ಮುಷರಫ್ ಹತ್ಯೆ ಯತ್ನ ಆರೋಪ: ಷರೀಫ್ ಸೆರೆ

ಇಸ್ಲಾಮಾಬಾದ್, ನ. 14– ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರನ್ನು ಪರ್ವೇಜ್ ಮುಷರಫ್ ಅವರ ಹತ್ಯೆ ಯತ್ನ ಮತ್ತು ವಿದ್ರೋಹದ ಆರೋಪ ಮೇಲೆ ವಿಚಾರಣೆಗೊಳಪಡಿಸಲು ಅಧಿಕೃತವಾಗಿ ಬಂಧಿಸಿ ಗುಪ್ತವಾಗಿ ಕರಾಚಿಗೆ ಕರೆದೊಯ್ಯಲಾಗಿದೆ. ಈ ಆರೋಪಗಳ ಮೇಲೆ ಷರೀಫ್ ಅವರಿಗೆ ಮರಣದಂಡನೆ ವಿಧಿಸಬಹುದಾಗಿದೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ.

ಸಹಕಾರ ಸಂಘಗಳಲ್ಲಿ ಪರಿಶಿಷ್ಟರಿಗೆ ಪ್ರಾತಿನಿಧ್ಯಕ್ಕೆ ಕ್ರಮ: ಕೃಷ್ಣ

ಬೆಂಗಳೂರು, ನ. 14– ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ
ಎಸ್.ಎಂ. ಕೃಷ್ಣ ಅವರು ಇಂದು ಇಲ್ಲಿ ಹೇಳಿದರು.

ಸಹಕಾರ ಸಂಘಗಳು ಹಾಗೂ ಚಳವಳಿಯಲ್ಲಿ ಪರಿಶಿಷ್ಟರು ಮತ್ತು ಅಲ್ಪಸಂಖ್ಯಾತ ವರ್ಗದವರ ಸಕ್ರಿಯ ಪಾತ್ರದ ಕೊರತೆ ಕಾಣುತ್ತಿದೆ. ಇದನ್ನು ಸರಿಪಡಿಸಲು ಸರ್ಕಾರ ದೃಢ ಸಂಕಲ್ಪ ಮಾಡಿದ್ದು, ಈ ಸಂಬಂಧ ಆಡಳಿತಾತ್ಮಕ ಆಜ್ಞೆ ಸದ್ಯದಲ್ಲೇ ಹೊರಬೀಳಲಿದೆ ಎಂದು ಅವರು ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.