ಝೀ ಕನ್ನಡ ಟಿ.ವಿ. ಚಾನೆಲ್ನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನಚರಿತ್ರೆಯು ಧಾರಾವಾಹಿ ರೂಪದಲ್ಲಿ ಪ್ರಸಾರವಾಗಲಿರುವುದು ಸ್ವಾಗತಾರ್ಹ. ಅಂಬೇಡ್ಕರ್ ಅವರ ಜೀವನಾನುಭವವು ಇತರರಿಗೆ ಮಾದರಿ. ಅವರ ವಿಚಾರಗಳು ಹಾಗೂ ಕೊಡುಗೆಗಳನ್ನು ಜನಸಾಮಾನ್ಯರು ತಿಳಿಯಬೇಕು.

‘ಅಂಬೇಡ್ಕರ್ ಅಂದರೆ ಒಬ್ಬ ವ್ಯಕ್ತಿಯಲ್ಲ, ಅವರೊಂದು ವ್ಯವಸ್ಥೆ ಇದ್ದಂತೆ’ ಎಂದು ನನ್ನ ಗುರುಗಳು ಹೇಳುತ್ತಾರೆ. ಅಂಬೇಡ್ಕರ್ ಅವರ ಬಗ್ಗೆ ಪೂರ್ವಗ್ರಹಗಳನ್ನು ಹೊಂದಿರುವವರು ಈ ಧಾರಾವಾಹಿಯನ್ನು ವೀಕ್ಷಿಸುವ ಮೂಲಕ ತಮ್ಮನ್ನು ತಾವು ಪರಿವರ್ತಿಸಿಕೊಳ್ಳಲು ಪ್ರಯತ್ನಿಸಿದರೆ ಒಳ್ಳೆಯದು.

ಈಗಾಗಲೇ ಹಿಂದಿಯಲ್ಲಿ ಪ್ರಸಾರವಾಗಿರುವ ಧಾರಾವಾಹಿಯು ಈಗ ಕನ್ನಡದಲ್ಲಿ ತೆರೆಗೆ ಬರುತ್ತಿರುವುದು ಖುಷಿಯ ವಿಚಾರ.

–ಲಕ್ಷ್ಮೀಕಾಂತ ಗೋಡಬೋಲೆ, ವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.