ಮಕ್ಕಳನ್ನು ಕಠಿಣ ಅಭ್ಯಾಸ, ಪರಿಶ್ರಮದ ಮೂಲಕ ಪ್ರತಿಭಾಶಾಲಿಗಳಾಗಿ ರೂಪಿಸುವ ಪಾಲಕರ ಪ್ರಯತ್ನವು ಎಲ್ಲ ಕಾಲದಲ್ಲೂ ವಿವಿಧ ರೀತಿಯಲ್ಲಿ ಅನಾವರಣಗೊಂಡಿದೆ. ಆದರೆ, ಒಂದು ಮಗು ಜನಿಸುವಾಗಲೇ ವಂಶವಾಹಿಯನ್ನು ಪಾಲಕರ ಇಚ್ಛಾನುಸಾರ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆಯತ್ತ ‘ಜೆನೆಟಿಕ್ ಎಂಜಿನಿಯರಿಂಗ್’ ಇಂದು ಹೊರಟಿದೆ. ಈ ರೀತಿ, ತಂದೆ– ತಾಯಿ ತಮಗೆ ಜನಿಸುವ ಮಕ್ಕಳ ಗುಣಲಕ್ಷಣಗಳನ್ನು ಪ್ರಕೃತಿಗೆ ವಹಿಸದೆ, ಮಾರುಕಟ್ಟೆಯಲ್ಲಿ ಸರಕನ್ನು ಆಯ್ಕೆ ಮಾಡಿದಂತೆ ಆಯ್ಕೆ ಮಾಡಿಕೊಂಡು ‘ಡಿಸೈನರ್ ಕಿಡ್’ಗಳನ್ನು ಹಡೆಯುವ ಯುಗಕ್ಕೆ ನಾವು ಕಾಲಿಡುತ್ತಿದ್ದೇವೆ.

ಮಾನವನಲ್ಲಿ ಗೋಚರಿಸುವ ಅನೇಕ ಕಾಯಿಲೆಗಳಿಗೆ ವಂಶವಾಹಿಯನ್ನೇ ತಿದ್ದಿ, ಮೂಲದಲ್ಲೇ ಕಾಯಿಲೆಯನ್ನು ಉಚ್ಚಾಟಿಸುವ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರಕ್ಕೆ ವರದಾನವಾಗಿ ಪರಿಣಮಿಸಿದ್ದು ನಿಜ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ, ಆರೋಗ್ಯಪೂರ್ಣ ವ್ಯಕ್ತಿ ಸಹ ತನ್ನ ಸಾಮರ್ಥ್ಯ ವರ್ಧನೆಗೆ ಜೀವತಂತುಗಳ ಮಾರ್ಪಾಡು ಮಾಡಿಸಿಕೊಳ್ಳಲು ನಿಂತಿರುವುದು ಇದರ ಕುರಿತು ನೈತಿಕತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.

ವಂಶವಾಹಿ ಮಾರ್ಪಾಡನ್ನು ಪ್ರತಿಪಾದಿಸುವ ಗುಂಪು, ಇದರಲ್ಲಿ ಅನೈತಿಕವಾದುದು ಮತ್ತು ನಿಸರ್ಗಕ್ಕೆ ವಿರುದ್ಧವಾದುದು ಯಾವುದೂ ಇಲ್ಲ ಎಂದು ವಾದ ಮಂಡಿಸುತ್ತದೆ. ‘ಹೃದಯ, ಲಿವರ್, ಕಿಡ್ನಿ ಕಸಿಯನ್ನು ವೈದ್ಯಕೀಯ ಕ್ಷೇತ್ರವು ನೈತಿಕ ಎಂದು ಒಪ್ಪಿಕೊಂಡಿರುವಾಗ, ವಂಶವಾಹಿ ಬಲವರ್ಧನೆ ಹೇಗೆ ನಿಸರ್ಗಕ್ಕೆ ವಿರುದ್ಧವಾಗುತ್ತದೆ’ ಎಂದು ಮರುಪ್ರಶ್ನೆ ಹಾಕುತ್ತದೆ.

