ಭರವಸೆ ಮತ್ತು ಸಕಾರಾತ್ಮಕ ಮನೋಭಾವ ಇಲ್ಲದೆ ಹೋದಾಗ ಸಾತ್ವಿಕ ಪ್ರತಿಭಟನೆಯೂ ಜಗಳಗಂಟತನದ ಮಟ್ಟಕ್ಕೆ ಇಳಿದುಬಿಡುತ್ತದೆ.

ಈಚಿನ ದಿನಗಳಲ್ಲಿ ಅಸಹಿಷ್ಣುತೆ, ಪ್ರಶಸ್ತಿ ವಾಪಸಾತಿ ಮುಂತಾದ ಪದಗಳು ಮೇಲಿಂದ ಮೇಲೆ ಬಳಕೆಯಾಗುತ್ತಿವೆ. ಪ್ರಶಸ್ತಿ ಹಿಂದಿರುಗಿಸಿದ ಮೇಲೆ ಮುಂದೇನು ಎಂಬ ಪ್ರಶ್ನೆಗೆ ನಮ್ಮ ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಒಂದು ಸಮಗ್ರ ಕಾರ್ಯಯೋಜನೆಯನ್ನು ಇನ್ನೂ ರೂಪಿಸಿಕೊಂಡಿರದ ಕಾರಣ, ಆ ಪದಗಳು ದಿನೇ ದಿನೇ ಕ್ಲೀಷೆಯಾಗಿ ಪರಿಣಮಿಸುತ್ತಿವೆ.

ಕೆಲವು ತಿಂಗಳ ಹಿಂದೆ ಖ್ಯಾತ ಲೇಖಕಿ ನಯನತಾರಾ ಸೆಹಗಲ್ ಅವರು ‘ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಡಿಯಲ್ಲಿ ನಮ್ಮ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಕಾದಿದೆ’ (ಪ್ರ.ವಾ., ಸೆ. 1) ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಇಂದಿನ ಪ್ರಶಸ್ತಿ ವಾಪಸಾತಿ ಚಳವಳಿಗೆ ಮತ್ತು ಅಸಹಿಷ್ಣುತೆಯ ಪರಿಕಲ್ಪನೆಗೆ ಚಾಲನೆ ನೀಡಿದ್ದರು.

ಪಂಪನಿಂದ ಮೊದಲ್ಗೊಂಡು ಕುವೆಂಪುವರೆಗಿನ ಕನ್ನಡದ ಎಲ್ಲ ಸಾಹಿತಿಗಳೂ ಒಂದಲ್ಲ ಒಂದು ಹಂತದಲ್ಲಿ ತಮ್ಮ ಸಮಕಾಲೀನ ಅಸಹಿಷ್ಣುತೆಯ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿರುವರಾದರೂ ಹಿಂದಿನ ಯಾವ ಸಾಹಿತಿಯೂ ಅಸಹಿಷ್ಣುತೆಯನ್ನು ಸಾಕ್ಷಾತ್ಕರಿಸಿಕೊಂಡಿರುವ ಇಂದಿನವರಂತೆ ಹತಾಶೆ, ಆತಂಕ, ಅಸಹಾಯಕತೆಯನ್ನು ಅನುಭವಿಸಿರಲಿಲ್ಲ. ಹೋರಾಡುವವರ ಆತ್ಮಶಕ್ತಿ ಕುಗ್ಗಿದೆಯೋ ಅಥವಾ ಅಸಹಿಷ್ಣುತೆಯ ತೀವ್ರತೆ ಹೆಚ್ಚಾಗಿದೆಯೋ ತಿಳಿಯುತ್ತಿಲ್ಲ.

ಚಂದ್ರಶೇಖರ ಪಾಟೀಲ್, ರಹಮತ್ ತರೀಕೆರೆ, ದೇವನೂರ ಮಹಾದೇವ ಮುಂತಾದ ಕನ್ನಡ ಸಾಹಿತಿಗಳು; ಹಾಗೆಯೇ ದೇಶದಾದ್ಯಂತ ನೂರಾರು ಲೇಖಕರು ಸೆಹಗಲ್ರಿಂದ ಪ್ರಾರಂಭಗೊಂಡ ಈ ಚಳವಳಿಯನ್ನು ದಿಕ್ಕು ತಪ್ಪದ ಹಾಗೆ ಮುನ್ನಡೆಸಿಕೊಂಡು ಬಂದಿದ್ದಾರೆ. ಅಂದರೆ ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನೋ ಅಥವಾ ರಾಜಕಾರಣಿಯನ್ನೋ ಗುರಿ ಮಾಡಿಕೊಳ್ಳದಂತೆ ಪ್ರಶಸ್ತಿ ವಾಪಸಾತಿ ಪರ್ವಕ್ಕೆ ಮರುಚಾಲನೆ ನೀಡಿದ್ದಾರೆ. ಹೀಗೆ ಪ್ರಶಸ್ತಿ ವಾಪಸಾತಿ ಎಂಬ ಹೊಸದೊಂದು ‘ಸಾತ್ವಿಕ ಪ್ರತಿಭಟನೆ ಪರಂಪರೆ’ ನಮ್ಮಲ್ಲಿಂದು ಪ್ರಾರಂಭವಾಗಿದೆ.

