಕ್ಕೆ ಸ್ಪರ್ಶ, ನಾಲಿಗೆಗೆ ರುಚಿ, ಮೂಗಿಗೆ ಗಂಧ ಆಹಾರ.
Last Updated 7 ನವೆಂಬರ್ 2024, 23:50 IST
ನುಡಿ ಬೆಳಗು - 62: ಅಮೃತವಾಗುವ ಅನ್ನ!

ನುಡಿ ಬೆಳಗು - 61: ಆರೋಗ್ಯದ ಕಲೆ!

ನಾವು ಉಣ್ಣುವ ಅನ್ನದಿಂದ ನಮ್ಮ ವಿಚಾರಗಳು ನಿರ್ಣಯವಾಗತೈತಿ ಅಂತ ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಲ್ಲಿ ಅಥಣಿ ಶಿವಯೋಗಿಗಳು ಅಂತಾ ಒಬ್ಬರು ಇದ್ದರು. ಬಹಳ ದೊಡ್ಡ ತಪಸ್ವಿಗಳು. ಅವರ ದೇವರ ಪೂಜೆಗೆ ಪ್ರತಿನಿತ್ಯ ಒಬ್ಬರು ಆಕಳ ಹಾಲು ತಂದುಕೊಡುತ್ತಿದ್ದರು.
Last Updated 7 ನವೆಂಬರ್ 2024, 0:00 IST
ನುಡಿ ಬೆಳಗು - 61: ಆರೋಗ್ಯದ ಕಲೆ!

ನುಡಿ ಬೆಳಗು –60 | ದೇಹ ಎಂಬ ಅದ್ಭುತ!

ದೇಹದ ಆರೋಗ್ಯ ಮುಖ್ಯ. ದೇಹ ಎಷ್ಟು ಅದ್ಭುತ ನೋಡಿ. ಅಲ್ಲಮಪ್ರಭು ಈ ದೇಹಕ್ಕೆ ಅದ್ಭುತ ಎಂದರು. ಯಾಕೆ ಅದ್ಭುತ? ಯಾಕೆಂದರ, ‘ಭೂತ ಭೂತವ ಕೂಡಿ ಅದ್ಭುತವಾಯ್ತು’ ಅಂತಾರ ಅಲ್ಲಮಪ್ರಭು. ಈ ದೇಹ ಪಂಚಮಹಾಭೂತಗಳಿಂದ ತಯಾರಾಗೈತಿ.
Last Updated 6 ನವೆಂಬರ್ 2024, 0:25 IST
ನುಡಿ ಬೆಳಗು –60 | ದೇಹ ಎಂಬ ಅದ್ಭುತ!

ನುಡಿ ಬೆಳಗು –59 | ಆರೋಗ್ಯವೇ ನಿಜವಾದ ಸಂಪತ್ತು!

ಬಹಳ ದುಡ್ಡಿದ್ದರೆ ಸಂತೋಷವಾಗಿರಬಹುದು ಎಂದು ನಮಗ ಅನಸತೈತಿ. ದುಡ್ಡಿದ್ದರೆ ಮನೆ ತುಂಬಾ ಪುಸ್ತಕ ಖರೀದಿ ಮಾಡಬಹುದು. ಆದರೆ, ಜ್ಞಾನ ಖರೀದಿ ಮಾಡಲು ಆಗವಲ್ದು. ದುಡ್ಡಿದ್ದರೆ ಔಷಧಿ ಖರೀದಿ ಮಾಡಬಹುದು. ಆದರೆ ಆರೋಗ್ಯ ಖರೀದಿ ಮಾಡಲು ಆಗವಲ್ದು. ಹಾಸಿಗೆ ಕೊಳ್ಳಬಹುದು ನಿದ್ದೆಯನ್ನಲ್ಲ.
Last Updated 4 ನವೆಂಬರ್ 2024, 23:17 IST
ನುಡಿ ಬೆಳಗು –59 | ಆರೋಗ್ಯವೇ ನಿಜವಾದ ಸಂಪತ್ತು!

