ಮಂಗಳೂರಿನಲ್ಲಿ ರ‍್ಯಾಗಿಂಗ್ ಆರೋಪದಡಿ ಇತ್ತೀಚೆಗೆ 18 ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಷ್ಟೇ ತಿಳಿವಳಿಕೆ ಹೇಳಿದರೂ ರ‍್ಯಾಗಿಂಗ್ ಪ್ರಸಂಗಗಳು ನಿಂತಿಲ್ಲ. ಕೆಲವೊಮ್ಮೆ ಬೆಳಕಿಗೆ ಬಾರದಂತೆ ಅವುಗಳನ್ನು ಮರೆಮಾಚಲಾಗುತ್ತಿದೆ. ಕೆಲವು ಪ್ರಸಿದ್ಧ ಕಾಲೇಜುಗಳು ಮತ್ತು ಸಂಸ್ಥೆಗಳು ರ‍್ಯಾಗಿಂಗ್‌ನ ಭಯಾನಕ ಇತಿಹಾಸವನ್ನು ಹೊಂದಿವೆ. ನೈತಿಕ ಮೌಲ್ಯಗಳು ಇಲ್ಲವಾಗಿರುವುದು ಮತ್ತು ಶಿಸ್ತಿನ ಕೊರತೆ ಇದಕ್ಕೆ ಮುಖ್ಯ ಕಾರಣ. ಹೊಸಬರನ್ನು ಸ್ವಾಗತಿಸುವ ನೆಪದಲ್ಲಿ ಸೀನಿಯರ್ ವಿದ್ಯಾರ್ಥಿಗಳ ಕೀಟಲೆ, ಚೆಲ್ಲಾಟದ ಪರಿಯಿಂದ ಕಿರಿಯ, ಸೌಮ್ಯ ಸ್ವಭಾವದ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಇದು ವಿಪರೀತಕ್ಕೆ ಹೋಗಿ ಅವರು ಪ್ರಾಣವನ್ನು ಕಳೆದುಕೊಂಡಿರುವುದೂ ಇದೆ. ರ‍್ಯಾಗಿಂಗ್ ವಿರುದ್ಧದ ಕಾನೂನುಗಳು ನೆಪಮಾತ್ರಕ್ಕಷ್ಟೇ ಇವೆಯೇನೋ ಎಂಬ ಅನುಮಾನ ಬರುವುದು ಸಹಜ. ಶೈಕ್ಷಣಿಕ ವಾತಾವರಣದ ಮೇಲೆ ಭಯಾನಕ ಪರಿಣಾಮ ಬೀರುವ ರ‍್ಯಾಗಿಂಗ್ ವಿರುದ್ಧ ಕಟ್ಟುನಿಟ್ಟಾದ ಕ್ರಮ ಅಗತ್ಯ. ಇದಲ್ಲದೆ, ಪಠ್ಯಕ್ರಮದ ಭಾಗವಾಗಿ ಬಲವಾದ ನೈತಿಕ ಶಿಕ್ಷಣ, ಸಹಾನುಭೂತಿ ಮತ್ತು ಸಹಿಷ್ಣುತೆಯ ಮೌಲ್ಯಗಳ ಪರಿಚಯವು ರ‍್ಯಾಗಿಂಗ್ ಪಿಡುಗಿನ ವಿರುದ್ಧದ ಒಂದು ಆರಂಭಿಕ ಕ್ರಮವಾಗ ಬಹುದು.

- ಪ್ರವೀಣ ನಾಗಪ್ಪ ಯಲವಿಗಿ,ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.