ಶಾಸಕಾಂಗ ಪಕ್ಷದ ನಾಯಕರಾಗಿ ಕೃಷ್ಣ ಅವಿರೋಧ ಆಯ್ಕೆ

ಬೆಂಗಳೂರು, ಅ. 10– ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ವಿಜಯದತ್ತ ಕೊಂಡೊಯ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಸ್.ಎಂ. ಕೃಷ್ಣ ಅವರು ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದರು. ನಾಳೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಕೃಷ್ಣ ಅವರು ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಂಸದೀಯ ಪಕ್ಷದ ನಾಯಕರಾಗಿ ವಾಜಪೇಯಿ ಪುನರಾಯ್ಕೆ

ನವದೆಹಲಿ, ಅ. 10– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಜೆಪಿ ಪ್ರತ್ಯೇಕವಾಗಿ ಮತ್ತು ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟವು ವಿಧ್ಯುಕ್ತವಾಗಿ ಇಂದು ಒಮ್ಮತದಿಂದ ತಮ್ಮ ಸಂಸದೀಯ ಪಕ್ಷದ ನಾಯಕನನ್ನಾಗಿ ಪುನರಾಯ್ಕೆ ಮಾಡಿದವು.

ಮೈಸೂರು ದಸರಾಕ್ಕೆ ದೇಜಗೌ ಚಾಲನೆ

ಮೈಸೂರು, ಅ. 10– ‘ಮಹಿಷಾಸುರ ಮರ್ದನ ದಿನ ದಿನವೂ ನಡೆಯದಿದ್ದರೆ ಪ್ರಪಂಚ ಎಂದೋ ನಾಶವಾಗುತ್ತಿತ್ತು. ಮಹಿಷಾಸುರ ಮರ್ದಿನಿಯಾಗಿದ್ದ ಚಾಮುಂಡೇಶ್ವರಿ ಇಂದು ಭ್ರಷ್ಟಾಸುರ ಮರ್ದಿನಿಯಾಗಬೇಕಿದೆ’ ಎಂದು ‘ಪಂಪ’ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ದೇ. ಜವರೇಗೌಡ ಅವರು ನುಡಿದರು.

ಚಾಮುಂಡಿ ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾದ ವಿಶೇಷ ವೇದಿಕೆಯ ಮೇಲೆ ದಸರಾ ಮಹೋತ್ಸವವನ್ನು ಉದ್ಘಾಟಿಸಿದ ಅವರು, ಜಾತಿ, ಮತ, ಭ್ರಷ್ಟಾ ಚಾರದ ಚಂಡಮಾರುತದಲ್ಲಿ ಸಿಕ್ಕಿಕೊಂಡು ಕನ್ನಡ ತಾಯಿ ಸೊರಗಿದ್ದಾಳೆ. ಈ ಬಗ್ಗೆ ಸರ್ವರೂ ಆತ್ಮಶೋಧನೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.