ಸಂವಿಧಾನಬದ್ಧವಾಗಿ ಜನ ತಮಗೆ ನೀಡಿದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮುಂಬೈ ರೆಸಾರ್ಟಿಗೆ ಹೋಗಿ ಕುಳಿತಿರುವ ಶಾಸಕರದು, ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ನಡೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ, ಸಂವಿಧಾನದ ಉಳಿವಿಗಾಗಿ ಈ ಶಾಸಕರನ್ನು ಅನರ್ಹಗೊಳಿಸಿರುವ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರ ನಡೆ ಅಭಿನಂದನೀಯ.

ಇಂತಹ ಶಾಸಕರು ತಮ್ಮ ಕಾಯಕನಿಷ್ಠೆ ಬದಲಿಸಿ ‘ಉಪ್ಪು ತಿಂದ ಮನೆಗೆ ದ್ರೋಹ’ ಬಗೆಯುವಂತೆ ಆಗ ಬಾರದೆಂದರೆ, ಯಜಮಾನರು ಎಚ್ಚರಿಕೆಯಿಂದ ಇರ ಬೇಕಾಗುತ್ತದೆ. ಕೆಲವು ರೀತಿ-ನೀತಿಗಳನ್ನು ಬದಲಾಯಿಸಿ ಕೊಳ್ಳಬೇಕಾಗುತ್ತದೆ. ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ದೂರದೃಷ್ಟಿಯ ಚಿಂತನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಸಂವಿಧಾನವು ನಿರಂತರವಾಗಿ ಹರಿಯುವ ಜೀವಜಲದಷ್ಟೇ ಪವಿತ್ರ ವಾದುದು. ಯಾರಿಂದಲೂ ಯಾವ ಕಾಲಕ್ಕೂ ಎಂತ ಹುದೇ ಪರಿಸ್ಥಿತಿಯಲ್ಲಿಯೂ ಅದರ ದುರ್ಬಳಕೆ ಖಂಡಿತಾ ಸಾಧುವಲ್ಲ.

ಆರ್.ಶೇಷಣ್ಣ ಕುಮಾರ್, ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.