ಮತ್ತೆ ದಳ ವಿಭಜನೆ: ಬಿಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ

ನವದೆಹಲಿ, ಜುಲೈ 21– ಬಿಜೆಪಿ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟ ಸೇರುವ ಪ್ರಶ್ನೆಯಲ್ಲಿ ಜನತಾದಳ ಇಂದು ಅಧಿಕೃತವಾಗಿ ಇಬ್ಭಾಗವಾಯಿತು. ಎನ್ಡಿಎ ಜತೆ ಹೋಗುವ ದಳಕ್ಕೆ ಶರದ್ ಯಾದವ್ ಅಧ್ಯಕ್ಷರಾಗಿ ಮುಂದುವರಿದರೆ. ತನ್ನ ಹಳೆಯ ಸಿದ್ಧಾಂತ ಮತ್ತು ಕಾರ್ಯಕ್ರಮಗಳಿಗೇ ಕಟ್ಟು ಬಿದ್ದಿರುವ ದಳಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗಾಗಿ ಶರದ್ ಯಾದವ್ ಅವರನ್ನು ದಳದಿಂದ ಅದರ ರಾಜಕೀಯ ವ್ಯವಹಾರಗಳ ಸಮಿತಿಯು ಉಚ್ಚಾಟಿಸಿದರೆ, ಈ ಸಮಿತಿಯನ್ನು ಕೂಡಲೇ ಪುನರ್ರಚಿಸುವುದಾಗಿ ಯಾದವ್ ಪ್ರಕಟಿಸಿದ್ದಾರೆ. ಪ್ರಮುಖ ವಿವಾದದ ವಿಷಯವಾಗಿದ್ದ ಎನ್ಡಿಎ ಸೇರ್ಪಡೆಯನ್ನು ರಾಜಕೀಯ ವ್ಯವಹಾರಗಳ ಸಮಿತಿ ಸಭೆಯು ಬಹುಮತದಿಂದ ತಿರಸ್ಕರಿಸಿತ್ತು.

ಆದರೂ ಈ ನಿರ್ಧಾರವನ್ನು ವಿರೋಧಿಸಿ ಎನ್ಡಿಎ ಪರವಾದ ಬಣದಲ್ಲಿ ಗುರುತಿಸಿಕೊಂಡಿರುವ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ವಿರುದ್ಧವೂ ನಾಳೆ, ನಾಡಿದ್ದು ಕ್ರಮ ಕೈಗೊಳ್ಳಲು ದೇವೇಗೌಡ ಮತ್ತು ಸಿದ್ದರಾಮಯ್ಯ ನೇತೃತ್ವದ ದಳವು ನಿರ್ಧರಿಸಿದೆ.

ವಿಧಾನಸಭೆ ವಿಸರ್ಜನೆ ಇಲ್ಲ; ಬಹುಮತವಿದೆ: ಪಟೇಲ್ (ಬೆಂಗಳೂರು ವರದಿ)– ಜನತಾದಳ ವಿಸರ್ಜನೆಯ ನಂತರವೂ ತಾವು ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವುದರಿಂದ ವಿಧಾನಸಭೆ ವಿಸರ್ಜನೆ ಶಿಫಾರಸ್ಸು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ಹೇಳಿದರು.

25 ವರ್ಷಗಳ ಹಿಂದೆ | ಮತ್ತೆ ದಳ ವಿಭಜನೆ: ಬಿಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.