ಜೆನೆಟಿಕ್ ಎಂಜಿನಿಯರಿಂಗ್ನ ಅತಿಯಾದ ಬಳಕೆಯನ್ನು ವಿರೋಧಿಸುವ ಗುಂಪು- ‘ಒಂದು ಮಗು ನಿಸರ್ಗದಲ್ಲಾಗುವ ವಂಶವಾಹಿ ಲಾಟರಿಯಿಂದ ಜನಿಸಿದಾಗ ಮಾತ್ರ, ಮುಂದೆ ಬೆಳೆದು ತಾನೇನಾಗಬೇಕು ಎಂಬ ಸ್ವಾತಂತ್ರ್ಯವನ್ನು ಪಡೆದಿರುತ್ತದೆ. ಆ ಸ್ವಾಯತ್ತೆಯನ್ನು ಒಂದು ಜೀವಿಯಿಂದ ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ’ ಎಂದು ಪ್ರತಿಪಾದಿಸುತ್ತದೆ. ಆದರೆ, ಮಗುವಿನಲ್ಲಿ ಕಂಡುಬರುವ ನ್ಯೂನತೆಗಳನ್ನು, ರೋಗ ಲಕ್ಷಣಗಳನ್ನು ವಂಶವಾಹಿ ಬದಲಾವಣೆಯ ಮೂಲಕ ಗುಣಪಡಿಸುವುದಕ್ಕೆ ಅವರ ತಕರಾರು ಇಲ್ಲ.

ಪ್ರಸ್ತುತ, ವಂಶವಾಹಿ ಬಲವರ್ಧನೆಯ ಆವಿಷ್ಕಾರಗಳಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳು ಗುರುತಿಸಿರುವ ಜೆನೆಟಿಕ್ ಎಂಜಿನಿಯರಿಂಗ್ನ ನಾಲ್ಕು ಪ್ರಮುಖ ಬೆಳವಣಿಗೆಗಳೆಂದರೆ, ಮಾಂಸಖಂಡ ಪೋಷಣೆಯ, ಎತ್ತರದ ಬೆಳವಣಿಗೆಯ, ನೆನಪಿನ ಶಕ್ತಿ ವೃದ್ಧಿಸುವ ಮತ್ತು ಭ್ರೂಣದಲ್ಲೇ ಮಗುವಿನ ವಂಶವಾಹಿಗಳನ್ನು ಆಯ್ಕೆ ಮಾಡಬಲ್ಲ ವರ್ಧಕಗಳ ಕುರಿತಾಗಿವೆ.

ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಲೀ ಸ್ವೀನಿ ಎಂಬ ವಿಜ್ಞಾನಿಯ ತಂಡ ಒಂದು ಕೃತಕ ವಂಶವಾಹಿಯನ್ನು ಇಲಿಗಳ ಮೇಲೆ ಪ್ರಯೋಗಿಸಿ, ಮಾಂಸಖಂಡಗಳ ಬಲವರ್ಧನೆಯನ್ನು ಯಶಸ್ವಿಯಾಗಿ ಸಾಧಿಸಿದೆಯಂತೆ. ಮಾನವನ ಮೇಲೆ ಇದರ ಪ್ರಯೋಗಕ್ಕೆ ಅನುಮತಿ ದೊರಕಿಲ್ಲವಾದರೂ ಮುಂದೆ ಒಂದು ದಿನ ಅನುಮತಿ ದೊರೆತರೆ, ಮಾಂಸಖಂಡಗಳ ಶಕ್ತಿಹೀನತೆಯಿಂದ ಬಳಲುತ್ತಿರುವ ಅನೇಕ ಹಿರಿಯ ಚೇತನಗಳಿಗೆ ಇದು ವರದಾನವಾಗುವುದು ನಿಶ್ಚಿತ. ಆದರೆ ಈಗಾಗಲೇ ಉದ್ದೀಪನ ಮದ್ದು ಸೇವನೆಯಿಂದ ವಿವಾದಕ್ಕೆ ಸಿಲುಕಿರುವ ಕ್ರೀಡಾ ರಂಗದಲ್ಲಿ, ಎಲ್ಲಾ ಕ್ರೀಡಾಳುಗಳು ಈ ವಂಶವಾಹಿ ವರ್ಧಕದ ಬೆನ್ನಿಗೆ ಬಿದ್ದರೆ, ಕ್ರೀಡಾ ಕ್ಷೇತ್ರವು ನೈಜ ಪ್ರತಿಭಾ ಅನಾವರಣದ ರಂಗವಾಗಿ ಉಳಿಯಲಾರದು ಎನ್ನುವುದಂತೂ ನಿಶ್ಚಿತ.

