ಹಮ್ಮು ಬಂತು!

‘ಗಗನಚುಂಬಿ ಸ್ಲಮ್ಮು’ ಓದಿದಾಗ ಬಂತು ಹಮ್ಮು ಬಿಮ್ಮು. ಬೆಂಗಳೂರು ಮುಂದೆ ಈ ರೀತಿ ಆಗುವುದರಲ್ಲಿ ಅನುಮಾನ ಇಲ್ಲ. ಆದರೂ, ಅಲ್ಲಿ ವಾಸ ಮಾಡುವವರ ಗ(ಸ್ಥಿ)ತಿ! ‘ದೈವದಲ್ಲಿ ಮಣ್ಣಾದವರು’ ಅರ್ಥಗರ್ಭಿತ ಕಥೆ. ‘ಪಾದುಕಾ ಪುರಾಣ’ ಒಮ್ಮೆ ಎಲ್ಲೋ ಓದಿದ ನೆನಪು. ‘ಆರಂಭ’ ಕವಿತೆ ಓದಿ ಯೋಚನೆ ಶುರುವಾಯ್ತು! ‘ಊಟದ ಡಬ್ಬಿ ಮೇಲಿನ ನಾಯಿ’ ಬರಹವು ‘ಎಚ್.ಎಂ.ವಿ.’ (His Masters Voice) ಎಂಬ ನಾಯಿಯ ಕಥೆಯ ನೆನಪನ್ನು ಮರುಕಳಿಸಿತು. ‘ವಾನರರ ಊಟದ ಸಮಯ’ ರೋಮಾಂಚನ ನೀಡಿತು. ‘ಸಲಿಲಂ...’ ರಾಗ ಪರಿಚಯ ಮಾಡಿಸಿತು.

-ಅ. ಮೃತ್ಯುಂಜಯ, ಪಾಂಡವಪುರ

ಮಧುರ ಕವಿತೆ

ಎಚ್.ಎಸ್. ವೆಂಕಟೇಶಮೂರ್ತಿ ರಚಿಸಿರುವ ‘ಆರಂಭ’ ಕವಿತೆ ಮಧುರವಾಗಿದೆ. ಜೀವನದ ಸತ್ಯಗಳು ಇದರಲ್ಲಿವೆ.

- ಸಂತೋಷ ಜಾಬೀನ, ಸುಲೇಪೇಟೆ

ಮಾದರಿ ಕಾರ್ಯ

‘ವಾನರರ ಊಟದ ಸಮಯ’ ಬರಹದಲ್ಲಿ ಬಂದಿರುವ ಝಜಾರಾಮ್ ಧರ್ಮಜಿ ಸಂತ್ ಅವರು ಮಾಡುತ್ತಿರುವ ಕಾರ್ಯ ಇತರರಿಗೆ ಮಾದರಿ. ಈ ಕಾಲದಲ್ಲಿ ಮನುಷ್ಯನಿಗೆ ಒಂದು ಹೊತ್ತಿನ ಊಟ ಹಾಕಲು ಹಿಂಜರಿಯುವ ಜನ ಇದ್ದಾರೆ. ಆದರೆ ಸಂತ್ ಅವರು ನೂರಾರು ಮಂಗಗಳಿಗೆ ವಿಧವಿಧವಾದ ಆಹಾರ ತಂದು ಹಾಕುತ್ತಾರೆ! ಇಂಥ ಒಂದು ಮಹಾನ್ ಕಾರ್ಯ ಗುರುತಿಸಿ, ಅದರ ಬಗ್ಗೆ ಬರಹ ಪ್ರಕಟಿಸಿದ್ದೀರಿ. ಅವರ ಕಾರ್ಯಗಳು ಇತರರಿಗೆ ಮಾನವೀಯತೆಯ ಪಾಠ ಕಲಿಯಲು ಸಹಕಾರಿ.

