ಬಿಎಂಶ್ರೀ ಪ್ರತಿಷ್ಠಾನಕ್ಕೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ) ₹ 2.97 ಲಕ್ಷ ಮಾಸಿಕ ನೆಲಬಾಡಿಗೆ ನಿಗದಿಪಡಿಸಿರುವುದನ್ನು ತಿಳಿದು ಕಳವಳವಾಯಿತು.

ಪ್ರತಿಷ್ಠಾನದ ಗ್ರಂಥಾಲಯ ಮೊದಲಾದವು ಸಂಶೋಧಕರಿಗೆ, ಗಂಭೀರ ಸಾಹಿತ್ಯ– ಸಂಸ್ಕೃತಿ ಅಧ್ಯಯನಕಾರರಿಗೆ ಅತಿ ಉಪಯುಕ್ತವಾಗಿವೆ. ಅಪರೂಪದ ಹಲವು ಪುಸ್ತಕಗಳು ಅಲ್ಲಿವೆ. ಅಲ್ಲಿ ನಡೆಯುವ ಕಾರ್ಯಕ್ರಮಗಳೂ ಸಾಹಿತ್ಯ, ಸಾಂಸ್ಕೃತಿಕ ಮಹತ್ವದವು. ಸಂಸ್ಕೃತಿ ಬಗ್ಗೆ ಬಹಳ ಮಾತನಾಡುವ ಮಂತ್ರಿಗಳಿಗೆ ಇದು ತಿಳಿಯಬೇಕಿತ್ತು.

ತಿಂಗಳಿಗೆ ಲಕ್ಷಗಟ್ಟಲೆ ನೆಲಬಾಡಿಗೆಯನ್ನು ಸರ್ಕಾರಕ್ಕೆ ಕಟ್ಟಿ ಇಂತಹ ಸಾಂಸ್ಕೃತಿಕ ಅಧ್ಯಯನ ಸಂಸ್ಥೆಗಳನ್ನು ನಡೆಸಲು ಸಾಧ್ಯವಿಲ್ಲ. ಈ ರೀತಿಯ ಸಂಸ್ಥೆಗಳನ್ನು ಸಹಾಯಧನ ನೀಡಿ ನಡೆಸುವುದು ಸರ್ಕಾರದ ಜವಾಬ್ದಾರಿ. ಬಿಬಿಎಂಪಿ ಅಧಿಕಾರಿಗಳು ಇಂತಹ ಸಂಸ್ಥೆಗಳ ವಿಚಾರದಲ್ಲಿ ಮುಖ್ಯಮಂತ್ರಿಯವರ ಆದೇಶವನ್ನೂ ಪಾಲಿಸದಿದ್ದಾಗ, ತಪ್ಪು ಮಾಡುತ್ತಿರುವ ಅಧಿಕಾರಿಗಳ ಕಿವಿ ಹಿಂಡಿ ಸರಿಯಾಗಿ ಕೆಲಸ ನಡೆಯುವಂತೆ ಮಾಡುವ ಜವಾಬ್ದಾರಿ ಸಂಬಂಧಿಸಿದ ಮಂತ್ರಿಗಳ ಮೇಲಿರುತ್ತದೆ. ಆದರೆ ಅವರಿಗೆ ಈ ರೀತಿಯ ಕೆಲಸಗಳು ಮಹತ್ವವಾದವು ಎಂಬ ನಂಬಿಕೆ ಇರಬೇಕು ಮತ್ತು ಅವರು ಇಂತಹ ವರದಿಗಳನ್ನು ಓದಿ ಕಾರ್ಯಪ್ರವೃತ್ತರಾಗಬಲ್ಲವರೂ ಆಗಿರಬೇಕು.
-ಎಸ್.ಆರ್.ವಿಜಯಶಂಕರ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.