ದೇಶದಲ್ಲಿ ನಾಗರಿಕ ವಿಮಾನಯಾನ ಮಾರುಕಟ್ಟೆಯು ಶರವೇಗದಲ್ಲಿ ಬೆಳೆಯುವ ಅವಕಾಶಗಳನ್ನು ಹೊಂದಿದೆ. ವಾಯುಯಾನ ಕ್ಷೇತ್ರದ ದಿಗ್ಗಜರು ಭಾರತದತ್ತ ಆಕರ್ಷಿತ ಆಗುತ್ತಿದ್ದಾರೆ. ಆದರೆ, ಹಲವು ಅನುಕೂಲಗಳು ಇರುವುದರ ಹೊರತಾಗಿಯೂ ಹೆಲಿಕಾಪ್ಟರ್ ಉದ್ಯಮ ಹಿಂದೆ ಬೀಳುವಂತೆ ಆಗಿದೆ.

‘ರೆಕ್ಕೆಗಳು ರೂಪುಗೊಳ್ಳುತ್ತವೆ’ ಎಂಬ ಪದವು ಇಂದು ಭಾರತದ ನಾಗರಿಕ ವಿಮಾನಯಾನ ಮಾರು ಕಟ್ಟೆಗೆ ಚೆನ್ನಾಗಿ ಅನ್ವಯವಾಗುತ್ತದೆ. ಏಕೆಂದರೆ, ಸ್ಥಿರ ರೆಕ್ಕೆಯ ಅಂದರೆ ವಿಂಗ್ ವಿಮಾನಗಳ ವಹಿವಾಟು ಬೆಳವಣಿಗೆ ಉತ್ತಮವಾಗಿದೆ. ಆದರೆ, ಭಾರತದಲ್ಲಿ ನಾಗರಿಕ ಹೆಲಿಕಾಪ್ಟರ್ ವ್ಯವಹಾರವು ಬೆಳವಣಿಗೆಯನ್ನು ದೊಡ್ಡ ಪ್ರಮಾಣದಲ್ಲಿ ಕಂಡಿಲ್ಲ. 1953ರ ನವೆಂಬರ್‌ನಲ್ಲಿ ಭಾರತದಲ್ಲಿ ಮೊದಲ ನಾಗರಿಕ ಹೆಲಿಕಾಪ್ಟರ್ ಹಾರಾಟ ಆರಂಭವಾದಾಗಿನಿಂದ ವಾಣಿಜ್ಯ ಬಳಕೆಯ ಹೆಲಿಕಾಪ್ಟರ್ ಹಾರಾಟ ಸೀಮಿತ ವಾಗಿದೆ.

1986ರಲ್ಲಿ ಹೆಲಿಕಾಪ್ಟರ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು (ನಂತರ ಪವನ್ ಹನ್ಸ್ ಹೆಲಿಕಾಪ್ಟರ್ ಲಿಮಿಟೆಡ್) ರಚನೆ ಮಾಡಿದ ನಂತರ ಭಾರತದಲ್ಲಿ ನಾಗರಿಕ ಹೆಲಿಕಾಪ್ಟರ್ ಉದ್ಯಮಕ್ಕೆ ಒಂದು ಹೊಸ ತಿರುವು ಸಿಕ್ಕಿತು. ಪವನ್ ಹನ್ಸ್ ಈಗ ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹೆಲಿಕಾಪ್ಟರ್ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಕಾರ್ಯಾಚರಣೆ ವೆಚ್ಚದಲ್ಲಿ ಹೆಚ್ಚಳ ಮತ್ತು ನಿಯಂತ್ರಣ ಮಾರ್ಗಸೂಚಿಗಳು ಬಂದದ್ದರಿಂದ ಕಂಪನಿಗೆ ಕಠಿಣ ಸಮಯ ಎದುರಾಯಿತು. ಭಾರತ ಪ್ರಸ್ತುತ 266 ನೋಂದಾಯಿತ ನಾಗರಿಕ ಹೆಲಿಕಾಪ್ಟರ್‌ಗಳನ್ನು ಹೊಂದಿದ್ದು, ನಾನ್-ಶೆಡ್ಯೂಲ್ಡ್ ಆಪರೇಟರ್‌ಗಳು, ಖಾಸಗಿ ವಿಭಾಗ, ಸರ್ಕಾರಿ (ಕೇಂದ್ರ ಮತ್ತು ರಾಜ್ಯ) ಹಾಗೂ ಪಿಎಸ್‌ಯುಗಳೊಂದಿಗೆ (ಸರ್ಕಾರಿ ಸ್ವಾಮ್ಯದ ಕಂಪನಿಗಳು) ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.

