ಒಂದು ಕಾಲದಲ್ಲಿ ಅಂಚೆಯಣ್ಣ ಅಂದರೆ ಸಾರ್ವಜನಿಕ ಬದುಕಿನ ಅವಿಭಾಜ್ಯ ಅಂಗ ಎನಿಸಿದ್ದ.ಅವನು ಹೊತ್ತು ತರುತ್ತಿದ್ದ ಪತ್ರಗಳು, ಟೆಲಿಗ್ರಾಂಗಳು, ಮನಿ ಆರ್ಡರುಗಳು, ಸುಖ– ದುಃಖದ ಸಂದೇಶಗಳು ಜನಮನದಲ್ಲಿ ಅಚ್ಚಳಿಯದೇ ಉಳಿಯುತ್ತಿದ್ದವು. ಆಗ ಕಿಲೊಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲಿ ಅಥವಾ ಬೈಸಿಕಲ್‌ನಲ್ಲಿ ತೆರಳಿ ಅವರು ಕೆಲಸ ಮುಗಿಸುತ್ತಿದ್ದರು. ಸಂಬಳ ಕಡಿಮೆಯಿದ್ದು ಕೆಲಸ ಜಾಸ್ತಿ ಎನ್ನುವಂತಿತ್ತು.

ಆದರೆ ಈಗ ಅಂಚೆ ವ್ಯವಸ್ಥೆ ಸಾಕಷ್ಟು ಬದಲಾಗಿದೆ. ಆಧುನಿಕ ತಂತ್ರಜ್ಞಾನ ನೆರವಾಗಿ ಅವರ ಕೆಲಸದ ಹೊರೆಯನ್ನು ಕೊಂಚ ಕಡಿಮೆ ಮಾಡಿದೆ. ಕಾಲಕಾಲಕ್ಕೆ ಬಡ್ತಿ, ಸಂಬಳ ಹೆಚ್ಚಳ, ಭತ್ಯೆ ಇನ್ನಿತರ ಸೌಲಭ್ಯಗಳನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಆದರೂ ಅಂಚೆ ಇಲಾಖೆಯ ನಾಲ್ವರು ನೌಕರರು ದುರಾಸೆ ಮತ್ತು ಕರ್ತವ್ಯಲೋಪದಿಂದ, ಸಮಾಜಕ್ಕೆ ಕಂಟಕಪ್ರಾಯವಾದ ಮಾದಕವಸ್ತು ಮಾರಾಟ ಜಾಲದಲ್ಲಿ ಸಿಲುಕಿಕೊಂಡಿರುವುದು(ಪ್ರ.ವಾ., ಡಿ. 31) ಅಕ್ಷಮ್ಯ ಅಪರಾಧ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಚಕಾರ ತರುವ ಇಂತಹವರ ವಿರುದ್ಧ ಪೊಲೀಸ್ ಇಲಾಖೆಯು ಕಠಿಣ ಕ್ರಮ ಕೈಗೊಳ್ಳಬೇಕು.

-ಅಶ್ವತ್ಥ ಕಲ್ಲೇದೇವರಹಳ್ಳಿ,ಕಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.