ವಿಶ್ವ ಆರೋಗ್ಯ ದಿನಾಚರಣೆಗೆ ಸಂಬಂಧಿಸಿದ ಡಾ. ಕೆ.ಎಸ್.ಪವಿತ್ರ ಅವರ ಲೇಖನ (ಸಂಗತ, ಏ. 7) ಸಕಾಲಿಕವಾಗಿದೆ. ಮನುಷ್ಯನ ಸರಾಸರಿ ಆಯಸ್ಸು 100 ವರ್ಷ ಎಂಬುದು ನಮ್ಮ ಜನರಲ್ಲಿ ಇರುವ ಸಾಮಾನ್ಯ ನಂಬಿಕೆ. ಆಧುನಿಕ ಜೀವನಶೈಲಿಯು ಅನೇಕ ಬಗೆಯ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಇದು ಆಯಸ್ಸಿನ ಮೇಲೂ ಪರಿಣಾಮ ಬೀರತೊಡಗಿದೆ.ತಂತ್ರಜ್ಞಾನದಿಂದ ಬಂದ ಸೌಲಭ್ಯಗಳು ಇದಕ್ಕೆ ಕಾರಣ. ಬೆವರು ಸುರಿಸಿ ದುಡಿಯುವುದರಿಂದ ಆರೋಗ್ಯದಾಯಕ ಜೀವನ ಸಾಧ್ಯ.

ನಮ್ಮ ತಾತನ 106 ವರ್ಷಗಳ ಬದುಕಿನ ಪಯಣದಲ್ಲಿ ಕೊನೆಯ ಕೆಲವು ದಿನಗಳು ಮಾತ್ರ ಹೊಲದಲ್ಲಿನ ಕೆಲಸವನ್ನು ನಿಲ್ಲಿಸಿದ್ದರು. ಅವರ ಆಹಾರ ಪದ್ಧತಿಯೂ ಅಷ್ಟೇ ಉತ್ತಮವಾಗಿರುತ್ತಿತ್ತು, ನಿಸರ್ಗದತ್ತವಾಗಿತ್ತು. ಈಗ ಅಡುಗೆಮನೆಯಲ್ಲಿ ಶ್ರಮ ಪಡುವಂತಹ ಯಾವ ಕೆಲಸಗಳೂ ನಡೆಯುವುದಿಲ್ಲ. ಎಲ್ಲವೂ ಮಷೀನ್‌ಮಯ. ಕೆಲವು ಮನೆಗಳಲ್ಲಿ ಅಡುಗೆ, ಮನೆಗೆಲಸ ಎಲ್ಲದಕ್ಕೂ ಕೆಲಸಗಾರರನ್ನು ಇಟ್ಟುಕೊಂಡಿರುತ್ತಾರೆ. ಮೈ ಬಗ್ಗಿಸಿ ಏನೂ ಕೆಲಸ ಮಾಡದಿದ್ದರೆ ಆರೋಗ್ಯ ಕಾಪಾಡಿಕೊಳ್ಳುವುದಾದರೂ ಹೇಗೆ?

ಇನ್ನು ಕೆಲವರಲ್ಲಿ ಮನೆಯ ಆಸುಪಾಸಿನ ಓಡಾಟಕ್ಕೂ ಬೈಕ್, ಕಾರ್‌ನಲ್ಲಿ ಹೋಗುವ ಪರಿಪಾಟ. ಅದೇ ವ್ಯಕ್ತಿ ಬೆಳಿಗ್ಗೆ ಕಿಲೊಮೀಟರುಗಟ್ಟಲೆ ವಾಕ್ ಹೋಗುತ್ತಾರೆ. ಅವಶ್ಯಕತೆ ಇದ್ದಲ್ಲಿ ಶ್ರಮಪಟ್ಟು ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳೋಣ, ಜೊತೆಗೊಂದಿಷ್ಟು ಒಳ್ಳೆಯ ಆಹಾರವನ್ನು ಸೇವಿಸೋಣ. ಆಗ ಖಂಡಿತ ನಾವು ದೀರ್ಘಾಯುಷಿಗಳಾಗಬಲ್ಲೆವು.

-ಶೈಲಾ ಕೊಪ್ಪದ, ಉಪ್ಪುಣಸಿ, ಹಾನಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.