ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ಷಿಕ ಧನಸಹಾಯ ಯೋಜನೆಯ ಅನುದಾನ ಹಂಚಿಕೆಯಲ್ಲಿ ಅಕ್ರಮ, ಅವ್ಯವಹಾರ ನಡೆಯುತ್ತಿದೆ ಎಂಬ ದೂರುಗಳಿಗೆ ಸಂಬಂಧಿಸಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಅವರೊಡನೆ ನಡೆಸಿದ ಪುಟ್ಟ ಸಂದರ್ಶನ ಇಲ್ಲಿದೆ.

* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅವ್ಯಾಹತವಾಗಿ ಅಕ್ರಮ ನಡೆಯುತ್ತಿದೆಯಲ್ಲ?

ಇಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಕೆಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲರಿಗೂ ಸಲ್ಲುವ ಸರಳ ಮತ್ತು ಸುಗಮ ಪ್ರಕ್ರಿಯೆ ಅಳವಡಿಸಲಾಗಿದೆ.

* ರವೀಂದ್ರ ಕಲಾಕ್ಷೇತ್ರದ ಆಡಿಟೋರಿಯಂ ಬುಕ್ಕಿಂಗ್ ಕಡಿವಾಣ ಹಾಕಿದ್ದೇಕೆ?

ಹೌದು, ಕೆಲವು ಪಟ್ಟಭದ್ರರು ತಮ್ಮ ಹೆಸರಲ್ಲಿ ಬುಕ್ ಮಾಡಿ ಅದನ್ನು ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುತ್ತಿದ್ದರು. ಈಗ ಬುಕ್ಕಿಂಗ್ಗೆ ಆನ್ಲೈನ್ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಯಾವುದೇ ಒಬ್ಬ ವ್ಯಕ್ತಿ ದೊಡ್ಡ ಪ್ರಮಾಣದಲ್ಲಿ (ಬಲ್ಕ್) ಬುಕ್ಕಿಂಗ್ ಮಾಡಲು ಸಾಧ್ಯವಿಲ್ಲ.

* ಅರ್ಹ ವ್ಯಕ್ತಿ, ಸಂಸ್ಥೆಗಳಿಗೆ ಅನುದಾನ ಸಿಗುತ್ತಿಲ್ಲ ಎಂಬ ಆರೋಪ ಇದೆಯಲ್ಲ?

ಈಗ ಹೊಸ ನಿಯಮ ತರಲಾಗಿದೆ. ಈಗ ₹50 ಸಾವಿರದಿಂದ ₹2.50 ಲಕ್ಷದವರೆಗೆ ಅನುದಾನ ನೀಡಲಾಗುವುದು. ನಿರಂತರವಾಗಿ 3 ವರ್ಷ ಮತ್ತು 5 ವರ್ಷ ಅನುದಾನ ಪಡೆದವರು ಮತ್ತು ಹೊಸಬರು ಎಂಬ ಮೂರು ವರ್ಗಗಳನ್ನು ಮಾಡಲಾಗಿದ್ದು, 2022ರ ಅನುದಾನದಲ್ಲಿ ಹೊಸಬರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆನ್ಲೈನ್ ಮೂಲಕವೇ ಅನುದಾನಕ್ಕೆ ಅರ್ಜಿ ಸಲ್ಲಿಸಬೇಕು. ಕಾರ್ಯಕ್ರಮಗಳನ್ನು ಮಾಡಿದ್ದಕ್ಕೆ ಪೂರಕ ದಾಖಲೆಗಳನ್ನು ಕೊಟ್ಟ ಬಳಿಕವೇ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಕೆಲವೇ ಜನರು ಮಾತ್ರ ಅನುದಾನ ಪಡೆಯುವುದನ್ನು ತಪ್ಪಿಸಿ ಹೊಸ ಕಲಾವಿದರು ಮತ್ತು ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲು ತೀರ್ಮಾನಿಸಲಾಗಿದೆ. ‘ಕೆಲವೇ ಜನರ ಸಂಸ್ಕೃತಿ ಇಲಾಖೆ’ ಎಂಬ ಅಪವಾದ ಕಳಚಿ, ‘ಎಲ್ಲರ ಸಂಸ್ಕೃತಿ ಇಲಾಖೆ’ ಆಗಬೇಕು ಎಂಬುದು ಸರ್ಕಾರದ ಉದ್ದೇಶ.

* ನೈಜ ಸಂಸ್ಥೆಗಳಿಗೆ ಅನ್ಯಾಯವಾಗುವುದಿಲ್ಲವೇ?

ಕೆಲವು ನೈಜ ಸಂಸ್ಥೆಗಳಿಗೆ ಅನುದಾನದ ಪ್ರಮಾಣ ಕಡಿಮೆ ಆಗಬಹುದು. ಇಂತಹ ನೈಜ ಸಂಸ್ಥೆಗಳನ್ನು ಎರಡನೇ ಹಂತದಲ್ಲಿ ಪರಿಶೀಲಿಸಲಾಗುವುದು. ಆದರೆ ಒಂದು ಬಾರಿಗೆ ಗರಿಷ್ಠ ₹2.50 ಲಕ್ಷಕ್ಕಿಂತಲೂ ಹೆಚ್ಚು ಅನುದಾನ ಕೊಡುವುದಿಲ್ಲ. ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ.

ಇವನ್ನೂ ಓದಿ...

ಒಳನೋಟ: ಕಾಸಿದ್ದರಷ್ಟೇ ಕನ್ನಡದ ಕೆಲಸ, ಕೆಲವರ ಏಕಸ್ವಾಮ್ಯ!

ಒಳನೋಟ: ಚಿನ್ನದ ಪದಕಗಳೇ ಕಣ್ಮರೆಯಾಗಿದ್ದವು!

ಒಳನೋಟ: ‘ಅನುದಾನ’ಕ್ಕೆ ಪಟ್ಟು ‘ಅನುಮಾನ’ದ ಪೆಟ್ಟು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.