ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಜೀವಂತವಾಗಿರುವ ದೇವದಾಸಿ ಪದ್ಧತಿ ಕುರಿತ ಬರಹ (ಸಂಗತ, ಜ. 21) ಸರ್ಕಾರದ ಕಣ್ಣು ತೆರೆಸುವಂತಿದೆ.ಕಾನೂನಿನ ಪ್ರಕಾರ ಇದಕ್ಕೆ ನಿಷೇಧವಿದ್ದರೂ, ಸವದತ್ತಿಯಂತಹ ಜಾಗದಲ್ಲಿ ಅಧಿಕಾರಿಗಳು, ಪೊಲೀಸರ ಕಣ್ಣ ಮುಂದೆಯೇ ಹೆಣ್ಣುಮಕ್ಕಳನ್ನು ಬಲವಂತವಾಗಿ ಈ ಅನಿಷ್ಟ ಪದ್ಧತಿಗೆ ದೂಡಲಾಗುತ್ತಿದೆ.

ವಯಸ್ಸಾದ ತಾಯಂದಿರ ಗೋಳು, ಹುಟ್ಟಿನಿಂದಲೇ ಶಾಪಗ್ರಸ್ತರಾಗುವ ಮಕ್ಕಳು, ಕಡೆಗಣ್ಣಿನಿಂದಲೂ ಕನಿಕರ ಸೂಚಿಸದ ಸಮಾಜ– ಇವೆಲ್ಲವುಗಳಿಂದ ಬಿಡುಗಡೆ ಹೊಂದುವುದು ತುರ್ತು ಅಗತ್ಯ. ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮಗಳಿಗೆ ಮುಂದಾಗಲಿ. ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ರಮಗಳನ್ನೂ ಆಸ್ಥೆಯಿಂದ ರೂಪಿಸಲಿ.

ಎಂ.ನಾಗರಾಜ ಶೆಟ್ಟಿ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.