ಟಿ.ಎಂ.ಕೃಷ್ಣ ಅವರ ‘ತ್ಯಾಗರಾಜರು ಚಿತ್ರಿಸಿದ ರಾಮ’ ಲೇಖನ (ಪ್ರ.ವಾ., ಆ. 17) ಮೂರು ಪ್ರಮುಖ ಕಾರಣಗಳಿಗಾಗಿ ಮನಮುಟ್ಟುವಂಥದ್ದು.

ಮೊದಲನೆಯದು, ಈ ಬರಹವು ಮಹಾತ್ಮ ಗಾಂಧಿಯವರ ಪ್ರತಿಭಾವಂತ ಮೊಮ್ಮಗ (‘ಸೀತಾಸ್ ಕಿಚನ್’ ಕೃತಿಯ ಕರ್ತೃ) ರಾಮಚಂದ್ರ ಗಾಂಧಿ ಅವರ ಪ್ರಸಿದ್ಧ ಮಾತೊಂದನ್ನು- ‘ರಾಮ ಹುಟ್ಟಿದ್ದುಅಯೋಧ್ಯೆಯಲ್ಲಲ್ಲ, ಗಾಂಧಿ ಸಾಯುವಾಗ ಅವರ ನಾಲಗೆಯಲ್ಲಿ’- ಮಗದೊಂದು ರೀತಿಯಲ್ಲಿ ನೆನಪಿಸಿದ್ದಕ್ಕಾಗಿ.

ಎರಡನೆಯದು, ಆಧ್ಯಾತ್ಮಿಕ ತಿರುಳಿಲ್ಲದ, ದಿವ್ಯದ ಹಂಬಲವಿಲ್ಲದ ಯಾವ ಕಲೆಯಾದರೂ ಅದು ಕರುಳಿಲ್ಲದ ಕ್ಷಣಮಾತ್ರದ ಚಮತ್ಕಾರವಷ್ಟೇ ಎಂಬ ಸತ್ಯವನ್ನು ಅಧಿಕಾರದ ಮುಖಕ್ಕೆ ಅದು ನುಡಿಯುತ್ತಿದೆ ಎಂಬುದು. ಮೂರನೆಯದು, ಈ ಲೇಖನದ ಕನ್ನಡ ತರ್ಜುಮೆಯ ಸೊಬಗು, ಪ್ರೌಢಿಮೆ ಹಾಗೂ ಲಾಲಿತ್ಯ.

-ಎಚ್.ಪಟ್ಟಾಭಿರಾಮ ಸೋಮಯಾಜಿ,ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.