ನಾನ್–ಶೆಡ್ಯೂಲ್ಡ್ ಆಪರೇಟರ್‌ಗಳು ಅತಿ ಹೆಚ್ಚು ಹೆಲಿಕಾಪ್ಟರ್‌ಗಳನ್ನು (200ಕ್ಕೂ ಹೆಚ್ಚು) ಹೊಂದಿದ್ದಾರೆ. ಉಳಿದ ಹೆಲಿಕಾಪ್ಟರ್‌ಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಪಿಎಸ್‌ಯುಗಳು ಬಳಕೆ ಮಾಡುತ್ತಿವೆ. ಆಶ್ಚರ್ಯವೆಂದರೆ, ಜಾಗತಿಕ ಅಂಕಿ–ಅಂಶಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ. ಲಭ್ಯವಿರುವ ಅಂಕಿ ಅಂಶ ಗಳ ಪ್ರಕಾರ, ವಿಶ್ವದಾದ್ಯಂತ 34 ಸಾವಿರಕ್ಕೂ ಅಧಿಕ ನಾಗರಿಕ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ಮಾಡುತ್ತಿವೆ ಮತ್ತು ಇದರಲ್ಲಿ ಶೇಕಡ 1ಕ್ಕಿಂತ ಕಡಿಮೆ ಪ್ರಮಾಣದ ಹೆಲಿಕಾಪ್ಟರ್‌ಗಳು ಭಾರತದಲ್ಲಿವೆ.

ಸ್ವಿಟ್ಜರ್ಲೆಂಡ್‌ನಂತಹ ಅಭಿವೃದ್ಧಿ ಹೊಂದಿದ ದೇಶ ಗಳಿಗೆ ಹೋಲಿಸಿದರೆ ಪ್ರಸ್ತುತ ಭಾರತವು ಅತ್ಯಂತ ಕಡಿಮೆ ನಾಗರಿಕ ಹೆಲಿಕಾಪ್ಟರ್‌ಗಳನ್ನು ಹೊಂದಿದೆ. ಈ ವಿಚಾರದಲ್ಲಿ ಬ್ರೆಜಿಲ್ ದೇಶವೂ ಮುಂದೆ ಸಾಗಿದೆ. ಬ್ರೆಜಿಲ್‌ನ ಸಾಪೋಲೊ ನಗರವೊಂದರಿಂದಲೇ 750ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತವೆ.

ಆದರೆ, ಹಲವು ಸಮಸ್ಯೆಗಳು ಇದ್ದರೂ ಭಾರತದಲ್ಲಿ ನಾಗರಿಕ ಹೆಲಿಕಾಪ್ಟರ್ ಉದ್ಯಮ ಕ್ಷೇತ್ರದಲ್ಲಿ ಆಶಾದಾಯಕ ವಾತಾವರಣ ಇದೆ. ಅಗಸ್ಟಾ ವೆಸ್ಟ್‌ಲ್ಯಾಂಡ್, ಸಿಕೋರ್ಸ್ಕಿ ಮತ್ತು ಯೂರೊಕಾಪ್ಟರ್ ನಂತಹ ಹೆಲಿಕಾಪ್ಟರ್ ತಯಾರಕಾ ಕಂಪನಿಗಳು ಜಂಟಿ ಸಹಭಾಗಿತ್ವವನ್ನು ಹೊಂದಿರುವುದು ಭಾರತದಲ್ಲಿನ ನಾಗರಿಕ ಹೆಲಿಕಾಪ್ಟರ್ ಉದ್ಯಮದ ಪ್ರಗತಿ ಆಶಾದಾಯಕವಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ.