ಈ ಪ್ರಶಸ್ತಿ ವಾಪಸಾತಿ ಚಳವಳಿ ಬರೀ ಒಂದು ಪ್ರಹಸನವಾಗದೆ ಸಾಹಿತಿಯಾದವನು ರೋಗಗ್ರಸ್ತ ವ್ಯವಸ್ಥೆಯಿಂದ ಯಾವುದೇ ಪ್ರಶಸ್ತಿ, ಸವಲತ್ತುಗಳನ್ನು ಪಡೆಯಬಾರದು ಎಂಬ ಹೊಸ ಸಂಕಲ್ಪಕ್ಕೆ ಒಂದು ಪ್ರೇರಣೆಯಾಗಬೇಕು. ಹಾಗಲ್ಲದೆ ಮುಂದೆ ಹೊಸ ಸರ್ಕಾರ ಬಂದ ಮೇಲೆ ಪುನಃ ಪ್ರಶಸ್ತಿ ಪ್ರದಾನ ಸಮಾರಂಭಗಳು ಅಬಾಧಿತವಾಗಿ ನಡೆಯಲಾರಂಭಿಸಿದರೆ ಪ್ರಶಸ್ತಿ ವಾಪಸಾತಿ ಪರ್ವವು ತನ್ನ ಮಹತ್ವವನ್ನೇ ಕಳೆದುಕೊಳ್ಳುತ್ತದೆ. ಈ ಒಟ್ಟಾರೆ ಚಳವಳಿ ಹಾಸ್ಯಾಸ್ಪದವಾಗುತ್ತದೆ.

ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಕೀರ್ತಿಯನ್ನು ಅಜರಾಮರವಾಗಿಸಿಕೊಳ್ಳಲು ಕವಿಗಳಿಗೆ ಆಶ್ರಯ ನೀಡುತ್ತಿದ್ದರು. ಅವರಿಗೆ ಹಣ, ಪ್ರಶಸ್ತಿ ಗೌರವಗಳನ್ನು ನೀಡಿ ತಮ್ಮಿಚ್ಛೆಯಂತೆ ಅವರ ಕೈಲಿ ಕಾವ್ಯ, ಶಾಸನಗಳನ್ನು ಬರೆಸುತ್ತಿದ್ದರು. ರಾಜ ಪ್ರಭುತ್ವವನ್ನು ವಿರೋಧಿಸಿ ತಲೆಯೆತ್ತಿದ ಕಮ್ಯುನಿಸ್ಟ್ ರಷ್ಯಾ ಕೂಡ ಕವಿಗಳಿಂದ ಇದೇ ತರಹದ ಸೇವೆ, ಕೈಂಕರ್ಯಗಳನ್ನು ಮಾಡಿಸಿಕೊಂಡು ಕ್ರಾಂತಿಯ ನಂತರದ ರಷ್ಯನ್ ಕವಿಗಳನ್ನು ನಿರ್ವೀರ್ಯರನ್ನಾಗಿಸಿತ್ತು.

ಇಂತಹ ಅನರ್ಥ ಯಾವ ಬಗೆಯ ಆಡಳಿತ ವ್ಯವಸ್ಥೆಯಲ್ಲಾದರೂ ಸಂಭವಿಸುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶಸ್ತಿ, ಪುರಸ್ಕಾರಗಳು ಅರ್ಥ ಕಳೆದುಕೊಂಡ ಅನಗತ್ಯ ಬಡಿವಾರಗಳಾಗುತ್ತವೆ. ರೊಮಿಲಾ ಥಾಪರ್ರಂತಹ ಬರಹಗಾರ್ತಿಯರು ತಾನು ಸರ್ಕಾರಿ ಪ್ರಶಸ್ತಿ, ಬಹುಮಾನಗಳನ್ನು ಪಡೆಯುವುದಿಲ್ಲವೆಂದು ಬಹು ಹಿಂದೆಯೇ ಘೋಷಿಸಿಕೊಂಡಿದ್ದಾರೆ.

