ಮಿತ್ರರೊಬ್ಬರು ತಮ್ಮ ಮಗಳೊಂದಿಗೆ ಬೆಳಿಗ್ಗೆ ಕ್ರೀಡಾಂಗಣದಲ್ಲಿ ಎದುರಾದರು. ‘ಏನಿವತ್ತು ವಿಶೇಷ? ಜೊತೆಗೆ ಮಗಳಿದ್ದಾಳೆ’ ಅಂದೆ. ‘ಆಚೆನಾಡಿದ್ದು ಅವಳ ಆಟೋಟ ಇದೆ. ಅಭ್ಯಾಸಕ್ಕಾಗಿ ಕರೆತಂದಿದ್ದೇನೆ’ ಅಂದರು. ನನಗೆ ಆಶ್ಚರ್ಯವಾಯಿತು. ಮೂರು ದಿನಗಳ ಅಭ್ಯಾಸ, ನಾಲ್ಕನೇ ದಿನ ಸ್ಪರ್ಧೆ. ಗೆಲುವು ಇಷ್ಟು ಸುಲಭದ್ದಿರುತ್ತದೆಯೇ?

ಪೋಷಕರ ಸಭೆಯೊಂದು ಇತ್ತೀಚೆಗೆ ನಡೆಯಿತು. ಅದು ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಪೋಷಕರದ್ದು. ಮೂರು ವರ್ಷಗಳಿಂದ ಒಮ್ಮೆಯೂ ಸಭೆಗೆ ಬಂದಿರದಿದ್ದ ಪೋಷಕರೊಬ್ಬರು ಅಂದು ಬಂದಿದ್ದರು. ‘ಸರ್, ನಮ್ ಮಗು ಸರಿಯಾಗಿ ಓದ್ತಿಲ್ಲ’ ಅಂದರು. ಹಲವು ಬಾರಿ ಶಾಲೆಗೆ ಬರಲು ಹೇಳಿಕಳು
ಹಿಸಿದ್ದರೂ ಬಾರದವರು, ಮಗುವಿನ ಬಗ್ಗೆ ಕಾಳಜಿ ಮಾಡಿ ಎಂದು ಹಲವು ಬಾರಿ ಕರೆ ಮಾಡಿ ಹೇಳಿದ್ದರೂ ಲಕ್ಷ್ಯವಹಿಸದ ಅವರು ಈಗ ತಮ್ಮ ಮಗು ಹತ್ತನೇ ತರಗತಿಗೆ ಬಂದದ್ದೇ ತಡ, ಏಕಾಏಕಿ ಮಗುವಿನ ಓದಿನ ಬಗ್ಗೆ ಕಾಳಜಿ ವಹಿಸತೊಡಗಿದ್ದಾರೆ. ಅವರ ಮಗು ಈಗ ಪಾಸಾಗಬೇಕಾಗಿದೆಯಲ್ಲ!

ಈ ಮಗುವಿನ ಪೋಷಕರಂತೆ ನಾವೂ ಯೋಚಿಸುತ್ತಿದ್ದೇವೆಯೇ? ಯಾವಾಗ ಹೇಗೆ ಬೇಕಾದರೂ ಕಲಿಯಲಿ ಬಿಡಲಿ, ಹತ್ತನೇ ತರಗತಿಯಲ್ಲಿ ಮಾತ್ರ ಅವನು ಚೆನ್ನಾಗಿ ಓದಬೇಕು ಎಂದು ಆಶಿಸುತ್ತಿದ್ದೇವೆಯೇ? ಇದು ಸಾಧ್ಯವಾಗುವುದಾದರೂ ಹೇಗೆ? ಗೊಬ್ಬರವನ್ನು ನಾವು ಮೊಗ್ಗಿಗೆ ಹಾಕುವುದಿಲ್ಲ, ಬೇರಿಗೆ ಹಾಕುತ್ತೇವೆ ಅಲ್ಲವೇ? ಬೇರಿಗೆ ಹಾಕಿದರೆ ಅದರ ಫಲ ಹೂವಿನಲ್ಲಿ ಕಾಣುತ್ತದೆ. ಹತ್ತನೇ ತರಗತಿಯಲ್ಲಿ ಒಳ್ಳೆಯ ಫಲಿತಾಂಶ ಬೇಕಾದರೆ ಒಂದರಿಂದ ಒಂಬತ್ತನೇ ತರಗತಿಯವರೆಗೆ ಆಯಾ ಕಾಲಕ್ಕೆ ಆಗಬೇಕಾದ ಕಲಿಕೆಯ ಎಲ್ಲಾ ಅಂಶಗಳು ದೃಢಗೊಳ್ಳಬೇಕು.

