ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಬಿಸಿ ಆರುವ ಮೊದಲೇ ಇನ್ನೊಂದು ಮಹಾ ಚುನಾವಣೆಗೆ ದೇಶ ಸಜ್ಜಾಗುತ್ತಿದೆ. ವಿಧಾನಸಭೆಗೆ ಸ್ಪರ್ಧಿಸಿ ಸೋತವರೂ, ಕೆಲವೊಮ್ಮೆ ಗೆದ್ದವರೂ ಆ ವಿಜಯದಿಂದ ತೃಪ್ತಿಪಟ್ಟುಕೊಳ್ಳದೆ ದೇಶವನ್ನೇ ಆಳುವ ಹಂಬಲದಿಂದ ರಾಜ್ಯದ ಆಳ್ವಿಕೆಯನ್ನು ತಿರಸ್ಕರಿಸಿ ಲೋಕಸಭೆಗೆ ಸ್ಪರ್ಧಿಸಲು ಹೊಂಚು ಹಾಕುತ್ತಿದ್ದಾರೆ. ಪ್ರತಿಯೊಂದು ಚುನಾವಣೆಗೂ ಕೋಟಿಗಟ್ಟಲೆ ಹಣ ಖರ್ಚು ಮಾಡಲು ವಿವಿಧ ರಾಜಕೀಯ ಪಕ್ಷಗಳ ರಾಜಕಾರಣಿಗಳು ಸಿದ್ಧರಾಗಿದ್ದಾರೆ. ಅವರು ವಿಜಯಿಗಳಾಗಿ ದೆಹಲಿಗೆ ಹೋದ ಬಳಿಕ ಅವರು ತೆರವು ಮಾಡಿದ ಕ್ಷೇತ್ರದಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಲು ಸರ್ಕಾರ ಮತ್ತೊಮ್ಮೆ ಹಣ ಖರ್ಚು ಮಾಡಬೇಕಾಗುತ್ತದೆ. ಸರ್ಕಾರದ ಈ ಹೊರೆಯನ್ನು ತೆರಿಗೆದಾರರೇ ಹೊರಬೇಕಾಗುವುದು ಸಹಜ ತಾನೇ? ಇಂತಹ ಅನಗತ್ಯ ಖರ್ಚುಗಳಿಗೆ ಹಾದಿಯಾಗದಂತೆ ನಮ್ಮ ಈ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲವೇ?

ಚುನಾವಣೆಗಳಲ್ಲಿ ಅಕ್ರಮಗಳು ನಡೆಯದಂತೆ ಪ್ರಾಮಾಣಿಕವಾಗಿ, ಸತ್ಯಸಂಧತೆಯಿಂದ ಚುನಾವಣೆಗಳನ್ನು ನಡೆಸಲು ಸರ್ಕಾರಿ ಉದ್ಯೋಗದಲ್ಲಿರುವವರು, ಚುನಾವಣಾಧಿಕಾರಿಗಳು ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಶಾಲಾ ಮತ್ತು ಕಾಲೇಜು ಅಧ್ಯಾಪಕರು ಹಾಗೂ ಇನ್ನಿತರ ಸರ್ಕಾರಿ ಉದ್ಯೋಗಿಗಳು ಚುನಾವಣಾ ಕರ್ತವ್ಯದಿಂದ ವಿಮುಖರಾಗುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಹೀಗಾಗಿ ಮಹಿಳೆಯರು ಪುರುಷರೆಂಬ ಭೇದವಿಲ್ಲದೆ ಎಲ್ಲರೂ ಈ ಕರ್ತವ್ಯ ನಿರ್ವಹಿಸುವುದು ಕಡ್ಡಾಯವಾಗಿದೆ.