ಸಾಹಿತ್ಯ ವಲಯದ ಆರೋಗ್ಯವನ್ನು ಉಳಿಸುವ ಸಲುವಾಗಿ ಸರ್ಕಾರಿ ಅಕಾಡೆಮಿಗಳು ಮತ್ತು ಇಲಾಖೆಗಳು ಸಹ ತಮ್ಮ ನಿಯಮಾವಳಿಗಳಿಂದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ, ಪ್ರಶಸ್ತಿ ಪ್ರದಾನ ಚಟುವಟಿಕೆ ಮುಂತಾದವುಗಳನ್ನು ಪೂರ್ತಿಯಾಗಿ ಕೈಬಿಟ್ಟರೂ ಅದರಿಂದ ಸಾಹಿತ್ಯ ಸೇವೆಗೆ ಯಾವುದೇ ಬಗೆಯ ಅಪಚಾರವಾಗುವುದಿಲ್ಲ.

ಅಸಹಿಷ್ಣುತೆ ಮೂಲವನ್ನು ಬೆದಕುತ್ತ ಹೋದರೆ ಅದು ಶಿಲಾಯುಗದ ಕಾಲಮಾನದಷ್ಟು ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಗೌತಮ ಬುದ್ಧ ಉಪದೇಶಿಸಿದ ದುಃಖ ಸಮುದಯವೇ ಮುಂತಾದ ಆರ್ಯಸತ್ಯಗಳೂ ಮನುಷ್ಯನ ಅಂತರಂಗದಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಅಸಹನೆ, ಅಸಹಿಷ್ಣುತೆಗಳನ್ನೇ ಸೂಚಿಸುತ್ತವೆ. ಆದರೆ ಬುದ್ಧ ದುಃಖಸಮುದಯವನ್ನಷ್ಟೇ ವಿವರಿಸಿ ಸುಮ್ಮನಾಗದೆ ದುಃಖ ನಿರೋಧದ (ಆರ್ಯಅಷ್ಟಾಂಗಿಕ ಮಾರ್ಗ, ಆನಾಪಾನಸ್ಮೃತಿ ಯೋಗ, ದಶಪಾರಮಿತ ಮುಂತಾದ) ಮಾರ್ಗಗಳನ್ನೂ ತೋರಿಸಿದ್ದ.

ಬುದ್ಧ, ಬಸವ, ಕುವೆಂಪು ಮುಂತಾದವರು ‘ನಿರಂಕುಶಮತಿತ್ವವು ಸಮಾಜೋದ್ಧಾರಕ್ಕಾಗಿ ಅಲ್ಲ ಆತ್ಮಶ್ರೀಗಾಗಿ’ ಎಂಬ ಸಂಕಲ್ಪದೊಂದಿಗೆ ಕ್ರಿಯಾಶೀಲರಾಗಿದ್ದ ಕಾರಣ ಸಮಾಜ ಅವರ ನುಡಿಗಳನ್ನು ಹಳಹಳಿಕೆ ಎಂದು ಭಾವಿಸದೆ ಇಂದಿನವರೆಗೂ ಅನುಸರಿಸುತ್ತ ಬಂದಿದೆ. ಮಂದಿಯ ಮಧ್ಯೆ ಇದ್ದೂ ಏಕಾಂತದ ಮಹತ್ವವನ್ನು ತಿಳಿಸುವ, ‘ಶಬ್ದದೊಳಗಣ ನಿಶ್ಶಬ್ದ’ವನ್ನು ಮನಗಾಣಿಸುವ ಕಾರಣದಿಂದಲೇ ಸಮಾಜ ಕವಿ, ಅನುಭಾವಿಗಳನ್ನು ಆದರಿಸುತ್ತ ಬಂದಿದೆ.

ಕುವೆಂಪುರವರು ಪ್ರತಿನಿತ್ಯ ಜಗತ್ತಿನ ಎಲ್ಲ ವಿದ್ಯಮಾನಗಳನ್ನು ಅರಿಯುತ್ತಿದ್ದರಾದರೂ ‘ಅಪತ್ರಿಕಾ ವಾರ್ತೆ’ಯ ಕರೆಗೆ ಓದುಗನ ಧ್ಯಾನವನ್ನು ಸೆಳೆಯುತ್ತಿದ್ದರು. ಇಂದಿನ ಸಾಹಿತಿಗಳಾದರೂ ಪತ್ರಿಕೆಯ ದೈನಂದಿನ ಸುದ್ದಿಗಳೇ ಜೀವನ್ಮರಣದ ನಿತ್ಯ ಪ್ರಶ್ನೆಗಳಾಗಿವೆ ಎಂದು ಹೌಹಾರುತ್ತಿರುವುದು ದುರದೃಷ್ಟಕರ. ಸಾಹಿತಿಗಳು ಪ್ರಭುತ್ವದೊಂದಿಗೆ ನೇರವಾಗಿ ಘರ್ಷಣೆಗಿಳಿಯಬೇಕೆಂದು ಯಾವ ಓದುಗನೂ ಅಪೇಕ್ಷಿಸುವುದಿಲ್ಲ. ಹಾಗೆ ನೇರಾನೇರ ತಿಕ್ಕಾಟ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.

