ಕೇರಳದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಅಮಾಯಕ ಮಹಿಳೆಯರ ನರಬಲಿ ಅತ್ಯಂತ ಹೇಯ ಕೃತ್ಯವಾಗಿದ್ದು, ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಇದು ಶಿಲಾಯುಗವಲ್ಲ. ಅಂತೆಯೇ ಮಧ್ಯಯುಗದಲ್ಲಿ ಯುದ್ಧದ ಸಮಯದಲ್ಲಿ ಇಂತಹವು ಸಾಮಾನ್ಯವಾಗಿದ್ದವು ಎಂಬುದನ್ನು ಇತಿಹಾಸ ನಮಗೆ ತಿಳಿಸುತ್ತದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಮೂಢನಂಬಿಕೆಗಳ ಕಾರಣದಿಂದ ನರಬಲಿ ನೀಡುವುದು ಅನಾಗರಿಕ ವರ್ತನೆಯಾಗಿದೆ. ಕಾಡಿನ ಪ್ರಾಣಿಗಳು ಹಸಿದಾಗ ಮಾತ್ರ ಬೇರೆ ಪ್ರಾಣಿಗಳನ್ನು ಕೊಲ್ಲುತ್ತವೆ, ಆದರೆ ಮನುಷ್ಯ ಮನುಷ್ಯನನ್ನು ಕೊಲ್ಲಲು ಕಾರಣವೇ ಬೇಕಾಗಿಲ್ಲ ಎಂಬಂತಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲು ನರಬಲಿ ಕೊಡಬೇಕೆಂಬ ಕಾಮುಕನ ಮಾತನ್ನು ಕೇಳಿದ ದಂಪತಿಯೂ ಆ ವ್ಯಕ್ತಿಯಷ್ಟೇ ಅಪರಾಧಕ್ಕೆ ಹೊಣೆಗಾರರು.

ಇಂತಹ ವ್ಯಕ್ತಿಗಳನ್ನು ಸಮಾಜವೇ ಬಹಿಷ್ಕರಿಸಬೇಕು. ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಶೀಘ್ರವಾಗಿ ದಂಡನೆ ವಿಧಿಸುವಂತಹ ವ್ಯವಸ್ಥೆಯಾಗಬೇಕು. ಪ್ರಾಥಮಿಕ ಹಂತದ ಶಾಲಾ ಪಠ್ಯದಲ್ಲಿ ನರಬಲಿಯಂತಹ ಮೂಢನಂಬಿಕೆಗಳ ಕುರಿತು ಜಾಗೃತಿ ಮೂಡಿಸುವಂತಹ ಅಂಶಗಳನ್ನು ಆಳವಡಿಸಬೇಕು. ಇದರಿಂದ ಜಾಗೃತ ಸಮಾಜವನ್ನು ನಿರ್ಮಿಸಲು ಸಾಧ್ಯ.

ರಾಸುಮ ಭಟ್,ಚಿಕ್ಕಮಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.