ಪರೀಕ್ಷಾ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗಕ್ಕೆ ಇರುವಂತಹ ಅಧಿಕಾರ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ. ಕಾಲಕ್ಕೆ ತಕ್ಕಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತು ಕೆಇಎ ಪರೀಕ್ಷಾ ವಿಧಾನಗಳು ನವೀಕರಣಗೊಳ್ಳಬೇಕು. ಅಕ್ರಮ ತಡೆಗೆ ವಸ್ತ್ರಸಂಹಿತೆಯಂತಹ ಅನೇಕ ಕ್ರಮಗಳನ್ನು ಕೈಗೊಂಡರೂ ಅಕ್ರಮದ ಮಾರ್ಗಗಳು ಹೊಸದಾಗಿ ಸೇರ್ಪಡೆ ಆಗುತ್ತಿವೆ.

ಅದೇ ರೀತಿ ಹಲವು ವರ್ಷಗಳಿಂದ ಈ ಪರೀಕ್ಷಾ ವಿಧಾನಗಳಲ್ಲಿ ಅಂತಹ ಮಹತ್ತರ ಬದಲಾವಣೆಗಳೇನೂ ಆಗಿಲ್ಲ. ಇತ್ತೀಚಿನ ದಿನಗಳಲ್ಲಿ ಬಹುತೇಕ ಪರೀಕ್ಷೆಗಳಲ್ಲಿ ಅಕ್ರಮಗಳು ನುಸುಳುವುದು ಹೆಚ್ಚಾಗಿದೆ. ಪ್ರಶ್ನೆಪತ್ರಿಕೆಯಿಂದ ಹಿಡಿದು ಫಲಿತಾಂಶದವರೆಗೆ ಅತ್ಯಂತ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಪಾಡುವ ದೃಷ್ಟಿಯಿಂದ ಕಾಲಕಾಲಕ್ಕೆ ಸುಧಾರಣೆ ಅನಿವಾರ್ಯ. ಪರೀಕ್ಷೆಗಳಿಗೆ ಸಂಬಂಧಿಸಿ ಅಕ್ರಮ ಮಾರ್ಗಗಳನ್ನು ಮುಚ್ಚಿಸಿ, ಸಾರ್ವಜನಿಕರ ವಿಶ್ವಾಸ ಹೆಚ್ಚಿಸಬೇಕಾಗಿದೆ. ಪರಿವರ್ತನೆಗೆ ಇದು ಸಕಾಲ.

-ವಿನಯಕುಮಾರ್ ಚಿಂಚೋಳಿ, ಬಲಶೆಟ್ಟಿಹಾಳ್, ಸುರಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.