ಕವಿಯಾದವನು ದೈನಂದಿನ ಉಪದ್ವ್ಯಾಪಗಳ ಆಚೆಗಿನ ಬದುಕನ್ನು ತನಗೆ ಕಾಣಿಸಬೇಕೆಂದು ಸಾಮಾಜಿಕನು ಅಪೇಕ್ಷಿಸುವನು. ಅಂತಹ ಆಧ್ಯಾತ್ಮಿಕ ಹೊಳಹುಗಳು ಕಣ್ಣೆದುರಿನ ಪ್ರಶ್ನೆಗಳನ್ನು ಎದುರಿಸುವ ಸ್ಥೈರ್ಯ ಮತ್ತು ವಿವೇಕವನ್ನು ಅವನಿಗೆ ನೀಡಬಲ್ಲವು. ಅಂತಹ ವಿವೇಕ ಸಿದ್ಧಿಸಿದಾಗ ಈ ಅಸಹನೆ, ಅಸಹಿಷ್ಣುತೆಗಳು ಇನ್ನಿಲ್ಲದಂತೆ ತಾನಾಗೇ ನಿರಸನವಾಗುತ್ತವೆ. ಆಧ್ಯಾತ್ಮಿಕ ಹೊಳಹುಗಳಲ್ಲದಿದ್ದರೂ ಕೊನೆಯ ಪಕ್ಷ ದೈನಂದಿನ ಬದುಕಿನ ಬಗ್ಗೆ ಒಂದು ಭರವಸೆಯ ಆಶಾಕಿರಣವನ್ನಾದರೂ ಸಾಹಿತಿಯಾದವನು ಸಮಾಜಕ್ಕೆ ನೀಡಬೇಕಾಗುತ್ತದೆ.

ಯು.ಆರ್.ಅನಂತಮೂರ್ತಿಯವರು ಲೋಕಸಭಾ ಚುನಾವಣೆಗೆ ಮುನ್ನ ‘ಮೋದಿಯಂತಹವರು ಪ್ರಧಾನಿಯಾಗುವ ದೇಶದಲ್ಲಿ ಬದುಕಿರಲು ನನಗಿಷ್ಟವಿಲ್ಲ’ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ಒಬ್ಬ ಪತ್ರಕರ್ತ ‘ಮುಂದೊಂದು ದಿವಸ ಅವರು ಪ್ರಧಾನಿಯಾಗೇ ಬಿಡಬಹುದು; ಒಂದು ವೇಳೆ ನೀವು ಕುಳಿತಿರುವ ವೇದಿಕೆಯ ಮೇಲೆ ಅವರೂ ಆಗಮಿಸಿದರೆ ಏನು ಮಾಡುವಿರಿ?’ ಎಂದು ಸಂದರ್ಶನವೊಂದರಲ್ಲಿ ಕೇಳಿದ್ದರು. ಆಗ ಅನಂತಮೂರ್ತಿ ‘ಎಷ್ಟಾದರೂ ನಾನೊಬ್ಬ ಭಾರತೀಯ ಪ್ರಜೆ.

ಅವರು ನನ್ನ ಪ್ರಧಾನಿ ಎಂದ ಮೇಲೆ ಎದ್ದು ನಿಂತು ಅವರನ್ನು ಗೌರವಿಸಬೇಕಾದುದು ನನ್ನ ಕರ್ತವ್ಯವಲ್ಲವೇ? ಆದರೆ ನನ್ನ ಸಾಮಾಜಿಕ ನಂಬಿಕೆ ಮತ್ತು ಕಾಳಜಿಗಳಿಗೆ ಅನುಗುಣವಾಗಿ ಅವರು ಆಡಳಿತ ನಡೆಸಬೇಕು ಎಂದು ಅವರನ್ನು ತಪ್ಪದೆ ಆಗ್ರಹಿಸುತ್ತೇನೆ’ ಎಂದು ಉತ್ತರಿಸಿದ್ದರು. ಇಂತಹ ಭರವಸೆ, ಆಶಾವಾದ ಮತ್ತು ಸಕಾರಾತ್ಮಕ ಮನೋಭಾವ ಇಲ್ಲದೆ ಹೋದಾಗ ಸಾತ್ವಿಕ ಪ್ರತಿಭಟನೆಯೂ ಜಗಳಗಂಟತನದ ಮಟ್ಟಕ್ಕೆ ಇಳಿದುಬಿಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.