ನುಡಿ ಬೆಳಗು -58: ಸಂತೋಷಕ್ಕಾಗಿ ಹುಡುಕಾಟ!

ನಾವು ವಾಸಿಸುವ ಈ ಭೂಮಿ ಸ್ವರ್ಗ ಸಮಾನವಾದುದು. ಇದು ಋಷಿಗಳ ಅಭಿಪ್ರಾಯ. ಇಂತಹ ಭೂಮಿ ಇನ್ನೊಂದು ಸಿಗಾಕೆ ಸಾಧ್ಯವಿಲ್ಲ. ಒಂದು ಜೀವ ಹುಟ್ಟಿ ವಿಕಾಸ ಆಗಲು ಏನೇನು ಬೇಕೋ ಅದೆಲ್ಲವನ್ನೂ ನಿಸರ್ಗ ನಿರ್ಮಾಣ ಮಾಡೈತಿ.
Last Updated 4 ನವೆಂಬರ್ 2024, 0:10 IST
ನುಡಿ ಬೆಳಗು -58: ಸಂತೋಷಕ್ಕಾಗಿ ಹುಡುಕಾಟ!
ADVERTISEMENT

ನುಡಿ ಬೆಳಗು –57: ರಾಶಿ ಮೇಲೆ ಭವಿಷ್ಯ ಇಲ್ಲ!

ನಾವು ನಮ್ಮ ರಾಶಿಯ ಮೇಲೆ ನಮ್ಮ ಭವಿಷ್ಯ ನಿರ್ಮಾಣ ಆಗತೈತಿ ಅಂತ ತಿಳಕೊಂಡೇವಿ. ರಾಶಿ ಮೇಲೆ ನಮ್ಮ ಭವಿಷ್ಯ ನಿರ್ಮಾಣ ಆಗಲ್ಲ
Last Updated 31 ಅಕ್ಟೋಬರ್ 2024, 23:45 IST
ನುಡಿ ಬೆಳಗು –57: ರಾಶಿ ಮೇಲೆ ಭವಿಷ್ಯ ಇಲ್ಲ!

ನುಡಿ ಬೆಳಗು –56: ಮಾತು ನೋವು ತರಬಾರದು

ಮಾತು ಇನ್ನೊಬ್ಬರಿಗೆ ನೋವು ತರಬಾರದು. ನಾವು ಒಬ್ಬರಿಗೆ ಚುಚ್ಚು ಮಾತನ್ನು ಆಡಿರ್ತೀವಿ. ನಿಂದನೆ ನುಡಿಯನ್ನಾಡಿರ್ತೀವಿ.
Last Updated 31 ಅಕ್ಟೋಬರ್ 2024, 0:28 IST
ನುಡಿ ಬೆಳಗು –56: ಮಾತು ನೋವು ತರಬಾರದು

ನುಡಿ ಬೆಳಗು –55: ಯಾವುದು ಪೂಜೆ?

ಜೀವನ ಅಂದರೆ ಮೂರು ಅಂಶಗಳ ನಿರ್ಮಾಣ. ಮೈ, ಮಾತು, ಮನಸ್ಸು ಇವುಗಳ ಸಂಗಮವೇ ಜೀವನ. ಇವುಗಳನ್ನು ಸರಿಯಾಗಿ ಬಳಸಬೇಕು. ಇವುಗಳನ್ನು ಕೆಟ್ಟದ್ದಕ್ಕೆ ಉಪಯೋಗ ಮಾಡಬಾರದು. ನಮಗೆ ಕೈಗಳು ಇದಾವೆ.
Last Updated 29 ಅಕ್ಟೋಬರ್ 2024, 23:40 IST
ನುಡಿ ಬೆಳಗು –55: ಯಾವುದು ಪೂಜೆ?
ADVERTISEMENT
ADVERTISEMENT
ADVERTISEMENT