ರೆಸಾರ್ಟ್ಗಳು ಸುರಕ್ಷತಾ ನಿಯಮ ಪಾಲಿಸಲಿ

ಮಂಗಳೂರಿನ ಸೋಮೇಶ್ವರದ ರೆಸಾರ್ಟ್ವೊಂದರ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಕಾಲೇಜೊಂದರ ಮೂವರು ಯುವತಿಯರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಯುವತಿಯರ ಸಾವಿಗೆ ರೆಸಾರ್ಟ್ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂಬುದು ಪೊಲೀಸ್ ಆಯುಕ್ತರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಈಜುಕೊಳದ ಬಳಿ ಯಾವುದೇ ಜೀವರಕ್ಷಕ ಸಿಬ್ಬಂದಿ ಇರಲಿಲ್ಲ. ಈಜು ಬಾರದವರಿಗೆ ಜೀವರಕ್ಷಕ ಜಾಕೆಟ್ ಒದಗಿಸಬೇಕಿತ್ತು. ಅಲ್ಲದೆ ಈಜುಕೊಳದ ಮಧ್ಯ
ಭಾಗದಲ್ಲಿ ಆರು ಅಡಿ ಆಳ ಇರುವ ಬಗ್ಗೆ ಸೂಚನಾ ಫಲಕವಿರಲಿಲ್ಲ. ಇದರ ಅರಿವಿರದ ಯುವತಿಯರು ಈಜುಕೊಳದ ಮಧ್ಯಭಾಗಕ್ಕೆ ಬಂದು ಮುಳುಗಿ ಪ್ರಾಣ ಕಳೆದುಕೊಳ್ಳುವಂತೆ ಆಗಿದೆ.

ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೆ, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸದೆ, ಸುರಕ್ಷಾ ಸಾಧನಗಳನ್ನು ಒದಗಿಸದೆ ಇರುವುದೇ ದುರಂತಕ್ಕೆ ಕಾರಣ. ತಪ್ಪು ಎಸಗಿದ ರೆಸಾರ್ಟ್ ಮಾಲೀಕರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅಲ್ಲದೆ ರಾಜ್ಯದಲ್ಲಿರುವ ಎಲ್ಲಾ ರೆಸಾರ್ಟ್ ಮಾಲೀಕರಿಗೆ ಎಲ್ಲಾ ಬಗೆಯ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಸೂಚನೆ ನೀಡಬೇಕು.

-ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

ವೆಂಟಿಲೇಟರ್ ಖರೀದಿ: ನಡೆಯಲಿ ಆಳವಾದ ತನಿಖೆ

ಕೋವಿಡ್ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ವೆಂಟಿಲೇಟರ್ಗಳನ್ನು ಖರೀದಿಸಿರುವ ಕುರಿತು ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹ ಆಯೋಗ ನೀಡಿರುವ ವಿವರ (ಪ್ರ.ವಾ., ನ. 18) ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಇಂಗ್ಲಿಷ್ನಲ್ಲಿ ಒಂದು ಮಾತಿದೆ ‘ದ ಬಕ್ ಸ್ಟಾಪ್ಸ್ ಹಿಯರ್’. ಅದರರ್ಥ– ಅಂತಿಮವಾಗಿ ಯಾರೋ ಒಬ್ಬರು ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ, ಇನ್ನೊಬ್ಬರಿಗೆ ಅದನ್ನು ವರ್ಗಾಯಿಸುವಂತಿಲ್ಲ. ಕೋವಿಡ್ ಅವಧಿಯಲ್ಲಿ ಅಕ್ರಮಗಳಾಗಿದ್ದರೆ ಅದರ ಹೊಣೆಯನ್ನು ಆರೋಗ್ಯ ಸಚಿವರಾಗಿದ್ದವರು, ಅಂದಿನ ಮುಖ್ಯಮಂತ್ರಿ ಹೊರಬೇಕಾ
ಗುತ್ತದೆ. ಒಂದು ಹಂತದಲ್ಲಿ ಇಬ್ಬರು ಸಚಿವರು (ಶ್ರೀರಾಮುಲು, ಸುಧಾಕರ್) ಈ ವಿಷಯವನ್ನು ನೋಡಿಕೊಳ್ಳುತ್ತಿ
ದ್ದರು. ‘ನಾವು ಜೀವಗಳನ್ನು ಉಳಿಸಿದೆವು, ಆದರೆ ಈಗ ನಮ್ಮ ಮೇಲೇ ಆಪಾದನೆ ಹೊರಿಸುತ್ತಿದ್ದಾರೆ’ ಎಂದು
ಮುಖ್ಯಮಂತ್ರಿಯಾಗಿದ್ದವರು ಹೇಳಿದರೆ, ‘ರಾಜಕೀಯ ದುರುದ್ದೇಶದಿಂದ ಹಳೆಯ ವಿಷಯಗಳನ್ನು ಕೆದಕುತ್ತಿದ್ದಾರೆ’ ಎಂದು ಸಚಿವರಾಗಿದ್ದವರು ಹೇಳಿದ್ದಾರೆ. ಸಂಬಂಧಿಸಿದ ಇನ್ನೊಬ್ಬರು ಅದೇಕೋ ಮೌನವಾಗಿದ್ದಾರೆ.