- ಸಂತೋಷ ಕುಮಾರ್ ಎಚ್.ಕೆ., ಸಿರುಗುಪ್ಪ

ಬಲಿದಾನ ನೆನಪಿಸುವಂತೆ...

‘ಭಾನುವಾರದ ಪುರವಣಿ’ ಅತ್ಯಂತ ಉತ್ಕೃಷ್ಟ ಲೇಖನಗಳೊಂದಿಗೆ ಮೂಡಿಬರುತ್ತಿರುವುದು ಸಂತಸ ತಂದಿದೆ. ನಾಗರಾಜ್ ಕೋರಿ ಬರೆದ ‘ದೈವದಲ್ಲಿ ಮಣ್ಣಾದವರು’ ಕಥೆಯು ಈಗ ನಮ್ಮ ಮಧ್ಯದಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೌಢ್ಯವನ್ನು ಅತ್ಯಂತ ವಿಡಂಬನಾತ್ಮಕವಾಗಿ ಚಿತ್ರಿಸಿದೆ. ಮೌಢ್ಯಕ್ಕೆ ಬಲಿಯಾದ ತಾಯಿ ಮತ್ತು ಮಗನ ಚಿತ್ರಣವು ವಚನ ಚಳವಳಿಯ ಶರಣರ ಬಲಿದಾನ ನೆನಪಿಸುವಂತಿದೆ.

-ರುದ್ರೇಶ್ ಕಿತ್ತೂರ, ಮುದ್ದೇಬಿಹಾಳ

ಅವಶ್ಯಕ ಮಾಹಿತಿ ಕೊಡಿ

ಭಾನುವಾರದ ಪುರವಣಿ ಅದ್ಭುತ. ನಾನು ಯಾವಾಗಲೂ ಪ್ರಜಾವಾಣಿ ಓದಲು ಇಷ್ಟಪಡುತ್ತೇನೆ. ಒಂದು ಮಾತು. ಉಳಿದ ದಿನಗಳಲ್ಲಿ ಸಿನಿಮಾ ಕುರಿತಂತೆ ಬಹಳ ಮಾಹಿತಿ ಇರುತ್ತದೆ. ಅದರ ಬದಲು ಅವಶ್ಯಕ ಮಾಹಿತಿ ನೀಡಿ. - ಈರಣ್ಣಾ ಬ. ತಟ್ಟಿಮನಿ, ನೇಗಿನಹಾಳ

ಜನ ಎಚ್ಚೆತ್ತುಕೊಳ್ಳಲಿ

‘ದೈವದಲ್ಲಿ ಮಣ್ಣಾದವರು’ ಕಥೆಯಲ್ಲಿ ಮೂಢನಂಬಿಕೆಯ ಒಂದು ತುಣುಕನ್ನು ಬಿಂಬಿಸಲಾಗಿದೆ. ಇಲ್ಲಿನ ಜನರು ಮಲ್ಲೇಶಿ ಹೇಳುತ್ತಿರುವ ನೈಜ ಸತ್ಯವನ್ನು ನಂಬದೆ ಪುರೋಹಿತರ ಮಾತು ನಂಬಿದ್ದು ಶೋಚನೀಯ. ಜನರಿಗೆ ದೇವರ ಮೇಲೆ ಭಕ್ತಿ ಇರಬೇಕು, ಆದರೆ ಭಯ ಇರಬಾರದು. ಒಂದು ವೇಳೆ ಭಯ, ಭಕ್ತಿ ಎರಡೂ ಇದ್ದರೆ ಈ ರೀತಿಯ ಮೂಢನಂಬಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಇದು ಸಮಾಜಕ್ಕೆ ಕಂಟಕ. ಈಗಲಾದರೂ ಜನ ಎಚ್ಚೆತ್ತು, ಈ ರೀತಿಯ ಕಥೆಗಳನ್ನು ಓದಿ ಸಮಾಜದ ಏಳಿಗೆಗೆ ಶ್ರಮಿಸಬೇಕು.

-ಆರ್.ಪೂಜಿತಾ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.