ತಮ್ಮ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂಬ ಪೋಷಕರ ಸಹಜವಾದ ಬಯಕೆಯನ್ನೇ ಬಳಸಿಕೊಂಡು ಕೆಲವು ಸಂಶೋಧಕರು ಬುದ್ಧಿಶಕ್ತಿ ವರ್ಧಕಗಳನ್ನು ವಂಶವಾಹಿಯ ಬದಲಾವಣೆ ಮೂಲಕ ತರುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಹಿರಿಯರಲ್ಲಿ ಕಂಡುಬರುವ ಮರೆಗುಳಿತನದಂತಹ ಗುಣಲಕ್ಷಣವನ್ನು ನಿವಾರಿಸಲು ಈ ಸಂಶೋಧನೆ ನೆರವಾಗಬಹುದಾದರೂ ಇದರಿಂದ ಸಮಾಜದಲ್ಲಿ ಎರಡು ರೀತಿಯ ವರ್ಗಗಳು ನಿರ್ಮಾಣವಾಗಿ ಅಸಮಾನತೆಗೆ ಕಾರಣವಾಗಬಹುದು. ಅವೆಂದರೆ, ಇಂತಹ ವರ್ಧಕಗಳನ್ನು ಬಳಸಬಲ್ಲ ಸಬಲ ವರ್ಗ ಮತ್ತು ಅವುಗಳಿಂದ ವಂಚಿತವಾಗುವ ಮತ್ತೊಂದು ವರ್ಗ.

ಈ ಬಗೆಯ ವಂಶವಾಹಿ ವರ್ಧಕಗಳಿಗಿಂತ ಬಹಳ ಶಕ್ತಿಶಾಲಿಯಾದುದು, ‘ಡಿಸೈನರ್ ಕಿಡ್’ಗಳನ್ನು ಹಡೆಯುವ ಸಂಶೋಧನೆ. ಮೊದಲು ಗರ್ಭದಲ್ಲಿ ಮಗುವಿನ ಬೆಳವಣಿಗೆಯನ್ನು ಪತ್ತೆ ಹಚ್ಚಲು ಶುರುವಾದ ತಂತ್ರಜ್ಞಾನವು ವ್ಯಾಪಕವಾಗಿ ಭ್ರೂಣ ಲಿಂಗ ಪತ್ತೆಗೆ ಬಳಕೆಯಾಗಿ, ಕೆಲವು ದೇಶಗಳಲ್ಲಿ ಭ್ರೂಣಹತ್ಯೆಗೂ ದಾರಿ ಮಾಡಿಕೊಟ್ಟಿದ್ದು ಹಳೆಯ ವಿಚಾರ.

ನಮ್ಮ ಹಣೆಬರಹವನ್ನು ನಾವೇ ಬರೆದುಕೊಂಡಾಗ ಅದರ ಆಗುಹೋಗುಗಳಿಗೆಲ್ಲ ನಾವೇ ಜವಾಬ್ದಾರರಾಗಬೇಕಾಗುತ್ತದೆ. ಅದೇ ನಿಸರ್ಗದ ಕೈಗೆ ನಮ್ಮನ್ನು ಒಪ್ಪಿಸಿಕೊಂಡಾಗ, ವಿನಮ್ರತೆ ಮತ್ತು ಸಮೂಹಪ್ರಜ್ಞೆ ಮೂಡಿ, ‘ನಾನೇ ಎಲ್ಲ, ನನ್ನಿಂದಲೇ ಎಲ್ಲ’ ಎಂಬ ಅಹಂ ಕರಗುತ್ತದೆ. ಕೋವಿಡ್ ಸಾಂಕ್ರಾಮಿಕ ಸಹ ಈಗ ನಮಗೆ ನೀಡುತ್ತಿರುವ ಸಂದೇಶ ‘ಮಾನವ, ಎಲ್ಲವನ್ನೂ ಬದಲಿಸುವ ಸೃಷ್ಟಿಕರ್ತ ನಾನೇ ಎಂದು ಬೀಗಬೇಡ. ನೀನು ಪ್ರಕೃತಿಯ ಆಣತಿಯಂತೆ ನಡೆಯಬೇಕಾಗಿರುವ ಲಕ್ಷಾಂತರ ಜೀವಿಗಳಲ್ಲಿನ ಒಂದು ಪ್ರಭೇದವಷ್ಟೇ’ ಎಂಬುದೇ ಆಗಿದೆ.

ಲೇಖಕ: ಪ್ರಾಧ್ಯಾಪಕ, ಮಾಹಿತಿ ತಂತ್ರಜ್ಞಾನ ವಿಭಾಗ, ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.