ಕೊರೊನಾ ಎಲ್ಲರಲ್ಲೂ ಭಯ ಮೂಡಿಸಿತ್ತು. ಅದನ್ನು ಎದುರಿಸುವುದರಲ್ಲಿ ಸರ್ಕಾರಗಳ ಕಡೆಯಿಂದ ಕೆಲವು ತಪ್ಪುಗಳಾದವು. ‘ಮಾರಿ’ ತೊಲಗಿತೆಂದು ಆ ತಪ್ಪುಗಳನ್ನೆಲ್ಲ ಕ್ಷಮಿಸಿ ಮರೆತುಬಿಡಬೇಕೆ? ಕೆಲವು ಕಂಪನಿಗಳು ಹೇಗೆ, ಯಾರ ಮೂಲಕ ಪೂರೈಕೆ ಆದೇಶ ಪಡೆದವು? ಆ ಪರಿಸ್ಥಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪಾರದರ್ಶಕತೆಯನ್ನು ಪಾಲಿಸಲಾಗಿತ್ತೇ? ಕಾಗದಪತ್ರಗಳನ್ನು ಕನಿಷ್ಠ ಪ್ರಮಾಣದಲ್ಲಾದರೂ ಪಡೆದು ಮುಂದಿನ ಪರಿಶೀಲನೆಗಾಗಿ ಸಂರಕ್ಷಿಸಿ ಇಡಲಾಯಿತೇ? ಇವೆಲ್ಲ ತನಿಖೆಗೆ ಒಳಪಟ್ಟರೆ ತಪ್ಪಿಲ್ಲ. ಕ್ರಿಮಿನಲ್ ಅಪರಾಧಕ್ಕೆ ಸಮಯಮಿತಿ ಇಲ್ಲ. ತ್ವರಿತಗತಿಯಲ್ಲಿ ವಿಷಯದ ಆಳಕ್ಕೆ ಹೋಗಿ ತನಿಖೆ ನಡೆಸಬೇಕು. ಆಡಳಿತ ನಡೆಸಿದ ಪಕ್ಷ, ವ್ಯಕ್ತಿಗಳು ಬದಲಾದರೇನು? ಸಾರ್ವಜನಿಕ ಹಣದ ಅಪವ್ಯಯ, ಪೋಲು ಆಗಿದ್ದರೆ ಸಂಬಂಧಿಸಿದ ಎಲ್ಲರ ಹೆಸರುಗಳೂ ಹೊರಗೆ ಬರಬೇಕು.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಗುಣಾತ್ಮಕ ಕೆಲಸದ ಅವಧಿಗೆ ಸಿಗಲಿ ಆದ್ಯತೆ