ಜಗತ್ತಿನಾದ್ಯಂತ ಸುಮಾರು ಶೇಕಡ 40ರಷ್ಟು ನಾಗರಿಕ ಹೆಲಿಕಾಪ್ಟರ್‌ಗಳನ್ನು ಕಾರ್ಪೊರೇಟ್ ಬ್ಯುಸಿನೆಸ್ ವಲಯವು ಬಳಸುತ್ತಿದೆ. ಶೇ 29ರಷ್ಟು ತುರ್ತು ವೈದ್ಯಕೀಯ ಸೇವೆಗಳಿಗೆ ಮತ್ತು ಕಾನೂನು ಸುವ್ಯವಸ್ಥೆ ಜಾರಿಗೆ, ಶೇ 16ರಷ್ಟು ಆಫ್‌ಶೋರ್ ಆಪರೇಷನ್ ಮತ್ತು ಇನ್ನುಳಿದ ಹೆಲಿಕಾಪ್ಟರ್‌ಗಳನ್ನು ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು, ವೈಮಾನಿಕ ಸಮೀಕ್ಷೆಯಂತಹ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಭಾರತದಲ್ಲಿ ಬಹುತೇಕ ಹೆಲಿಕಾಪ್ಟರ್‌ಗಳನ್ನು ಇಂಧನ ಕ್ಷೇತ್ರ, ಆನ್‌ಶೋರ್ ಮತ್ತು ಆಫ್‌ಶೋರ್‌ಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದವನ್ನು ಸಂವಹನ, ವೈದ್ಯಕೀಯ ನೆರವಿಗೆ (ಏರ್ ಟ್ಯಾಕ್ಸಿ/ ಆಂಬುಲೆನ್ಸ್), ಹೆಲಿಟೂರಿಸಂ ಮತ್ತು ಇತರ ಸೇವೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಹೆಲಿಕಾಪ್ಟರ್‌ಗಳನ್ನು ಅವುಗಳ ಕಾರ್ಯದಕ್ಷತೆಯ ಆಧಾರದಲ್ಲಿ ಮಾಪನ ಮಾಡಲಾಗುತ್ತದೆ. ಅಂದರೆ, ಅವುಗಳ ವೇಗ, ಸುರಕ್ಷತೆ, ವಿಶ್ವಾಸಾರ್ಹತೆ ಹೀಗೆ ಹಲವು ದೃಷ್ಟಿಕೋನಗಳಲ್ಲಿ ಅವುಗಳ ಕಾರ್ಯದಕ್ಷತೆಯನ್ನು ತುಲನೆ ಮಾಡಲಾಗುತ್ತದೆ. ಬಹು ಎಂಜಿನ್ ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚು ಬಳಸಲಾಗುತ್ತದೆ. ಇವುಗಳ ಕಾರ್ಯಾಚರಣೆ ವೆಚ್ಚ ಹೆಚ್ಚಿರುತ್ತದೆ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುತ್ತವೆ.

ಬೆಳೆಯುತ್ತಿರುವ ಹೆಲಿಕಾಪ್ಟರ್ ವಲಯದಲ್ಲಿ ಭಾರತವು ಸಕಾರಾತ್ಮಕವಾದ ಪ್ರವೃತ್ತಿಯನ್ನು ತೋರಿಸಿದರೂ ಕಾರ್ಯಾಚರಣೆಯ ಹೆಚ್ಚಿನ ವೆಚ್ಚ, ಹೆಚ್ಚುತ್ತಿರುವ ವಾಯುಯಾನ ಟರ್ಬೈನ್ ಇಂಧನ ವೆಚ್ಚ, ಹೆಲಿಕಾಪ್ಟರ್‌ಗಳ ಆಮದಿಗೆ ಇರುವ ದುಬಾರಿ ಸುಂಕ, ಬಿಡಿ ಭಾಗಗಳು, ವಿಂಗ್ ಏರ್ ಟ್ರಾಫಿಕ್ ನಿಯಮಗಳ ಜಾರಿ ಮತ್ತು ಹೆಲಿಪೋರ್ಟ್, ಹೆಲಿಪ್ಯಾಡ್‌ನಂತಹ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಮತ್ತು ಅಧಿಕಾರಿಗಳು ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕಾಗಿದೆ.

ಲೇಖಕ: ನಿರ್ದೇಶಕ, ಎಡಿಡಿ ಎಂಜಿನಿಯರಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.