ಎಂಜಿನಿಯರಿಂಗ್ ಪದವೀಧರರು ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಗೆ ಸೂಕ್ತರೋ ಅಲ್ಲವೋ ಅನ್ನುವ ಮಾತು ನಂತರ ಇರಲಿ. ಮೊದಲು ಶಿಕ್ಷಕ ವೃತ್ತಿಗೆ ಬೇಕಾದ ಮಾನದಂಡ, ತ್ಯಾಗ, ಸಮರ್ಪಣಾ ಮನೋಭಾವ ಆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯಲ್ಲಿ ಇದೆಯೇ ಎಂಬುದನ್ನು ಗಮನಿಸಬೇಕು. ಹಾಗೊಮ್ಮೆ ಈ ಎಲ್ಲ ಗುಣಗಳು ಅವರಲ್ಲಿ ಇದ್ದಿದ್ದೇ ಆದರೆ, ಅವರು ಯಾವ ಶೈಕ್ಷಣಿಕ ಹಿನ್ನೆಲೆಯಿಂದ ಬಂದಿದ್ದರೂ ಸರಿ, ಶಿಕ್ಷಕರಾಗಲು ಅರ್ಹರು. ಹೀಗಾಗಿ, ಶಿಕ್ಷಕರಾಗಲು ಸಂಬಂಧಿಸಿದ ಪದವಿ ಪತ್ರಗಳಿದ್ದರಷ್ಟೇ ಸಾಲದು, ಆ ವೃತ್ತಿಯ ಬಗ್ಗೆ ಅತೀವ ಒಲವು ಇರಬೇಕಾದುದು ಅತ್ಯಗತ್ಯ.

ಶಿಕ್ಷಕ ವೃತ್ತಿ ಕೇವಲ ವೃತ್ತಿಯಷ್ಟೇ ಅಲ್ಲ, ಅದೊಂದು ಪವಿತ್ರ ಕಾಯಕ. ಎಲ್ಲೂ ಸಲ್ಲದವರು ಇಲ್ಲಿ ಸೇರಿ ಈ ವೃತ್ತಿಯ ಗುಣಮಟ್ಟವನ್ನು ಕಳಪೆಗೊಳಿಸುವುದಕ್ಕಿಂತ, ಸಲ್ಲುವವರು ಯಾರೇ ಆಗಿರಲಿ ಇಲ್ಲಿ ಸೇರಿ, ಈ ವೃತ್ತಿಯ ಘನತೆಯನ್ನು ಹೆಚ್ಚಿಸಬೇಕು.

–ಮುಹಮ್ಮದ್ ಯೂನುಸ್ ಸಾರವಾನ್, ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.