ಯುವಜನ ವಾರದಲ್ಲಿ 70 ತಾಸು ಕೆಲಸ ಮಾಡುವ ಬಗ್ಗೆ ಇನ್ಫೊಸಿಸ್ನ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಹೇಳಿಕೆ ಕುರಿತು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪ್ರಧಾನಿ ವಾರಕ್ಕೆ 100 ಗಂಟೆ ಕೆಲಸ ಮಾಡುವ ಉದಾಹರಣೆಯನ್ನೂ ಅವರು ನೀಡಿದ್ದಾರೆ. ಕೆಲವು ವಲಯಗಳಲ್ಲಿ ಯುವಜನ ಈಗಾಗಲೇ ನಿಗದಿತ ಅವಧಿಗಿಂತ ಹೆಚ್ಚು ಸಮಯ ಮತ್ತು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾ, ನಿತ್ಯ ಹೈರಾಣ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಇನ್ನು ಅಧಿಕೃತವಾಗಿ ದಿನಾಲು ಅವರು 14 ತಾಸು ಕೆಲಸ ನಿರ್ವಹಿಸುವುದಾದರೆ ಅವರ ಜೀವನೋತ್ಸಾಹವೇ ಇಂಗಿ ಹೋಗಬಹುದು. ಸಾಂಸಾರಿಕ ಜವಾಬ್ದಾರಿ, ನೋವು, ನಲಿವು, ಸರಸ, ವಿರಸ, ವಿಹಾರ, ವಿರಾಮಕ್ಕೆ ಅವರಲ್ಲಿ ಯಾವ ಉತ್ಸಾಹವೂ ಉಳಿಯಲಿಕ್ಕಿಲ್ಲ.

ಯುವ ವಯಸ್ಸಿನಲ್ಲಿ ದುಡಿಮೆಯೊಂದಿಗೆ ನಿಭಾಯಿಸಬೇಕಾದ ಹಲವಾರು ವಿಷಯಗಳು ಇರುತ್ತವೆ. ಈಗಾಗಲೇ ಯುವಪೀಳಿಗೆಯಲ್ಲಿ ಮಾನಸಿಕ, ದೈಹಿಕ ಒತ್ತಡದ ಕುರಿತು ಮಾತುಗಳು ಕೇಳಿಬರುತ್ತಿವೆ. ವೃತ್ತಿ ಬದುಕು ಮತ್ತು ಸಾಂಸಾರಿಕ ಬದುಕಿನಲ್ಲಿ ಸಾಮರಸ್ಯ ಇರಲು ಕೆಲಸದ ಅತಿ ಒತ್ತಡ ಸಲ್ಲದು. ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ತುಂಬಾ ಇದೆ. ಇದ್ದವರಿಗೆ ಹೆಚ್ಚು ಒತ್ತಡ ಹಾಕುವುದಕ್ಕಿಂತ, ಹೆಚ್ಚು ಜನರಿಗೆ ಉದ್ಯೋಗ ಒದಗಿಸುವ ಕುರಿತು ಚಿಂತಿಸುವುದು ಒಳಿತು. ಗುಣಾತ್ಮಕ ಕೆಲಸದ ಅವಧಿ ಮತ್ತು ವೈಯಕ್ತಿಕ ಬದುಕು ಎರಡೂ ಮುಖ್ಯ.

-ವೆಂಕಟೇಶ ಮಾಚಕನೂರ, ಧಾರವಾಡ

‘ಮದುವೆ ಭಾಗ್ಯ’ದ ಭರವಸೆ!

ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರಸ್ತೆ, ನೀರು, ರೈಲು ಮಾರ್ಗದಂತಹ ಮೂಲ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡುವುದು ಈಗ ಹಳೆಯ ಸುದ್ದಿ. ‘ಉಚಿತ ಗ್ಯಾರಂಟಿ’ಗಳು ಈಚಿನ ವರ್ಷಗಳಲ್ಲಿ ಈ ಪಟ್ಟಿಗೆ ಸೇರಿವೆ. ಈಗ ಇವೆಲ್ಲವುಗಳನ್ನೂ ನಿವಾಳಿಸಿ ತೆಗೆಯುವಂತೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಎನ್ಸಿಪಿ ಶರದ್ ಪವಾರ್ ಬಣದಿಂದ ಸ್ಪರ್ಧಿಸಿರುವ ಅಭ್ಯರ್ಥಿ ರಾಜೇಸಾಹೇಬ್ ದೇಶಮುಖ್, ತಾವು ಚುನಾವಣೆಯಲ್ಲಿ ಗೆದ್ದರೆ ಅವಿವಾಹಿತರಿಗೆ ‘ಮದುವೆ ಭಾಗ್ಯ’ದ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಈ ಭರವಸೆ ಜನರಲ್ಲಿ ಅತೀವ ಕುತೂಹಲ ಮೂಡಿಸಿದೆ. ಇದು, ರಾಜಕಾರಣಿಗಳು ಸಮಕಾಲೀನ ಸಮಸ್ಯೆಗಳನ್ನು ಹೇಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇನ್ನೊಂದು ನಿದರ್ಶನದಂತೆ ಕಾಣುತ್ತದೆ.

- ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.