ಮೈದಾನದಲ್ಲಿ ಮೂರು ದಿನ ತರಬೇತಿ ಕೊಟ್ಟು ನಾಲ್ಕನೇ ದಿನಕ್ಕೆ ಸ್ಪರ್ಧೆಗೆ ನಿಲ್ಲಿಸುವ ಆ ತಂದೆಯಂತೆ ನಾವೀಗ ಹತ್ತನೇ ತರಗತಿ ಮಕ್ಕಳ ವಿಚಾರದಲ್ಲಿ ವರ್ತಿಸುತ್ತಿದ್ದೇವೆ ಅನಿಸುತ್ತದೆ. ಹೋದ ವರ್ಷ ಪೋಷಕರೊಬ್ಬರು ತಮ್ಮ ಮಗಳ ಹತ್ತನೇ ತರಗತಿ ಪರೀಕ್ಷೆಯ ಅನುತ್ತೀರ್ಣದ ಕುರಿತಾಗಿ ಶಾಲೆಗೆ ಬಂದು ಕೇಳಿದ ಪ್ರಶ್ನೆ ನಮ್ಮ ಇಡೀ ಶಿಕ್ಷಣ ಕ್ರಮದ ವಿಮರ್ಶೆಯಂತಿದೆ. ‘ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗೂ ಎಲ್ಲಿಯೂ ಅನುತ್ತೀರ್ಣಗೊಳ್ಳದ, ಕಲಿಕೆಯಲ್ಲಿ ಹಿಂದುಳಿಯದ ನಮ್ಮ ಮಗಳು ಈಗ ಹತ್ತನೇ ತರಗತಿಯಲ್ಲಿ ಯಾಕೆ ಅನುತ್ತೀರ್ಣಳಾದಳು?’ ಎಂದು ಅವರು ಕೇಳಿದ್ದರು.

ಆ ಪೋಷಕರು ಕೇಳಿದ ಪ್ರಶ್ನೆಯಲ್ಲಿ ಎರಡು ಭಾಗಗಳಿವೆ. ಒಂದರಿಂದ ಒಂಬತ್ತನೇ ತರಗತಿವರೆಗಿನ ಕಲಿಕಾ ಕ್ರಮ ಮತ್ತು ಹತ್ತನೇ ತರಗತಿಯ ಕಲಿಕಾ ಕ್ರಮ, ಈ ಎರಡರ ಪೈಕಿ ಒಂದರಲ್ಲಿ ದೋಷವಿರಬೇಕು. ಒಂಬತ್ತು ವರ್ಷ ಸರಿಯಾಗಿ ಕಲಿತ ಮಗು ಹತ್ತನೇ ತರಗತಿಯಲ್ಲಿ ಏಕಾಏಕಿ ಕೈಚೆಲ್ಲಿದ್ದು ಯಾಕೆ? ಒಂಬತ್ತು ವರ್ಷ ಏನೂ ಕಲಿಯದೆ ಹತ್ತನೇ ತರಗತಿಗೆ ಬಂದಿತೋ? ಅಷ್ಟು ವರ್ಷ ಏನೂ ಕಲಿಯದಿದ್ದರೆ ಆ ಮಗು ಹತ್ತನೇ ತರಗತಿ ಪಾಸಾಗುವುದಾದರೂ ಹೇಗೆ?

ಹಿಂದಿನ ಬಾರಿ ಹತ್ತನೇ ತರಗತಿ ಫಲಿತಾಂಶ ಗಣನೀಯವಾಗಿ ಕುಸಿತ ಕಂಡಾಗ, ತುರ್ತಾಗಿ ಇದರ ಕುರಿತು ಒಂದು ಉನ್ನತ ಮಟ್ಟದ ಸಮಿತಿ ರಚಿಸಿ ಅಧ್ಯಯನ ನಡೆಸಬೇಕಿತ್ತು. ವಿಷಯದ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕಿತ್ತು. ಫಲಿತಾಂಶ ಈ ಪರಿ ಕುಸಿಯಲು ಕಾರಣವೇನು, ಶಿಕ್ಷಕರು ಪಾಠ ಮಾಡಲಿಲ್ಲವೇ, ಪಾಠ ಮಾಡಿದರೂ ಮಕ್ಕಳು ಓದಲಿಲ್ಲವೇ, ಮಕ್ಕಳ ಕಲಿಕೆಯಲ್ಲಿನ ಸಮಸ್ಯೆ ಏನು, ಕಲಿಸುವ ಪಠ್ಯವು ಮಕ್ಕಳ ಮಟ್ಟಕ್ಕೆ ಇಲ್ಲವೇ, ಒದಗಿಸುತ್ತಿರುವ ಸೌಲಭ್ಯದಲ್ಲಿ ಸಮಸ್ಯೆ ಇದೆಯೇ, ನಮ್ಮ ಪರೀಕ್ಷಾ ವಿಧಾನದಲ್ಲಿ ಲೋಪವಿದೆಯೇ ಎಂಬಂತಹ ಪ್ರಶ್ನೆಗಳಿಗೆ ಕಾರಣಗಳು ಗೊತ್ತಾಗಬೇಕಿತ್ತು.