ಇಂದು ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿರುವವರಲ್ಲಿ ಹೆಚ್ಚಿನವರು ಮಹಿಳೆಯರಾಗಿರುತ್ತಾರೆ. ಮಹಿಳೆಯರಿಗೆ ಚುನಾವಣಾ ಕರ್ತವ್ಯ ನಿರ್ವಹಣೆ ಎಂಬುದು ಕೆಲವೊಮ್ಮೆ ಬಹಳ ತ್ರಾಸದಾಯಕವಾಗಿರುತ್ತದೆ. ನಗರಗಳೊಳಗಿನ ಬೂತ್‌ಗಳಲ್ಲಾದರೆ ತೊಂದರೆ
ಗಳಿರುವುದಿಲ್ಲ. ಆದರೆ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸಮರ್ಪಕವಾಗಿ ನೀರಿಲ್ಲದ, ಸರಿಯಾದ ಶೌಚಾಲಯಗಳಿಲ್ಲದ, ಉತ್ತಮ ಹೋಟೆಲ್ ಗಳಿಲ್ಲದ ಚಿಕ್ಕ ಚಿಕ್ಕ ಹಳ್ಳಿಗಳಲ್ಲೂ ಈ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ವಿದ್ಯುಚ್ಛಕ್ತಿ ಇಲ್ಲದ, ಫ್ಯಾನ್ ಇಲ್ಲದ ಶಾಲೆಯ ಒಂದು ಕೋಣೆಯಲ್ಲಿ ಮಲಗಲು ಸರಿಯಾದ ಹಾಸಿಗೆ ದಿಂಬುಗಳಿಲ್ಲದೆ ರಾತ್ರಿಯಿಡೀ ನುಸಿಗಳಿಂದ ಕಚ್ಚಿಸಿಕೊಂಡು ನಿದ್ರೆಯಿಲ್ಲದೆ ಬೆಳಗು ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನೀರು ಮತ್ತು ಶೌಚಾಲಯದ ದೊಡ್ಡ ಸಮಸ್ಯೆಯನ್ನು ಈ ಮಹಿಳೆಯರು ಎದುರಿಸಬೇಕಾಗುತ್ತದೆ. ಶೌಚಾಲಯಗಳಿದ್ದರೂ ಕೆಲವು ಕಡೆ ಇವು ಬಹಳ ದೂರದಲ್ಲಿರುತ್ತವೆ. ರಾತ್ರಿ ಹೊತ್ತು ಅಂತಹ ಕಡೆಗಳಲ್ಲಿ ನಡೆದಾಡುವುದೂ ಅಪಾಯವನ್ನು ತಂದೊಡ್ಡಬಹುದು. ಇಂದಿನ ದಿನಗಳಲ್ಲಿ ಮಹಿಳೆಯರ ಮೇಲೆ ಹಗಲು ಹೊತ್ತಿನಲ್ಲೇ ಎಂತೆಂತಹ ದೌರ್ಜನ್ಯಗಳು ನಡೆಯುತ್ತಿರುವ ವರದಿಗಳಿಲ್ಲದ ದಿನಗಳೇ ಇಲ್ಲ ಎಂಬಂತಾಗಿದೆ.

ಪುರುಷರಿಗೆ ದೊಡ್ಡ ಪ್ರಮಾಣದಲ್ಲಿ ಶೌಚಾಲಯದ ಸಮಸ್ಯೆಗಳಿರಲಾರದು. ಅವರು ಹೊರಗೆಲ್ಲೋ ಹೋಗಿ ತಮ್ಮ ಪ್ರಕೃತಿಯ ಕರೆಯನ್ನು ನೀಗಿಸಿಕೊಳ್ಳಬಹುದು. ಆದರೆ ಮಹಿಳೆಯರಿಗೆ ಹಾಗೆ ಮಾಡಲು ಸಾಧ್ಯವಾಗದು. ಮಹಿಳೆಯರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕೆಂಬುದು ಇದರರ್ಥವಲ್ಲ. ಆ ಎರಡು ದಿನಗಳ ಮಟ್ಟಿಗೆ ಅವರಿಗೆ ಯಾವ ರೀತಿಯಲ್ಲೂ ಮುಜುಗರವಾಗದಂತೆ ಸರಿಯಾಗಿ ಶೌಚಾಲಯ, ನೀರು, ಆಹಾರ, ಕುಡಿಯುವ ನೀರು ಮತ್ತು ಮಲಗಲು ಸರಿಯಾದ ವ್ಯವಸ್ಥೆ ಮಾಡಿಕೊಡುವತ್ತ ಚುನಾವಣಾಧಿಕಾರಿಗಳು ಗಮನಹರಿಸಬೇಕು. ಸಂಬಂಧಪಟ್ಟ ತಹಶೀಲ್ದಾರರು ಮೊದಲೇ ಎಲ್ಲ ಕಡೆಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳತ್ತ ಗಮನಹರಿಸಬೇಕು. ಸರಿಯಾದ ಸೌಲಭ್ಯ, ಸೌಕರ್ಯ ದೊರೆತರೆ ಮಹಿಳೆಯರೂ ಸಂತೋಷದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.