ದ್ವಿಚಕ್ರ ವಾಹನಕ್ಕೆ ಜೋತುಬಿದ್ದ ಮುತ್ತಪ್ಪ ಎನ್ನುವ ವೃದ್ಧರನ್ನು ಯುವಕನೊಬ್ಬ ರಸ್ತೆಯಲ್ಲೇ 600 ಮೀಟರ್‌ವರೆಗೆ ಎಳೆದೊಯ್ದ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿ ಕರುಳು ಹಿಚುಕಿದಷ್ಟು ಸಂಕಟವಾಯಿತು. ಇಂದಿನ ಯುವಜನಾಂಗದ ಮನಃಸ್ಥಿತಿ ಅದೆಷ್ಟು ಕ್ರೂರ ಎನಿಸಿತು. ಅವರೇಕೆ ಹೀಗೆ ಹೃದಯಹೀನರಾಗಿ ವರ್ತಿಸುತ್ತಿದ್ದಾರೆ?

ಇದನ್ನೂ ಓದಿ: ವೃದ್ಧನ ಎಳೆದೊಯ್ದಿದ್ದ ಸ್ಕೂಟರ್ ಸವಾರನ ವಿರುದ್ಧ ಎರಡು ಎಫ್ಐಆರ್

ಇತರರಿಗೆ ಪಾಠ ಎನಿಸುವಂತಹ ಕಠಿಣ ಶಿಕ್ಷೆಯನ್ನು ಇಂತಹವರಿಗೆ ನೀಡಬೇಕು. ಕೆಲವು ಯುವಕರು ಹಣ, ಅಧಿಕಾರದ ಕಾರಣದಿಂದಾಗಿ ದುರಹಂಕಾರ ಬೆಳೆಸಿಕೊಂಡಿರುತ್ತಾರೆ. ಅಂಥವರಿಗೆ ರಾಜಕೀಯ ಕೃಪಾಕಟಾಕ್ಷವೂ ಇದ್ದರಂತೂ ಎಂತಹ ದುಷ್ಕೃತ್ಯ ಎಸಗಿದರೂ ಖುಲಾಸೆಯಾಗಿ ಹೊರಬರುತ್ತೇವೆ ಎಂಬ ಭಂಡ ಧೈರ್ಯ ಬಂದುಬಿಡುತ್ತದೆ. ಹೀಗಾಗಿ ಇಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಗೂಂಡಾಪಟ್ಟಿಗೆ ಇವರ ಹೆಸರನ್ನು ಸೇರಿಸಬೇಕು.
–ಲಲಿತಾ ರೆಡ್ಡಿ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.