ಮಹಮದಾಲಿ ಹೊಸ ಸಚಿವರು; ಇವಾ ವಾಜ್ಗೆ ಬಡ್ತಿ

ಬೆಂಗಳೂರು, ಅ. 27– ಮಾಜಿ ಸಚಿವ ಶ್ರೀ ಮಹಮದಾಲಿ ಅವರನ್ನು ಹೊಸ ಸಚಿವರನ್ನಾಗಿ ಹಾಗೂ 5 ಮಂದಿ ಹೊಸ ರಾಜ್ಯ ಸಚಿವರನ್ನು ನೇಮಿಸಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿದ್ದಾರೆ.

ಈ ವಿಸ್ತರಣೆಯಲ್ಲಿ ರಾಜ್ಯ ಸಚಿವೆ ಶ್ರೀಮತಿ ಇವಾವಾಜ್ ಅವರನ್ನು ಸಚಿವರನ್ನಾಗಿ ನೇಮಿಸಿದ್ದಾರೆ.

ರಾತ್ರಿ ಹುಬ್ಬಳ್ಳಿಯಿಂದ ನಗರ ತಲುಪಿದ ಮುಖ್ಯಮಂತ್ರಿ ಶ್ರೀ ಅರಸು ಅವರು ರಾಜಭವನದಲ್ಲಿ ರಾಜ್ಯಪಾಲ ಶ್ರೀ ಸುಖಾಡಿಯಾ ಅವರನ್ನು ಭೇಟಿ ಮಾಡಿ ಹೊಸ ಸಚಿವರು ಹಾಗೂ ರಾಜ್ಯ ಸಚಿವರ ಪಟ್ಟಿಯನ್ನು ಸಲ್ಲಿಸಿದರು.

ದೆಹಲಿಗೆ ಕಿಸಿಂಜರ್ ಆಗಮನ: ಕಮ್ಯುನಿಸ್ಟರ ವಿರೋಧಿ ಪ್ರದರ್ಶನ

ನವದೆಹಲಿ, ಅ. 27– ಕಮ್ಯುನಿಸ್ಟರಿಂದ ವಿರೋಧ ಪ್ರದರ್ಶನದ ನಡುವೆ ಅಮೆರಿಕದ ಸ್ಟೇಟ್ ಇಲಾಖೆಯ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಅವರು ‘ವಿಶ್ವದ ಎರಡು ಬೃಹತ್ ಪ್ರಜಾಸತ್ತೆಗಳ ನಡುವೆ ವಿಚಾರ ವಿನಿಮಯ ಮುಂದುವರಿಸಲು’ ಇಂದು ಇಲ್ಲಿಗೆ ಆಗಮಿಸಿದರು.

ಪತ್ನಿ ನ್ಯಾನ್ಸಿ ಜೊತೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಸಚಿವ ವೈ.ಬಿ. ಚವಾಣ್, ಕೃಷಿ ಮತ್ತು ನೀರಾವರಿ ಸಚಿವ ಜಗಜೀವನ ರಾಂ ಅವರು ಸ್ವಾಗತಿಸಿದರು.

ಮಾಸ್ಕೊದಿಂದ ಆಗಮಿಸಿದ ಕಿಸಿಂಜರ್ ಅವರು ರಾಷ್ಟ್ರಪತಿ ಭವನಕ್ಕೆ ಕಾರಿನಲ್ಲಿ ಹೊರಟಾಗ ಕಮ್ಯುನಿಸ್ಟ್ ಪಕ್ಷದ ಸುಮಾರು 200 ಮಂದಿ ಅಮೆರಿಕ ವಿರೋಧಿ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.