ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿ ಇತ್ತೀಚೆಗೆ ಕಡಿಮೆಯಾಗುತ್ತಾ ಬರುತ್ತಿರುವುದು ವಿಷಾದನೀಯ. ಯಾರ ಕೈಯಲ್ಲಿ ನೋಡಿದರೂ ಮೊಬೈಲ್ ಕಾಣುತ್ತದೆ. ಟಿ.ವಿಗಳಲ್ಲಿ ಬರುವ ಧಾರಾವಾಹಿಯ ಸುದ್ದಿಗಳಿಗೆ ಅತಿ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿದೆ. ಮಕ್ಕಳಿಗೆ ಪೋಷಕರು ಬಾಲ್ಯದಿಂದಲೇ ಇವುಗಳ ಗೀಳು ಹಿಡಿಸುತ್ತಿದ್ದಾರೆ. ಇದರಿಂದ ಅಮೂಲ್ಯ ಪುಸ್ತಕಗಳಲ್ಲಿ ಅಡಕವಾಗಿರುವ ಮಹತ್ತರ ವಿಷಯಗಳು ಮಕ್ಕಳಿಗೆ ತಿಳಿಯುವುದೇ ಇಲ್ಲ.

ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲೇಖನವನ್ನು ಓದಿ ಕೆಲವೊಮ್ಮೆ ನಾನು ಲೇಖಕರಿಗೆ ಶುಭಾಶಯ ತಿಳಿಸಲು ಮುಂದಾದಾಗ, ಅವರು ನನಗೆ ಒಂದು ವಂದನೆಯನ್ನೂ ತಿಳಿಸದೇ ಇದ್ದುದು ನನ್ನ ಮನಸ್ಸಿಗೆ ನೋವು ತಂದಿದೆ. ಇನ್ನು ಕೆಲವರಿಗೆ ನಾನು ಪತ್ರಿಕೆಯಲ್ಲಿ ಓದಿದ ಮುಖ್ಯ ಬರಹವೊಂದರ ಬಗೆಗೆ ತಿಳಿಸಿದರೆ, ‘ಅದನ್ನು ನಮ್ಮ ಪಕ್ಕದ ಮನೆಯವರು ತರಿಸುತ್ತಾರೆ. ಅಲ್ಲಿ ನೋಡಿಕೊಳ್ಳುತ್ತೇನೆ’ ಎನ್ನುವವರನ್ನೂ ಗಮನಿಸಿದ್ದೇನೆ. ಇದು ಸರಿಯಲ್ಲ. ಪ್ರತಿಯೊಬ್ಬರೂ ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದಿ ಪ್ರೋತ್ಸಾಹಿಸುವ ರೂಢಿಯನ್ನು ಬೆಳೆಸಿಕೊಳ್ಳಬೇಕು.

ಎ.ಕೆ.ಅನಂತಮೂರ್ತಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.