ಗುಜರಾತ್‌ನ ನಗರ ಪ್ರದೇಶದಲ್ಲಿ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಅಲ್ಲಿನ ಸರ್ಕಾರ ಅವರ ಆಯ್ಕೆಗೇ ಬಿಟ್ಟಿದೆ. ಹೆದ್ದಾರಿಗಳಲ್ಲಿ, ನಗರದ ಹೊರವಲಯ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಮಾತ್ರ ಹೆಲ್ಮೆಟ್ ಕಡ್ಡಾಯವಾಗಿದೆ. ಇದು ಸರಿಯಾದ ಕ್ರಮ. ನಗರ ಪ್ರದೇಶದಲ್ಲಿ ವಾಹನಗಳಿಗೆ ವೇಗದ ಮಿತಿ ನಿಗದಿಪಡಿಸಲಾಗಿರುತ್ತದೆ. ಈ ಮಿತಿಯಲ್ಲಿ ಚಲಿಸುವ ವಾಹನಗಳಿಂದ ಅಪಘಾತವಾಗುವ ಸಾಧ್ಯತೆ ಬಹಳ ಕಡಿಮೆ. ಅಪಘಾತಗಳನ್ನು ತಡೆಯಲೆಂದೇ ಈ ಮಿತಿ ಹೇರಲಾಗಿದೆ. ಆದರೆ, ಬಹುತೇಕ ವಾಹನ ಸವಾರರು ಮಿತಿಯನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ, ಹೆಚ್ಚಿನ ಅಪಘಾತಗಳು ಅತೀ ವೇಗದ ಚಾಲನೆಯಿಂದಲೇ ಆಗಿರುತ್ತವೆ. ಹೆಲ್ಮೆಟ್‌ರಹಿತ ಚಾಲನೆಗೆ ಬದಲು ಅತೀ ವೇಗದ ಚಾಲನೆಗೆ ದಂಡ ವಿಧಿಸುವುದು ಸಮಂಜಸ. ನಮ್ಮ ರಾಜ್ಯದಲ್ಲೂ ಇದೇ ಮಾದರಿಯನ್ನು ಅಳವಡಿಸಬೇಕು.

ದರ್ಶನ್, ಕಿಶೋರ್, ನಿರಂಜನ್,ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.