ಏಳನೇ ತರಗತಿ ಪಬ್ಲಿಕ್ ಪರೀಕ್ಷೆ ರದ್ದತಿಗೆ ಶಿಕ್ಷಣ ಮಂಡಳಿ ನಿರ್ಧಾರ

ಬೆಂಗಳೂರು, ಸೆ. 24– ಪ್ರಾಥಮಿಕ ಏಳನೇ ತರಗತಿಯ ‘ಪಬ್ಲಿಕ್’ ಪರೀಕ್ಷೆಯನ್ನು ರದ್ದುಗೊಳಿಸಿ ಆಂತರಿಕ ಮೌಲ್ಯ ನಿರ್ಧಾರದ ಮೂಲಕ ವಿದ್ಯಾರ್ಥಿಯ ಸಾಮರ್ಥ್ಯವನ್ನು ತಿಳಿಯುವ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಾಥಮಿಕ ಶಿಕ್ಷಣ ಮಂಡಳಿ ನಿರ್ಣಯ ಮಾಡಿದೆ.

ಮಂಡಳಿಯ ನಿರ್ಧಾರವನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಶಿಕ್ಷಣ ಅಡಿಷನಲ್ ಡೈರೆಕ್ಟರ್ ಮುನಿಸ್ವಾಮಿಯವರು ಆಂತರಿಕ ಮೌಲ್ಯ ನಿರ್ಧಾರಕ್ಕೆ ಯಾವ ವಿಧಾನ ಅನುಸರಿಸಬೇಕೆಂಬುದನ್ನು ಇನ್ನೂ ನಿರ್ಧರಿಸಬೇಕಾಗಿದೆಯೆಂದರು.

ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಹೆಚ್ಚು ಪುಷ್ಟೀಕರಣಗೊಳಿಸಲು ‘ವೆಚ್ಚವಲ್ಲದ’ ಕೈಗೊಂಡಿರುವ ನಾನಾ ಕ್ರಮಗಳನ್ನು ಮುನಿಸ್ವಾಮಿಯವರು ವಿವರಿಸಿ, ಈ ಕಾರ್ಯಕ್ರಮಗಳ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಹೊಸ ಸ್ವರೂಪ ಕೊಡಲು ಪ್ರಯತ್ನಿಸಲಾಗುತ್ತಿದೆ ಎಂದರು.

81 ಸಾವಿರ ಬಾಲಕಿಯರಿಗೆ ವಿದ್ಯಾರ್ಥಿವೇತನ

ಬೆಂಗಳೂರು, ಸೆ. 24– ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಸರ್ಕಾರ ನಲವತ್ತು ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೆ ಪ್ರಾಥಮಿಕ ಮಟ್ಟದಲ್ಲಿ ಸುಮಾರು ಶೇಕಡ 60ರಷ್ಟು ಮಂದಿ ಬಾಲಕ–ಬಾಲಕಿಯರು ಶಾಲೆ ಬಿಟ್ಟು ಹೋಗಿಬಿಡುತ್ತಾರೆ.

ಈ ರೀತಿ ಶಾಲೆ ಬಿಡುವುದು ಗ್ರಾಮಾಂತರ ಪ್ರದೇಶಗಳಲ್ಲೇ ಹೆಚ್ಚೆಂದು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಶಿಕ್ಷಣ ಅಡಿಷನಲ್ ಡೈರೆಕ್ಟರ್ ಮುನಿಸ್ವಾಮಿಯವರು ಶಾಲೆಗಳಲ್ಲಿ ಹಾಜರಾತಿಗಾಗಿ ಪ್ರೋತ್ಸಾಹ ನೀಡಲು 81 ಸಾವಿರ ಬಾಲಕಿಯರಿಗೆ ತಲಾ 40 ರೂ. ನಂತೆ ವಿದ್ಯಾರ್ಥಿವೇತನ ನೀಡಲು ಯೋಜಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.