ನವದೆಹಲಿ, ನ. 7– ಸಣ್ಣ ಕೈಗಾರಿಕೆ ವಿಭಾಗದಲ್ಲಿ ಖೋಟಾ ಘಟಕಗಳನ್ನು ನಿರ್ಮೂಲನ ಮಾಡುವ ನಿರ್ಧಾರವನ್ನು ಕೇಂದ್ರ ಉದ್ಯಮ ಮತ್ತು ನಾಗರಿಕ ಪೂರೈಕೆ ಸಚಿವ ಟಿ.ಎ. ಪೈ ಇಂದು ವ್ಯಕ್ತಪಡಿಸಿದರು.

ಸಣ್ಣ ಪ್ರಮಾಣದ ಕೈಗಾರಿಕೆಗಳ ಮಂಡಳಿಯನ್ನು ಇಲ್ಲಿ ಉದ್ಘಾಟಿಸಿದ ಅವರು, ಭಾರಿ ಉದ್ಯಮಗಳು ಸಣ್ಣ ಪ್ರಮಾಣದ ಕೈಗಾರಿಕೆ ಕ್ಷೇತ್ರದಲ್ಲಿ ನುಗ್ಗುವುದರ ಮೂಲಕ ಸಣ್ಣ ಕೈಗಾರಿಕೋದ್ಯಮದ ಅಭಿವೃದ್ಧಿಗೆ ಭಾರಿ ಅಪಾಯ ಉಂಟು ಮಾಡುತ್ತಿವೆ ಎಂದರು.

ಬಿಹಾರ ರೀತಿ ಚಳವಳಿ ವಿರುದ್ಧ ಮಿರ್ಧಾ ಎಚ್ಚರಿಕೆ

ಬೆಂಗಳೂರು, ನ. 7– ಬಿಹಾರದ ಚಳವಳಿ ಜನತಂತ್ರ ವಿರೋಧಿ ಕ್ರಮವಾಗಿದ್ದು, ಅದು ಯಶಸ್ವಿಯಾಗಲು ಬಿಟ್ಟರೆ ಪ್ರಜಾಪ್ರಭುತ್ವ ನುಚ್ಚುನೂರಾದೀತು ಎಂದು ಕೇಂದ್ರ ರಕ್ಷಣಾ ಉತ್ಪಾದನಾ ಸಚಿವ ಶ್ರೀ ರಾಮನಿವಾಸ ಮಿರ್ಧಾ ಅವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.

ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.