ದೇಶದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿಲ್ಲ, ಹೀಗಾಗಿ ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿ ಭಾವಚಿತ್ರದ ಜೊತೆಗೆ ಲಕ್ಷ್ಮಿದೇವಿ, ಗಣೇಶನ ಚಿತ್ರಗಳನ್ನು ಹಾಕಬೇಕೆಂಬ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಪರ– ವಿರೋಧದ ಚರ್ಚೆಗೆ ವಸ್ತುವಾಗಿದೆ. ದೇವತೆಗಳ ಚಿತ್ರ ಹಾಕುವುದೋ ಬಿಡುವುದೋ ಎಂಬ ವಿಚಾರ ಒತ್ತಟ್ಟಿಗಿರಲಿ. ಆದರೆ, ಇನ್ನು ಮುಂದೆ ಅಚ್ಚಾಗುವ ಎಲ್ಲ ನೋಟುಗಳಲ್ಲೂ ಆ ನೋಟಿನ ತೀರುವಳಿ ದಿನಾಂಕ (ಎಕ್ಸ್ಪೈರಿ ಡೇಟ್) ಮುದ್ರಣಗೊಳ್ಳಲಿ. ಆಗ ಭಾರಿ ನೋಟುಗಳ ಅನವಶ್ಯಕ ಸಂಗ್ರಹ ನಿಲ್ಲುತ್ತದೆ. ಜೊತೆಗೆ ಲಂಚ ಪಡೆದ ಹಣ ಕೂಡಿಟ್ಟು ಕೊಳೆಯುವುದೂ ತಪ್ಪುತ್ತದೆ. ಕಪ್ಪುಹಣದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ನಗದು ಚಲಾವಣೆಯೂ ನಿಂತು ಡಿಜಿಟಲ್ ವಹಿವಾಟು ಉತ್ತಮಗೊಳ್ಳುತ್ತದೆ. ಆರ್ಬಿಐ ಮತ್ತು ಕೇಂದ್ರ ಸರ್ಕಾರ ಈ ಕುರಿತು ಚಿಂತಿಸಿ ಜಾರಿಗೆ ತರಲಿ.

-ಪತ್ತಂಗಿ ಎಸ್. ಮುರಳಿ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.