ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ ದೊರಕಿರುವುದು ಹೆಮ್ಮೆಯ ವಿಚಾರ. ಆದರೆ ಇದನ್ನು ರಿಯಲ್ ಎಸ್ಟೇಟ್ ಉದ್ಯಮದವರು ಮಾರ್ಕೆಟಿಂಗ್ ಟೂಲ್ ಆಗಿ ಪರಿವರ್ತಿಸಿ, ವಲಸಿಗರು ಈ ನಗರಕ್ಕೆ ದೇಶದ ಮೂಲೆ ಮೂಲೆಯಿಂದ ದಾಂಗುಡಿ ಇಟ್ಟು, ಮುಂದೆ ಈ ನಗರ ವಾಸಿಸಲು ಯೋಗ್ಯವಲ್ಲದಂತೆ ಮಾಡದಿರಲಿ ಎಂದು ಬೆಂಗಳೂರಿಗರು ಆಶಿಸುತ್ತಿದ್ದಾರೆ.

ಪಿಂಚಣಿದಾರರ ಸ್ವರ್ಗ, ಉದ್ಯಾನಗಳ ನಗರ, ಹವಾನಿಯಂತ್ರಿತ ನಗರ, ಮಧ್ಯಮವರ್ಗದವರ ತಾಣ, ಸಿಲಿಕಾನ್ ವ್ಯಾಲಿ, ಪಬ್ ಸಿಟಿ, ಕಾಸ್ಮೊಪಾಲಿಟನ್ ನಗರ ಎಂದೆಲ್ಲಾ ಬೆಂಗಳೂರನ್ನು ಮಾರ್ಕೆಟಿಂಗ್ ಮಾಡಿ ಈಗಾಗಲೇ ಅದರ ಜನಸಂಖ್ಯೆ ಕೋಟಿಯನ್ನು ಮೀರಿದೆ. ನಗರದ ಧಾರಣಾಶಕ್ತಿ ಕಟ್ಟೊಡೆಯುತ್ತಿದ್ದು ದಿನದಿಂದ ದಿನಕ್ಕೆ ಇಲ್ಲಿನವರ ಬದುಕು ದುಸ್ತರವಾಗುತ್ತಿದೆ. ಇನ್ನು ಸುಲಲಿತ ಜೀವನ ನಿರ್ವಹಣೆಗೆ ಉತ್ತಮ ನಗರ ಎನ್ನುವ ಕಿರೀಟವು ಬದುಕನ್ನು ಇನ್ನಷ್ಟು ಹೈರಾಣಾಗಿಸಬಹುದು ಎಂಬುದು ಬೆಂಗಳೂರಿಗರ ಆತಂಕವಾಗಿದೆ. ಹಾಗಾಗದಿರಲಿ ಎಂದು ಅವರು ಹಾರೈಸುತ್ತಿದ್ದಾರೆ.

ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.