ಓಟದ ಸ್ಪರ್ಧೆಗೆ ಬರೀ ಮೂರು ದಿನಗಳ ಅಭ್ಯಾಸ ಹೇಗೆ ಸಾಲುವುದಿಲ್ಲವೋ ಒಂದು ಉತ್ತಮ ಫಲಿತಾಂಶಕ್ಕೆ ನಾವು ಆ ಹೊತ್ತಿಗಷ್ಟೇ ಮಾಡುವ ಪ್ರಯತ್ನಗಳು ಬಹುಶಃ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಆಯಾ ತರಗತಿಯಲ್ಲಿ ಕನಿಷ್ಠ ಕಲಿಕಾ ಮಟ್ಟವನ್ನು ಸಾಧಿಸದೆ ಹತ್ತನೇ ತರಗತಿಗೆ ಬರುವ ಮಗುವಿನ ಮೇಲೆ ಎಷ್ಟೇ ಒತ್ತಡ ಹಾಕಿದರೂ ಕಲಿಕೆ ಸಾಧಿತವಾಗುವುದಿಲ್ಲ. ನಾವು ಪರಿಹಾರ ಕ್ರಮ ಕೈಗೊಳ್ಳುವ ಮೊದಲು ನಿಜವಾದ ಕಾರಣಗಳನ್ನು ಹುಡುಕಿಕೊಳ್ಳಬೇಕಿತ್ತು.

ಶಿಕ್ಷಕರು ಕಲಿಸುವಿಕೆಯಲ್ಲಿ ಸೋಲುತ್ತಿದ್ದಾರೆಯೇ, ಸೋಲಿಗೆ ಕಾರಣವೇನು, ಅದು ಯಾವ ಹಂತದಲ್ಲಿನ ಸೋಲು ಅಥವಾ ಕಲಿಸಿದರೂ ಮಕ್ಕಳೇ ಕಲಿಯುತ್ತಿಲ್ಲವೇ, ಕಲಿಯದೇ ಇರುವುದಕ್ಕೆ ಕಾರಣವೇನು, ನಮ್ಮ ಒಟ್ಟಾರೆ ಪರೀಕ್ಷಾ ಕ್ರಮದಲ್ಲಿ ಏನಾದರೂ ಲೋಪವಿದೆಯೇ ಅಥವಾ ಆ ಲೋಪ ನಮ್ಮ ಶಿಕ್ಷಣ ಕ್ರಮದ್ದೇ, ನಾವು ಎಲ್ಲಿ ಎಡವುತ್ತಿದ್ದೇವೆ ಎಂಬುದಕ್ಕೆ ಉತ್ತರ ಹುಡುಕಿಕೊಳ್ಳಬೇಕು. ಇಂತಹ ಕ್ರಮಕ್ಕೆ ಮುಂದಾಗುವಲ್ಲಿ ಈಗಾಗಲೇ ತುಂಬಾ ತಡವಾಗಿ ಹೋಗಿದೆ.

ಶಿಕ್ಷಣ ತಜ್ಞ ಜಾನ್ ಡ್ಯೂಯಿ, ಮಕ್ಕಳಿಗೆ ಒತ್ತಡದಿಂದ ಏನನ್ನೂ ಕಲಿಸಲು ಸಾಧ್ಯವಿಲ್ಲ ಅನ್ನುತ್ತಾನೆ. ಅದು ಸಂತಸದ ವಾತಾವರಣದಲ್ಲಿ ಅರಳುವಂತಹದ್ದು. ನಾವು ಯಾವುದೇ ಒಂದು ತರಗತಿಯ ಪರೀಕ್ಷೆಯ ಫಲಿತಾಂಶಕ್ಕಾಗಿ ಒತ್ತಡ ಹಾಕಿ ಕಲಿಸಬಾರದು. ಅದು ಕಲಿಕೆ ಆಗಲಾರದು. ಮಗು ಆಯಾ ತರಗತಿಯಲ್ಲಿ ಕಲಿಯಬೇಕಾದದ್ದನ್ನು ಕಲಿತು ಬಂದರೆ ಹತ್ತನೇ ತರಗತಿ ಪರೀಕ್ಷೆಯನ್ನು ಹಬ್ಬದಂತೆ ಆಚರಿಸುತ್ತದೆ. ಎಲ್ಲವೂ ನಮ್ಮ ಕೈಯಲ್ಲಿದೆ ಮತ್ತು ಇದಕ್ಕೆ ನಾವೆಲ್ಲಾ ಹೊಣೆಗಾರರು.

ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಯಾಕೆಂದರೆ ಈ ಮಕ್ಕಳ ಕೈಯಲ್ಲಿ ತಾನೇ ನಾವು ನಾಳಿನ ಸಮಾಜವನ್ನು ಇಡಬೇಕಾಗಿರುವುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.